Breaking News
Home / Breaking News / ಸ್ಮಶಾನಭೂಮಿಯಿಂದ ಹೊರಹೊಮ್ಮಿಕದ ವೈಚಾರಿಕ ಕಿಡಿಗಳು

ಸ್ಮಶಾನಭೂಮಿಯಿಂದ ಹೊರಹೊಮ್ಮಿಕದ ವೈಚಾರಿಕ ಕಿಡಿಗಳು

• ಡಾ. ಕೆ. ಎನ್. ದೊಡ್ಡಮನಿ

ಬೆಳಗಾವಿ -ಸಂವಿಧಾನ ಶಿಲ್ಪಿಯ ಮಹಾಪರಿನಿರ್ವಾಣ ದಿನವಾದ ಇಂದು ಪ್ರಯುಕ್ತ ಮೂಢನಂಬಿಕೆ ವಿರೋಧಿಯ ಪರಿವರ್ತನಾ ದಿನವನ್ನಾಗಿ ಸ್ವೀಕರಿಸಿ ಬೆಳಗಾವಿಯ ಸದಾಶಿವ ನಗರದ ಸ್ಮಶಾನಭೂಮಿಯಿಂದ ಹೊರಹೊಮ್ಮಿದ ವೈಚಾರಿಕ ಬೆಂಕಿಯ ಕಿಡಿಗಳು ಶೋಷಿತ ಸಮುದಾಯದ ಎದೆಯಲ್ಲಿ ಬೆಳಕಾಗಬೇಕಾದ ಬೆಳಗಿನಿಂದ ಮಧ್ಯಹ್ನಾದ ವರೆಗೆ ಮಾತನಾಡಿದ ಮಹನಿಯರಲ್ಲಿ ಒಂದಿಬ್ಬರ ಮಾತುಗಳನ್ನು ಹೇಳಲೇಬೇಕಿಸಿದೆ.
ಬೆಳೆಗ್ಗೆ 10ಗಂಟೆಯ ಸುಮಾರಿಗೆ ಆರಂಭವಾದ ಕ್ರಾಂತಿಗೀತೆ ಅಥವಾ ಹೋರಾಟದ ಗೀತೆಗಳು ವೈಚಾರಿಕ ವೇದಿಕೆ ಸೂಕ್ತವಾತಾವರಣ ನಿರ್ಮಾಣಗೊಳಿಸಿದವು. ಹಾಡುಗಳ ಸ್ವರ ಕೇವಲ ಸಂಗೀತದ ಸ್ವರದ ಸಾಂಪ್ರದಾಯಿಕ ಚೌಕಟ್ಟನನು ಮೀರಿ ಶೋಷಿತ ಸಮುದಾಯದ ಅಂತರಾಳದಲ್ಲಿರುವ ನಿಜವಾದ ಜನಪರ ಧ್ವನಿಯಾಗಿ ಪ್ರಕಟಗೊಂಡಿತು. ಇದು ಆರಂಭ ಮಾತ್ರ ಸೀಮಿತಗೊಳ್ಳದೆ ಕಾರ್ಯಕ್ರಮದ ಉದ್ದಕ್ಕೂ ಈ ಜೀವಪರ ಧ್ವನಿ ಗಟ್ಟಿಯಾಗಿತ್ತು.
ಈ ವರ್ಷದ ಆರಂಭ ತುಂಬಾ ಅರ್ಥಪೂರ್ಣ. ಪ್ರಬುದ್ಧ ಸಂಶೋಧನಾತ್ಮಕ ಭಾಷೆಯ ಮೂಲಕ ವೈಚಾರಿಕ ಗಟ್ಟಿ ಹರಳುಗಳನ್ನು ತನ್ನ ವಯಸ್ಸಿಗೆ ಮೀರಿ ಮಾತನಾಡಿ ಕಟ್ಟಿಕೊಟ್ಟ ಕುಮಾರಿ ಸಾವಿತ್ರಿ ಎಲ್ಲರನ್ನೂ ಬೆರಗುಗೊಳಿಸಿದಳು. ಅವರಿಗೆ ಡಾ. ಬಿ.ಆರ್. ಅಂಬೇಡ್ಕರ ಅವರ ಬದುಕು ಮತ್ತು ಬರಹಗಳಗಳಿಂದ ಕೂಡಿದ ಸಂಪುಟಗಳನ್ನು ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಆದಿಯಾಗಿ ವೇದಿಕೆಯ ಮೇಲಿನ ಗಣ್ಯರಿಂದ ಘಟಪ್ರಭಾ ಸಮೀಪದ ಮಲ್ಲಾಪೂರ .ಪಿ.ಜಿ. ಗ್ರಾಮದಲ್ಲಿ 6ನೇ ತರಗತಿ ಓದುತ್ತಿರುವ ಸಾವಿತ್ರಿ ಬಸವರಾಜ್ ಕರಗುಪ್ಪಿ ಅವರಿಗೆ ಸಹ್ತಾಂತರಿಸಿ ಹೊಸ ತಲೆಮಾರಿಗೆ ಅಂಬೇಡ್ಕರ ವಿಚಾರಗಳು ರವಾನೆಯ ಆಶಯ ಹೊತ್ತ ಕಾರ್ಯಕ್ರಮ ಚಾಲನೆ ವೈಚಾರಿಕತೆಗೆ ಕೈಗನ್ನಡಿಯಾಗಿತ್ತು.
ಕಾರ್ಯಕ್ರಮದ ಉದ್ಘಾಟನಾಪರ ಮಾತನಾಡಿದ ಮಾಜಿ ಅಡ್ವೇಕೆಟ್ ಜನರಲ್ ಶ್ರೀ ರವಿಕುಮಾರ ವರ್ಮಾ ಅವರ ಮಾತುಗಳು ವೈಚಾರಿಕತೆಯ ತೂಕಬದ್ಧವಾದವು. ‘’ಇಂದು ಕುಡಿಯುವ ನೀರಿನ ನ್ಯಾಯ ಒದಗಿಸುವಲ್ಲಿ ರಾಜಕಾರಣ, ಬದುಕಲು ತಿನ್ನವ ಆಹಾರದ ನಿರ್ದೇಶನದಲ್ಲಿ ರಾಜಕಾರಣ, ಎಲ್ಲದಕ್ಕೂ ರಾಜಕಾರಣ. ಇದರ ಮೂಲಕ ಅಥವಾ ಇದಕ್ಕೆ ಮುಖ್ಯ ಕಾರಣ ಧರ್ಮವನ್ನು ರಾಜಕೀಯದಲ್ಲಿ ಬೇರತಿರುವುದು. ಧರ್ಮ ರಾಜಕೀಯದಲ್ಲಿ ಬೆರೆತರೆ ಈ ಎಲ್ಲ ಅನಾಹುತಗಳು, ಕ್ರೌರ್ಯಗಳು ಯಥೆಚ್ಛೆವಾಗಿ ನಡೆಯುತ್ತವೆ” ಎಂದು ರಾಜಕೀಯ ಮತ್ತು ಧಾರ್ಮಿಕತೆಯ ಧೋರಣೆಗಳ ಬಿಚ್ಚಿಟ್ಟರು.
ಇಂದು ಎಷ್ಟರಮಟ್ಟಿಗೆ ಧರ್ಮ ರಾಜಕೀಯ ಲೇಪನ ಪಡೆದುಕೊಂಡಿದೆ ಎಂದರೆ ಇಸ್ಪಿಟ್ನಧ ಜೂಜಾಟದಲ್ಲಿ ಆಟಗಾರರು ಜೋಕರ್ ಎಲೆಯನ್ನು ಎಲ್ಲಿಬೇಕೋ ಅಲ್ಲಿ, ಹೇಗಬೇಕೋ ಹಾಗೆ ಬಳಸಿಕೊಳ್ಳಲಾಗುತ್ತದೆಯೋ ಆ ರೀತಿ ಧರ್ಮವನ್ನು ಬಳಸಿಕೊಳ್ಳಲಾಗುತ್ತಿದೆ. ನಿರುದ್ಯೋಗ ನಿವರಣೆಗೆ ಕೈಗಾರಿಕೆಗಳು ಸ್ಥಾಪನೆ, ಬಡತನ ನಿವರಣೆಗೆ ಉದ್ಯೋಗಾವಕಾಶದ ಸೃಷ್ಟಿ, ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಿಕ್ಷಣ ಸಂಸ್ಥೆಗಳನ್ನು ಎಲ್ಲಿ ಸ್ಥಾಪಿಸಿ ಆರೋಗ್ಯರ ಸಮಾಜ ಕಟ್ಟಬೇಕಾಗಿತ್ತೋ ಅಲ್ಲಿ ನಾಡಿಕೊಡೆಗಳಂತೆ ಪೂಜಾ ಮಂದಿರಗಳು ಹುಟ್ಟಿಕೊಳ್ಳುತ್ತಿವೆ. ಇದಕ್ಕೆ ರಾಜಕಾರಣದಲ್ಲಿ ಧರ್ಮದ ಬೇರಸುವಿಕೆಯೇ ಕಾರಣ. ಭಾರತದಲ್ಲಿ ಜಾತ್ಯತೀಯ ನೆಲೆಯ ಸಂವಿಧಾನವೊಂದು ಜಾರಿಯಲ್ಲಿರಬೇಕಾದರೆ, ಧರ್ಮದ ಈ ಲೇಪನ ಕಾರ್ಯ ಜೋರಾಜೋರಾಗಿ ಸ್ವತಂತ್ರಭಾರತದಲ್ಲಿ ನಡೆದ 1996 ಡಿಸೆಂಬರ್ 6ರಂದು ರಾಮಮಂದಿರ ನಿರ್ಮಿಸಲು ಮಸಿದಿ ಉರಳಿಸಿದ ಸಂದರ್ಭದಿಂದ ಆರಂಭವಾಗಿದೆ. ಅಂದು ಆರಂಭವಾದ ರಾಜಕೀಯ ಧರ್ಮದ ಕಾರ್ಯ ನಿತ್ಯ ಕ್ರೌರ್ಯ ಮೆರೆಯುತ್ತ ರಕ್ತದ ಓಕುಳಿ ಆಡುತ್ತ ಇಲ್ಲಿಗೆ ಬಂದಿದೆ ಎಂದು ರವಿಕುಮಾರ ವರ್ಮಾ ತಮ್ಮದೇ ಆದ ವಕೀಲಿ ಗತ್ತಿನಲ್ಲಿ ಬಯಲಿಗೆಳೆದರು.
‘ಭಾರತಕ್ಕೆ ಯಾವುದೇ ಧರ್ಮಗ್ರಂಥ ಶ್ರೇಷ್ಠವಲ್ಲ. ಸಂವಿಧಾನವೊಂದೇ ಶ್ರೇಷ್ಠಗ್ರಂಥ’ ಎಂದು ತೀರ್ಪು ನೀಡಿದ ವಕೀಲರು, ಸುಗ್ರೀವಾಜ್ಞೆಯ ಮೂಲಕ ಮೂಢನಂಬಿಕೆ ಕಾಯ್ದೆಯನ್ನು ಮೊದಲು ರಚಿಸಿ, ಆಮೇಲೆ ಚರ್ಚೆಗೆ ಒಳಪಡಿಸಿ ಜಾರಿಗೊಳಿಸಲು ಪ್ರಯತ್ನಿಸಿ ಎಂದು ವೈಚಾರಿಕ ರಾಜಕಾರಣಿ ಕಾರ್ಯಕ್ರಮದ ರೂವರಿ ಸತೀಶ ಜಾರಿಕಿಹೊಳಿ ಅವರ ಗಮನಕ್ಕೆ ತಂದರು.
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ ವಿ. ಗೀತಾ ಅವರು, ಇಡೀ ವ್ಯವಸ್ತೆಯನ್ನು ಜಾಲಾಡಿಸಿ, ರಾಜಕಾರಣಿಗಳ, ಕಾರ್ಪೋರೇಟ್ಗ ಳ, ಪುರೋಹಿತ ವರ್ಗದ, ಬಂಡವಾಳಶಾಹಿಗಳ ಒಂದೊಂದೇ ಒಳತಂತ್ರಗಳನ್ನು ಎಳೆಎಳೆಯಾಗಿ ಬಿಡಿಸಿ ವಾಸ್ತವನ್ನು ನಿಜಕ್ಕೂ ಬೆತ್ತಲೆ ಮಾಡಿ ವೀರ ಮಹಿಳೆ. ಅಕ್ಕನ ಸ್ಥಾನದಲ್ಲಿ ನಿಂತು ಮಾತನಾಡಿ ಗೀತಕ್ಕ ಅವರ ನಿಜವಾದ ಸಾಮಾಜಿಕ ಕಾಳಜಿ, ಅದರ ಪ್ರಾಯೋಗಿಕ ಧೀರ್ಘಾನುಭವನ್ನು ಸಭಿಕರ ಎದುರಿಗೆ ತಂದುಕೊಂಡಾಗ ವ್ಯವಸ್ಥೆಯ ಬಗ್ಗೆ ಅವರಿಗಿರುವ ಸಿಟ್ಟು ಅದರ ಹಿಂದಿನ ಕಳಕಳಿ ಮಾತಮಾತಿಗೂ ಕಾಣಿಸಿಕೊಂಡಿತು. ಇಂಥ ಮಹಿಳೆಯರ ಸಂಖ್ಯೆ ಇಂದು ಬೇಕಾಗಿದ್ದು, ಮಹಿಳೆಯರನ್ನು ಯಾವ ರೀತಿ ಮೌಢ್ಯದ ಮೂಲಕ ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ ಎಂಬುದನ್ನು ತಂತ್ರಗಾರಿಕೆ ವರ್ಗದ ಕುತಂತ್ರಗಳನ್ನು ಬಯಲಿಗೆಳೆದರು.
ಉತ್ಪಾದಿತ ವಸ್ತುಗಳ ಮಾರಾಟಕ್ಕಾಗಿ ಕಾರ್ಪೋರೇಟ್ ಸಂಸ್ಥೆಗಳು ನಡೆಸುತ್ತಿರುವ ದೇವರ ಧರ್ಮದ ಹೆಸರಿನ ಮೇಲಿನ ಅನಾಚಾರ, ಇದಕ್ಕೆ ಏಜಂಟಕಿ ಮಾಡುತ್ತಿರುವ ಮಾಧ್ಯಮಗಳ ವರ್ತನೆ, ಈ ವರ್ತನೆಗಳಿಗೆ ಮೇಲ್ವರ್ಗದ ಕುಟುಂಬಗಳು ಆರಾಮಾಗಿದ್ದು, ದಲಿತ ಮತ್ತು ಹಿಂದುಳಿದ ವರ್ಗದ ಕುಟುಂಬಗಳು ಮನೆ ಮುರಿದುಕೊಂಡು, ಸಂಬಂಧ ಹರಿದುಕೊಂಡು ಬೀದಿಗೆ ಬಿದ್ದಿವೆ ಎಂದು ಸತ್ಯ ಬಯಲುಗೊಳಿಸಿ ಗೀತಕ್ಕ ಎದುರಿಗಿದ್ದ ಅಸಂಖ್ಯಾತ ಮಹಿಳೆಗೆ “ ಇಲ್ಲಿ ದೇವರಿಲ್ಲ, ಯಾವ ದೇವರನ್ನು ಯಾರನ್ನೂ ಉದ್ದಾರ ಮಾಡುವುದಿಲ್ಲ. ತಿಳಿದುಕೊಂಡು ಜೀವಿಸಿ’’ ಎಂದು ಒತ್ತಕೊಟ್ಟು ತಿಳಿಹೇಳಿರುವುದನ್ನು ನಮ್ಮ ಮಹಿಳೆಯರು ಎಷ್ಟರ ಮಟ್ಟಿಗೆ ಪಾಲಿಸುತ್ತಾರೆ ಎಂಬುದು ಪ್ರಶ್ನೆ ಉಳಿಯುತ್ತದೆ.
ಮಾತುಗಳು ಮುಂದುವರೆದಿವೆ. ಅರ್ಧಕ್ಕೆ ಎದ್ದು ಸುದ್ದಿ ಮಾಡಲು ಬಂದ ನಾನು ವೈಚಾರಿಕ ಮಾತುಗಳ ಒತ್ತಡದಿಂದ ಮನಸ್ಸು ತಾಳದೇ ಇಷ್ಟೆಲ್ಲ ಬರೆಯಬೇಕಾಯಿತು. ಓದಿದ ತಮಗೆ ಧನ್ಯವಾದಗಳು.

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *