Breaking News
Home / Breaking News / ಬೆಳಗಾವಿ ಬಾರ್ ಗಳಲ್ಲಿ ಜಿ ಎಸ್ ಟಿ ಡಿಬಾರ್…ಬಿಲ್ ಕೇಳಿದ್ರೆ..ಢಮಾರ್…!!!!

ಬೆಳಗಾವಿ ಬಾರ್ ಗಳಲ್ಲಿ ಜಿ ಎಸ್ ಟಿ ಡಿಬಾರ್…ಬಿಲ್ ಕೇಳಿದ್ರೆ..ಢಮಾರ್…!!!!

ಬೆಳಗಾವಿ- ನಮ್ಮ ಪ್ರಧಾನಿ ಭಾರತದ ಖಜಾನೆ ತುಂಬಲು ದೇಶದಲ್ಲಿ ಏಕರೂಪ ತೆರಿಗೆ ವ್ಯೆವಸ್ಥೆ ಅಂದ್ರೆ ಜಿ ಎಸ್ ಟಿ ಜಾರಿಗೆ ತಂದಿದ್ದಾರೆ ಆದ್ರೆ ಬೆಳಗಾವಿಯಲ್ಲಿ ಕೆಲವರಿಗೆ ಈ ಜಿ ಎಸ್ ಟಿ ಗ್ರಾಹಕರನ್ನು ಸುಲಿಯುವ ಲೂಟಿ ಮಾಡುವ ವಸ್ತು ಆಗಿದೆ ಅನ್ನೋದಕ್ಕೆ ನಿನ್ನೆ ರಾತ್ರಿ ಬೆಳಗಾವಿಯಲ್ಲಿ ನಡೆದ ಘಟನೆಯೇ ಅದಕ್ಕೆ ಸಾಕ್ಷಿ

ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಪೂರ್ಣಿಮಾ ಬಾರ್ ನಲ್ಲಿ ಜಿ ಎಸ್ ಟಿ ಬಿಲ್ ಕೇಳಿದ್ದಕ್ಕೆ ಗ್ರಾಹಕರ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಲಾಗಿದೆ ಎಂದು ಹಲ್ಲೆಗೊಳಗಾದ. ಗ್ರಾಹಕರು ಗಂಭೀರ ಆರೋಪ ಮಾಡಿದ್ದಾರೆ

ಮಾಹಂತೇಶ ನಗರದ ಪೂರ್ಣಿಮಾ ಬಾರ ಆಂಡ ರೆಸ್ಟೋರೆಂಟ ನಲ್ಲಿ ನಡೆದಿರುವ ಈ ಘಟಣೆಯಿಂದಾಗಿ ನಿನ್ನೆ ರಾತ್ರಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು

ಸ್ನೇಹಿತರಿಬ್ಬರು ಹಣ ನೀಡುವಾಗ ಬಿಲ್ ಕೇಳಿದಕ್ಕೆ ಹಳದಿ ಪೇಪರಿನಲ್ಲಿ ಬಾರ್ ನವರು ಬಿಲ್ ಬರೆದು ಕೊಟ್ಟಿದ್ದಾರೆ ಇದಕ್ಕೆ ಗ್ರಾಹಕರು ನಮಗೆ ಜಿ ಎಸ್ ಟಿ ಬಿಲ್ ಕೊಡಿ ಎಂದು ಆಗ್ರಹಿಸಿದ್ದಾರೆ ಜಿ ಎಸ್ ಟಿ ಬಿಲ್ ಕೇಳಿದಕ್ಕೆ ಅವಾಚ್ಯ ಶಬ್ದಗಳಿಂದ ಬೈದು ಬಾರ್ ನ ಗುಂಡಾಗಳು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನುವದು ಗ್ರಾಹಕರ ಆರೋಪ

ಲಾಟಿ ಮತ್ತು ದೊಣ್ಣೆಗಳಿಂದ ಮನಸೊ ಇಚ್ಚೆ ಹಲ್ಲೆ ಮಾಡಿದ್ದಾರೆ
ಬಾರಿನಿಂದ ಹೊರಬಂದ ಮೇಲೂ ಬೆನ್ನತ್ತಿ ಹಲ್ಲೆ ನಡೆಸಲಾಗಿದೆ ಎಂದು ಹಲ್ಲೆಗೊಳಗಾದ ಗ್ರಾಹಕರು ದೂರಿದ್ದಾರೆ

ಬೆಳಗಾವಿ ನಗರದಲ್ಲಿ ಹಲವಾರು ಕಡೆ ಕೇಂದ್ರ ಸರ್ಕಾರದ ಜಿ ಎಸ್ ಟಿ ಪ್ರಕಾರ ಗ್ರಾಹಕರಿಂದ ಟ್ಯಾಕ್ಸ ವಸೂಲಿ ಮಾಡಲಾಗುತ್ತಿದೆ ಆದರೆ ಬಿಲ್ ಕೊಡುವದಿಲ್ಲ ಇದನ್ನು ಪ್ರಶ್ನೆ ಮಾಡಿದ್ರೆ ಜಿ ಎಸ್ ಟಿ ಕಟ್ಟೋದು ನಾವು ನಿಮಗೇಕೆ ಬಿಲ್ ಕೊಡಬೇಕು ಅಂತಾರೆ ಅಂಗಡಿ ಮಾಲೀಕರು
ನಿನ್ನೆ ಮಹಾಂತೇಶ ನಗರದ ಪೂರ್ಣಿಮಾ ಬಾರ್ ನಲ್ಲಿ ನಡೆದ ಘಟನೆಯನ್ನು ಸಮಂಧ ಪಟ್ಟ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಗಣಿಸಬೇಕು ದೇಶದ ಉನ್ನತಿಗೆ ಗ್ರಾಹಕರು ಪಾವತಿಸಿದ ಹಣ ದೇಶದ ಖಜಾನೆಗೆ ತಲುಪ ಬೇಕು ಬೆಳಗಾವಿಯ ನಮೋ ಬ್ರಿಗೇಡ್ ಈ ಘಟನೆಯ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲುಪಿಸಬೇಕು ವರದಿ ನೀಡುವಾಗ ಹಳದಿ ಬಿಲ್ ಲಗ್ಗತ್ತಿಸಿ ಕಳುಹಿಸಿದರೆ ಜಿ ಎಸ್ ಟಿ ಯಾವ ರೀತಿ ದುರುಪಯೋಗ ಆಗುತ್ತಿದೆ ಎನ್ನುವದು ಕೇಂದ್ರ ಸರ್ಕಾರದ ಗಮನಕ್ಕೆ ಬರಬಹುದು ಕೇಂದ್ರ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳ ಬಹುದು

About BGAdmin

Check Also

ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಪಿ ಜಿ ಆರ್ ಸಿಂಧ್ಯಾ ಕಣ್ಣು…!!!!

ಬೆಳಗಾವಿ- ಅತೀ ಹೆಚ್ಚು ಮರಾಠಾ ಸಮುದಾಯದ ಮತದಾರರನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಜಿಡಿಎಸ್ ಮುಖಂಡ ಪಿ ಜಿ …

Leave a Reply

Your email address will not be published. Required fields are marked *