Breaking News
Home / Breaking News / ಕನ್ನಡದ ಹಬ್ಬದಲ್ಲಿ ಹೋಳಗಿ ಊಟ…!

ಕನ್ನಡದ ಹಬ್ಬದಲ್ಲಿ ಹೋಳಗಿ ಊಟ…!

ಬೆಳಗಾವಿ-ಬೆಳಗಾವಿ ಜಿಲ್ಲೆಯಲ್ಲಿ ಜಯರಾಮ ಅವರು ಜಿಲ್ಲಾಧಿಕಾರಿಗಳಾಗಿ ಬಂದಾಗಿನಿಂದ ಕರ್ನಾಟಕ ರಾಜ್ಯೋತ್ಸವಕ್ಕೆ ಹೊಸ ರೂಪ ಕೊಟ್ಟಿದ್ದಾರೆ ಮೂರು ವರ್ಷದ ಹಿಂದೆ ಆರಂಂಭದಲ್ಲಿ ನಗರಾದ್ಯಂತ ಕನ್ನಡ ನಾಡು ನುಡಿ ನೆಲ ಜಲ ಗಡಿ ಸೇರಿದಂತೆ ಕನ್ನಡ ಸಾಹಿತ್ಯ ಲೋಕದ ಬೆಳವಣಿಗೆಗ ಶ್ರಮಿಸಿದ ಮಹಾಪುರುಷರನ್ನು ಶ್ರಮಿಸು ಸದುದ್ದೇಶದಿಂದ ಕನ್ನಡದ ಮಹಾಪುರುಷರ ಭಾವಚಿತ್ರವನ್ನು ಹೊಂದಿರುವ ಬ್ಯಾನರ್ ಹಚ್ಚುವ ಸಂಪ್ರದಾಯಕ್ಕೆ ಚಾಲನೆ ನೀಡಿದ್ದರು

ಈ ಸಂಪ್ರದಾಯವನ್ನು ಜಿಲ್ಲಾಡಳಿತ ಕಳೆದ ಮೂರು ವರ್ಷಗಳಿಂದ ಮುಂದುವರೆಸಿದೆ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ಎರಡನೇಯ ವರ್ಷ ನಗರದ ಚನ್ನಮ್ಮ ವೃತ್ತದಲ್ಲಿ ರಾಜ್ಯೋತ್ಸವದ ದಿನ ಹೂವಿನ ಸ್ವಾಗತ ಕಮಾನುಗಳನ್ನು ನಿಲ್ಲಿಸಿ ಕನ್ನಡದ ಮೆರವಣಿಗೆಗೆ ಹೊಸ ಕಳೆ ತಂದರು ಕಳೆದ ವರ್ಷದಿಂದ ಹುಕ್ಕೇರಿ ಶ್ರೀಗಳ ಸಹಕಾರದಿಂದ ರಾಜ್ಯೋತ್ಸವದ ದಿನ ಉಟದ ವ್ಯೆವಸ್ಥೆ ಮಾಡಿ ಗಡಿನಾಡ ಕನ್ನಡಿಗರ ಮೆಚ್ಚುಗೆಗ ಪಾತ್ರರಾಗಿದ್ದರು

ಈ ವರ್ಷದ ರಾಜ್ಯೋತ್ಸವದಲ್ಲಿ ಜಿಲ್ಲಾಧಿಕಾರಿ ಎನ್ ಜಯರಾಮ ಅವರು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕನ್ನಡ ನಾಡಿನ ಪ್ರಸಿದ್ಧ ಸಿಲೆಬ್ರಿಟಿಗಳನ್ನು ಬೆಳಗಾವಿಗೆ ಕರೆಸುವ ಪ್ರಯತ್ನಕ್ಕೆ ಜಿಲ್ಲಾಧಿಕಾರಿ ಜಯರಾಮ ಕೈ ಹಾಕಿದ್ದಾರೆ

ಈ ವರ್ಷದ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ ಜನರಿಗೆ ಹುಕ್ಕೇರಿ ಶ್ರೀಗಳ ಸಹಕಾರದಿಂದ ಸುಮಾರು ಹದಿನೈದು ಸಾವಿರ ಜನರಿಗೆ ಹೋಳಗಿ ಊಟದ ವ್ಯೆವಸ್ಥೆ ಮಾಡಿಸಲು ಜಲ್ಲಾಧಿಕಾರಿ ಜೈರಾಮ ಅವರು ಸಿದ್ಧತೆ ನಡೆಸಿದ್ದಾರೆ

About BGAdmin

Check Also

ಬೆಳಗಾವಿಗೆ ಐಐಐಟಿ ಬರುವದನ್ನು ತಪ್ಪಸಿದವರೇ ಸುರೇಶ್ ಅಂಗಡಿ- ಲಕ್ಷ್ಮೀ ಹೆಬ್ಬಾಳಕರ ಆರೋಪ

ಬೆಳಗಾವಿ-ನುಡಿದಂತೆ ನಡೆದಿದ್ದೇನೆ.ಅಲ್ಪಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ,ಲೋಕಸಭಾ ಚುನಾವಣೆ ನನ್ನ ಗೌರವದ …

Leave a Reply

Your email address will not be published. Required fields are marked *