Breaking News
Home / Breaking News / ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಲ್ವೇ..ಹಾಗಾದ್ರೆ ಜನತಾ ದರ್ಶನಕ್ಕೆ ಬನ್ನಿ…!

ಬೆಳಗಾವಿ ಜಿಲ್ಲೆಯ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಲ್ವೇ..ಹಾಗಾದ್ರೆ ಜನತಾ ದರ್ಶನಕ್ಕೆ ಬನ್ನಿ…!

ಬೆಳಗಾವಿ- ಬೆಳಗಾವಿ ಜಿಲ್ಲೆಯ ಹನ್ನೊಂದು ತಾಲ್ಲೂಕುಗಳಲ್ಲಿ ಯಾವುದೇ ಇಲಾಖೆಯ ಅಧಿಕಾರಿಗಳು ನಿಮ್ಮ ಕೆಲಸ ಮಾಡಿಕೊಡದೇ ತಮ್ಮನ್ನು ಸತಾಯಿಸುತ್ತಿದ್ದರೆ ನೀವು ಕೊರಗ ಬೇಕಾಗಿಲ್ಲ ಇಂದು ಶನಿವಾರ ಬೆಳಿಗ್ಗೆ ೧೦ ಘಂಟೆಯಿಂದ ಸಂಜೆಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಬೆಳಗಾವಿಯ ಸರ್ಕ್ಯಿಟ್ ಹೌಸ್ ನಲ್ಲಿ ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸಿ ಸ್ಥಳದಲ್ಲಿಯೇ ಅದಕ್ಕೆ ಪರಿಹಾರ ಕಂಡು ಹಿಡಿಯಲಿದ್ದಾರೆ

ಇಂದು ಶನಿವಾರ ದಿನಾಂಕ ೨೮ ರಂದು ಬೆಳಿಗ್ಗೆ ಹತ್ತು ಘಂಟೆಗೆ ಸರ್ಕ್ಯಿಟ್ ಹೌಸ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಜನತಾ ದರ್ಶಣ ಆರಂಭವಾಗಲಿದೆ ಜಿಲ್ಲಾಧಿಕಾರಿ ಎನ್ ಜಯರಾಂ ಸೇರಿದಂತೆ ಜೆಲ್ಲೆಯ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಜನತಾ ದರ್ಶಣದಲ್ಲಿ ಭಾಗಿಯಾಗಿ ನಿಮ್ಮ ಸಮಸ್ಯೆಗಳನ್ನು ಆಲಿಸಲಿದ್ದಾರೆ

ನಿಮ್ಮ ಸಮಸ್ಯೆಗೆ ಸ್ಪಂದಿಸಿ ಅದನ್ನು ಪರಿಹರಿಸಲು ಜಿಲ್ಲಾ ಉಸ್ತುವಾರಿ ಸಚಿವರು ತಮಗೊಂದು ಸುವರ್ಣ ಅವಕಾಶವನ್ನು ಕಲ್ಪಿಸಿದ್ದು ಇದನ್ನು ಸದುಪಯೋಗ ಮಾಡಿಕೊಳ್ಳಿ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *