Breaking News
Home / Breaking News / ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಿಪ್ಪೆಯಲ್ಲಿ ಶವ ಹೂತು ಹಾಕಿದ ಕಿರಾತಕ

ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ತಿಪ್ಪೆಯಲ್ಲಿ ಶವ ಹೂತು ಹಾಕಿದ ಕಿರಾತಕ

ಬೆಳಗಾವಿ- ಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಬಾಲಕಿಯ ಶವವನ್ನು ಮನೆಯ ಪಕ್ಕದ ತಪ್ಪೆಯಲ್ಲಿ ಹೂತು ಹಾಕಿದ ಹೃದಯ ವಿದ್ರಾವಕ ಘಟನೆ ನಡೆದಿದೆ

ಅತ್ಯಾಚಾರ ಮಾಡಿದ ಬಳಿಕ ಕೊಲೆ ಮಾಡಿ ಶವ ಹೂತು ಹಾಕಿದ ಕಾಮುಕ ಕಿರಾತಕ ಉದಪ್ಪ ಗಾಣಿಗೇರ (೨೮) ಎಂಬಾತನಿಂದ ಕೃತ್ಯ ನಡೆದಿದೆ

ಬಾಲಕಿಯನ್ನು ಪುಸಲಾಯಿಸಿ ಮನೆಗೆ ಕರೆದು ಅತ್ಯಾಚಾರ ಮಾಡಿದ ಕಿರಾತಕ ಅತ್ಯಾಚಾರ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿದ ಉದಪ್ಪ, ಕೊಲೆ ಮಾಡಿ ಮನೆ ಪಕ್ಕದ ತಿಪ್ಪೆಯಲ್ಲಿ ಹೂತು ಹಾಕಿದ್ದ ಆರೋಪಿ ಬಾಲಕಿಯ ಶವ ವನ್ನು ತಿಪ್ಪೆಯಲ್ಲಿ ಹೂತು ಹಾಕಿ ಪ್ರಕರಣ ಬೆಳಕಿಗೆ ಬಾರದಂತೆ ಬಚಾವ್ ಆಗುವ ಪ್ರಯತ್ನ ಮಾಡಿದ್ದ

ಬಾಲಕಿ ಕಾಣದಿದ್ದಾಗ ಅಕ್ಕ ಪಕ್ಕದವರನ್ನು ಬಾಲಕಿಯ ಮನೆಯವರು ವಿಚಾರಿಸಿದಾಗ ಕಿರಾತಕನ ನೀಚ ಕೃತ್ಯ ಬೆಳಕಿಗೆ ಬಂದಿದೆ

ಹಾರೂಗೇರಿ ಪಟ್ಟಣದ ಹೊರ ವಲಯದಲ್ಲಿ ನಡೆದ ಘಟನೆ ಇದಾಗಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಹಾರೂಗೇರಿ ಪಟ್ಟಣ,

ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಯನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ನಡೆಯುತ್ತಿದೆ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *