Breaking News
Home / Breaking News / ಹಮ್ ಸಾಥ್.ಸಾಥ್ ಇದೇ ಇವತ್ತಿನ ಖಾಸ್ ಬಾತ್..!

ಹಮ್ ಸಾಥ್.ಸಾಥ್ ಇದೇ ಇವತ್ತಿನ ಖಾಸ್ ಬಾತ್..!

ಬೆಳಗಾವಿ- ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಾಜಕೀಯ ವಿರೋಧಿಗಳಾದ ಎಂಈಎಸ್ ಶಾಸಕ ಸಂಬಾಜಿ ಪಾಟೀಲ ಹಾಗು ಬಿಜೆಪಿಯ ಮಾಜಿ ಶಾಸಕ ಅಭಯ ಪಾಟೀಲ ಅವರು ಒಂದೇ ಬೈಕ್ ಏರಿ ಕಪಿಲೇಶ್ವರ ರಸ್ತೆಯ ಹೊಸ ಸೇತುವೆ ಮೇಲೆ ಸಂಚರಿಸಿ ಅಚ್ಚರಿ ಮೂಡಿಸಿದರು

ರೇಲ್ವೆ ಮೇಲ್ಸೇತುವೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು ಸೇತುವೆ ಲೋಕಾರ್ಪಣೆಗೊಂಡ ಬಳಿಕ ಅಭಯ ಪಾಟೀಲ ಬೈಕ್ ಏರಿ ಬಂದರು ಅದೇ ಮಾರ್ಗದಲ್ಲಿ ಹೊರಟಿದ್ದ ಸಂಬಾಜಿ ಪಾಟೀಲ ಅಭಯ ಪಾಟೀಲ ಬೇಕ್ ಏರಿ ಅವರ ಹೆಗಲ ಮೇಲೆ ಕೈ ಹಾಕಿ ಕುಳಿತುಕೊಂಡಾಗ ಅಲ್ಲಿ ನೆರೆದಿದ್ದವರು ಇದನ್ನು ನೋಡಿ ಬೆಚ್ಚಿಬಿದ್ದರು

ಬೆಳಗಾವಿ ದಕ್ಷಿಣ ಮತಕ್ಷೇತ್ರದ ರಾಜಕೀಯ ಕಡುವೈರಿಗಳು ಒಟ್ಟಾಗಿ ಬೈಕ್ ಏರಿ ಎಲ್ಲರ ಗಮನ ಸೆಳೆಯುವದರ ಜೊತೆಗೆ ದಕ್ಷಣ ಕ್ಷೇತ್ರದಲ್ಲಿ ಹೊಸ ರಾಜಕೀಯ ಚರ್ಚೆಗೆ ಗ್ರಾಸವಾದರು

ಕಳೆದ ವಿಧಾಸಭಾ ಚುನಾವಣೆಯಲ್ಲಿ ಸಂಬಾಜಿ ಪಾಟೀಲ ಅಭಯ ಪಾಟೀಲರನ್ನು ಪರಾಭವಗೊಳಿಸಿದ್ದರು ಈ ಸಂಧರ್ಭದಲ್ಲಿ ಇಬ್ಬರ ನಡುವೆ ದೊಡ್ಡ ರಾಜಕೀಯ ಸಂಘರ್ಷವೇ ನಡೆದಿತ್ತು

About BGAdmin

Check Also

ಡಿಸಿ ಕಚೇರಿ ಎದರು ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ..?

ಬೆಳಗಾವಿ- ಡಿಸಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಬಟನೆಯಲ್ಲಿ ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ಜಯಶ್ರಿ …

Leave a Reply

Your email address will not be published. Required fields are marked *