Breaking News
Home / Breaking News / ಚಿತ್ರೋತ್ಸವ ಸಪ್ತಾಹಕ್ಕೆ ಅದ್ಧೂರಿ ಚಾಲನೆ

ಚಿತ್ರೋತ್ಸವ ಸಪ್ತಾಹಕ್ಕೆ ಅದ್ಧೂರಿ ಚಾಲನೆ

 
ಬೆಳಗಾವಿ- ಚಿತ್ರೋದ್ಯಮ, ಭಾರತದಲ್ಲಿ ದೊಡ್ಡ ಉದ್ಯಮ ವಾಗಿ ಬೆಳೆಯುತ್ತಿದೆ ಈ ಉದ್ಯಮ ಪ್ರತಿವರ್ಷ ಆರವತ್ತು ಬಿಲಿಯನ್ ವಹಿವಾಟು ನಡೆಯುತ್ತಿದೆ ಚಿತ್ರಗಳಲ್ಲಿ ಸಮಾಜವನ್ನು ಪರಿವರ್ತಿಸುವ ಶಕ್ತಿ ಇದೆ ಚಿತ್ರೋತ್ಸವದಲ್ಲಿ ಒಳ್ಳೆಯ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಇವುಗಳನ್ನು ವೀಕ್ಷಿಸಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕೆಂದು ಐಜಿಪಿ ರಾಮಚಂದ್ರ ರಾವ್ ಹೇಳಿದರು

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಚಿತ್ರೋತ್ಸವ ಸಪ್ತಾಹ ಇಂದು ಬೆಳಿಗ್ಗೆ ಆರಂಭವಾಯಿತು.ಇದನ್ನು ಉದ್ಘಾಟಿಸಿ ಮಾತನಾಡಿದ ಅವರು ತಿಥಿ ಚಿತ್ರ ಜಾಗತಿಕ ಮಟ್ಟದಲ್ಲಿ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ ಈ ಚಿತ್ರದಲ್ಲಿ ಒಳ್ಳೆಯ ಮೆಸೇಜ್ ಇದೆ ಈ ಚಿತ್ರ ಚಿತ್ರೋತ್ಸವ ದಲ್ಲಿ ಪ್ರದರ್ಶನವಾಗುತ್ತಿರುವದು ಸಂತಸದ ಸಂಗತಿಯಾಗಿದೆ ಎಂದರು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಮಂಗಳಾ ಮೆಟಗುಡ್ ಅವರು ಕನ್ನಡ ರಾಜ್ಯ ಭಾಷೆಯಾಗಲಿ ಎಂದು ಒತ್ತಾಯ ಮಾಡಿದರು

ಉತ್ತರ ವಲಯ ಐಜಿಪಿ ಡಾ. ರಾಮಚಂದ್ರರಾವ್ ಚಿತ್ರೋತ್ಸವಕ್ಕೆ ನಗರದ ಗ್ಲೋಬ್ ಚಿತ್ರಮಂದಿರದಲ್ಲು ಬೆಳಿಗ್ಗೆ ೯ ಕ್ಕೆ ಚಾಲನೆ ನೀಡಿದರು.

ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ವಿಜೇತ ಕನ್ನಡ ಚಲನ ಚಿತ್ರಗಳ ಉಚಿತ ಪ್ರದರ್ಶನ ಫೆ. ೯ ರವರೆಗೆ ಪ್ರತಿದಿನ ಬೆಳಿಗ್ಗೆ ೧೦ ಕ್ಕೆ ನಡೆಯಲಿದೆ. ನಗರದ ಹಾಗೂ ಜಿಲ್ಲೆಯ ಶಾಲಾ ಮಕ್ಕಳು, ವಿದ್ಯಾರ್ಥಿಗಳು, ಸಾರ್ವಜನಿಕರು ಚಿತ್ರಗಳನ್ನು ನೋಡಬಹುದಾಗಿದೆ.
ನಾಳೆ ಶಿವಯೋಗಿ ಶ್ರೀ ಪುಟ್ಟಯ್ಯಜ್ಜ, ಫೆ. ೫ ಕ್ಕೆ ತಿಥಿ, ೬ರಂದು ಕೃಷ್ಣಲೀಲಾ, ೭ ರಂದು ರಂಗಿತರಂಗ, ೮ ರಂದು ತಿಥಿ ಚಿತ್ರ ಎರಡನೇ ಬಾರಿ ಹಾಗೂ ಕೊನೆಯ ದಿನ ಮೈತ್ರಿ ಚಿತ್ರ ಪ್ರದರ್ಶನವಾಗಲಿದೆ.
ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್, ಹಿರಿಯ ಸಹಾಯಕ ನಿರ್ದೇಶಕ ಗುರುನಾಥ ಕಡಬೂರ, ವಾರ್ತಾಧಿಕಾರಿ ಅನಂತ ಪಪ್ಪು, ಎಂ. ಎಲ್. ಜಮಾದಾರ ಇನ್ನಿತರರು ಉಪಸ್ಥಿತರಿದ್ದರು.

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *