Breaking News
Home / Breaking News / ಬೆಳಗಾವಿ ನಗರದಲ್ಲಿ ರಾಜಧಾನಿಯ ಕಳೆ..ಗೂಟದ ಕಾರುಗಳ ಕಹಳೆ…!

ಬೆಳಗಾವಿ ನಗರದಲ್ಲಿ ರಾಜಧಾನಿಯ ಕಳೆ..ಗೂಟದ ಕಾರುಗಳ ಕಹಳೆ…!

ಬೆಳಗಾವಿ-ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಚಳಿಗಾಲದ ಆಧಿವೇಶನ ಸೋಮವಾರದಿಂದ  ಆರಂಭವಾಯಿತು ರಾಜ್ಯ ಸರ್ಕಾರ ಗಂಟೆ ಮೂಟೆ ಕಟ್ಟಿಕೊಂಡು ಬೆಳಗಾವಿ ನಗರದಲ್ಲಿ ಠಿಖಾನಿ ಹೂಡಿದ್ದು ಬೆಳಗಾವಿ ನಗರಕ್ಕೆ ಈಗ ರಾಜಧಾನಿಯ ಕಳೆ ಬಂದಿದೆ

ಸಚಿವರು,ಶಾಸಕರು ವಿಧಾನ ಪರಿಷತ್ತಿನ ಸದಸ್ಯರು ಹಾಗು ಎಲ್ಲ ಇಲಾಖೆಗಳ ಕಾರ್ಯದರ್ಶಿಗಳು ಸೇತರಿದಂತೆ ಎಲ್ಲ ಜನ ಪ್ರತಿನಿಧಿಗಳು ಈಗ ಬೆಳಗಾವಿ ನಗರಕ್ಕೆ ಆಗಮಿಸಿದ್ದು ನಗರದಲ್ಲಿ ಗೂಟದ ಕಾರುಗಳ ಕಹಳೆ ಮೊಳಗಿದೆ ಅಧಿವೇಶನದ ಮೊದಲ ದಿನ  ಆರಂಭದಲ್ಲಿ ಸೋಮವಾರ ಸದನ ಆರಂಭವಾಗುತ್ತಿದ್ದಂತೆ ಇತ್ತೀಚಿಗೆ ನಿಧನರಾದ ಮಾಜಿ  ಸಚಿವರಾದ ಜಿ. ಬಸವಣ್ಣಪ್ಪ ಹಾಗೂ ಉತ್ತರ ಪ್ರದೇಶದ ಕಾನ್ಪುರದಲ್ಲಿ ರೈಲ್ವೆ ದುರಂತದಲ್ಲಿ ಮಡಿದವರಿಗೆ ಶೃದ್ಧಾಂಜಲಿ ಸಲ್ಲಿಸಿ ಕುಟುಂಬ ವರ್ಗದವರಿಗೆ ಸಾಂತ್ವನ ವ್ಯಕ್ತಪಡಿಸಲಾಯಿತು.

ಸೋಮವಾರ ಬೆಳಿಗ್ಗೆ 11ಕ್ಕೆ ಆರಂಭವಾದ ಅಧಿವೇಶನದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಹಿರಿಯ ಪತ್ರಕರ್ತ ಮೈಸೂರಿನ ಗಿರೀಶ್ ಹಾಗೂ ನವೆಂಬರ್ 5 ರಂದು ನಿಧನರಾದ ಬಾಳೆಹೊನ್ನೂರು ವಿಧಾನಸಭಾ ಕ್ಷೇತ್ರದ ಶಾಸಕ ಜಿ ಬಸವಣ್ಣೆಪ್ಪ ಹಾಗೂ ಶಿರಾ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಕೆ ದಾಸಪ್ಪ ಅವರಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಅದರಂತೆ ರವಿವಾರ ಇಂದೋರ್- ಪಾಟ್ನಾ ಎಕ್ಸಪ್ರೆಸ್ ರೈಲು ದುರಂತದಲ್ಲಿ ಮೃತಪಟ್ಟ 172ಕ್ಕೂ ಹೆಚ್ಚು ಜನತೆಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಮತ್ತು ಇದೇ ದುರಂತದಲ್ಲಿ ಗಾಯಗೊಂಡ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಸಭೆಯಲ್ಲಿ ಆಶಿಸಲಾಯಿತು.
ಅಗಲಿದ ಗಣ್ಯರು ಹಾಗೂ ರೈಲು ದುರಂತದಲ್ಲಿ ಮೃತಪಟ್ಟವರಿಗೆ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದರು. ಅದರಂತೆ ವಿರೋಧ ಪಕ್ಷಗಳ ಪರವಾಗಿ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಹಾಗೂ ಜೆಡಿಎಸ್ ಶಾಸಕ ವೈಎಸ್‍ವಿ ದತ್ತಾ ಸಂತಾಪ ಸೂಚಿಸಿದರು.

About BGAdmin

Check Also

ಬೆಳಗಾವಿಗೆ ಐಐಐಟಿ ಬರುವದನ್ನು ತಪ್ಪಸಿದವರೇ ಸುರೇಶ್ ಅಂಗಡಿ- ಲಕ್ಷ್ಮೀ ಹೆಬ್ಬಾಳಕರ ಆರೋಪ

ಬೆಳಗಾವಿ-ನುಡಿದಂತೆ ನಡೆದಿದ್ದೇನೆ.ಅಲ್ಪಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ,ಲೋಕಸಭಾ ಚುನಾವಣೆ ನನ್ನ ಗೌರವದ …

Leave a Reply

Your email address will not be published. Required fields are marked *