Breaking News
Home / ಕ್ರೈಮ್ ಸುದ್ದಿ / ಕಳ್ಳರ ಕೈ ಚಳಕ ಮೂವತ್ತು ಲಕ್ಷ ರೂ ಮೌಲ್ಯದ ಮೋಬೈಲ್ ಸ್ವಾಹಾ..!

ಕಳ್ಳರ ಕೈ ಚಳಕ ಮೂವತ್ತು ಲಕ್ಷ ರೂ ಮೌಲ್ಯದ ಮೋಬೈಲ್ ಸ್ವಾಹಾ..!

ಬೆಳಗಾವಿ-ಬೆಳಗಾವಿ ನಗರದ  ಮುಜಾವರ ಆರ್ಕಿಡ್ ನಲ್ಲಿರುವ ಸಮ್ ಸಂಗ್ ಹಾಗು ಐಫೋನ  ಶೋರೂಮಗಳ ಶೆಟರ್ ಗಳನ್ನು ಗ್ಯಾಸ ಕಟರ್ ಮೂಲಕ ಕತ್ತರಿಸಿದ ಖದೀಮರು ಸುಮಾರು ಮೂವತ್ತು ಲಕ್ಷ ರೂ ಬೆಲೆಬಾಳುವ ಮೋಬೈಲಗಳನ್ನು ದೋಚಿಕೊಂಡು ಪರಾರಿಯಾದ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ

ಎರಡು ಮೋಬೈಲ ಅಂಗಡಿಗಳನ್ನು ದೋಚಿರುವ ಕಳ್ಳರು ಸುಮಾರು ಹದಿನೈದು ಲಕ್ಷ ರೂಗಳ ಸಮಸಂಗ್ ಮೋಬೈಲ್ ಮತ್ತು ಹದಿನೈದು ಲಕ್ಷ ರೂ ಬೆಲೆಬಾಳುವ ಐ ಫೋನಗಳು ಕಳುವಾಗಿವೆ ಮಂಗಳವಾರ ಬೆಳಗಿನ ಜಾವ ವಾಚಮನ್ ಗಳು ಘಾಡ ನಿದ್ರೆಯಲ್ಲಿರುವಾಗ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ

ಬೆಳಿಗ್ಗೆ ಸ್ಥಳಕ್ಕೆ ಧಾವಿಸಿದ ಎಪಿಎಂಸಿ ಪೋಲಿಸರು ಶ್ವಾನದಳದೊಂದಿಗೆ ಆಗಮಿಸಿ ಪರಶೀಲನೆನಡೆಸಿದರು ಪ್ರಾಥಮಿಕ ಅಂದಾಜಿನ ಪ್ರಕಾರ ೩೦ ಲಕ್ಷ ರೂಗಳ ಮೋಬೈಲಗಳನ್ನು ಕಳ್ಳರು ಸ್ವಾಹಾ ಮಾಡಿದ್ದು ಈ ಘಟನೆಯಿಂದಾಗಿ ಈ ಭಾಗದ ವ್ಯಾಪಾರಿಗಳು ಭಯ ಭೀತರಾಗಿದ್ದಾರೆ

ಬೆಳಗಾವಿ ನಗರದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತದ್ದು ನಗರ ಪೋಲಿಸ್ ಆಯುಕ್ತರು ಈ ಕುರಿತು ಕ್ರಮ ಕೈಗೊಳ್ಳಬೆಕಾಗಿದೆ ಸಿಪಿಐ ಕಾಳಮಿರ್ಚಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ

ಸ್ಥಳ ಪರಶೀಲನೆ ನಡೆಸಿದ ಡಾಗ್ ಸ್ಕ್ವಾಡ ಅಲ್ಲಲ್ಲಿ ಸುತ್ತಾಡಿ ಮನೆಯೊಂದರ ಎದುರು ನಿಂತುಕೊಂಡಿದ್ದು ತನಿಖೆಗೆ ಹೊಸ ಸುಳಿವು ನೀಡಿದೆ

About BGAdmin

Check Also

ಡಾಲ್ಬಿ ಮೇಲಿಂದ ಬಿದ್ದು ಬೆಳಗಾವಿಯ ಯುವಕ ಸಾವು

ಬೆಳಗಾವಿ- ನಗರದಲ್ಲಿ ನಡೆದ ಅಂಬೇಡ್ಕರ್ ಜಯಂತಿ ಉತ್ಸವದ ಮೆರವಣಿಗೆಯಲ್ಲಿ ಆವಘಡ ಸಂಭವಿಸಿದೆ ಡಾಲ್ಬೀ ಮೇಲಿಂದ ಆಯ ತಪ್ಪಿ ಕೆಳಗೆ ಬಿದ್ದು …

Leave a Reply

Your email address will not be published. Required fields are marked *