Breaking News
Home / Breaking News / ಫಿರೋಜ್ ಸೇಠ ಗೆ ಮುಸ್ಲೀಂ ಸಮುದಾಯದ ಒಗ್ಗಟ್ಟಿನ ಬೆಂಬಲ

ಫಿರೋಜ್ ಸೇಠ ಗೆ ಮುಸ್ಲೀಂ ಸಮುದಾಯದ ಒಗ್ಗಟ್ಟಿನ ಬೆಂಬಲ

ಬೆಳಗಾವಿ- ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಫಿರೋಜ್ ಸೇಠ ಕಳೆದ ಹತ್ತು ವರ್ಷಗಳಿಂದ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಬೆಳಗಾವಿ ಉತ್ತರ ಕ್ಷೇತ್ರದ 58 ಜಮಾತಗಳು ಸೇಠ ಅವರಿಗೆ ಒಗ್ಗಟ್ಟಿನ ಬೆಂಬಲ ವ್ಯೆಕ್ತ ಪಡಿಸಿವೆ ಎಂದು ಕಾಂಗ್ರೆಸ್ ಮುಖಂಡ ಸಲೀಂ ಖತೀಬ ತಿಳಿಸಿದ್ದಾರೆ

ಬೆಳಗಾವಿಯ ಉತ್ತರ ಕ್ಷೇತ್ರದ 58 ಜಮಾತಗಳ ಮುಖಂಡರು ಸೇಠ ಅವರಿಗೆ ಬೆಂಬಲ ಸೂಚಿಸಿ ಲಿಖಿತ ಬೆಂಬಲ ಪತ್ರವನ್ನು ಸೇಠ ಅವರಿಗೆ ನೀಡಿವೆ ಮುಸ್ಲೀಂ ಫೋರಮ್ ಸಂಘಟನೆ ಮಾಡಿದ ಆರೋಪದಲ್ಲಿ ಯಾವುದೇ ಹುರಳಿಲ್ಲ ಬೆಳಗಾವಿಯ ಮುಸ್ಲೀಂರು ವದಂತಿಗಳಿಗೆ ಸುಳ್ಳು ಆರೋಪಗಳಿಗೆ ಕಿವಿಗೊಡಬಾರದು ಎಂದು ಸಲೀಂ ಖತೀಬ ಹೇಳಿದರು
ನಗರದ ಖಾಸಗಿ ಹೊಟೆಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ 58 ಜಮಾತಗಳ ಮುಖಂಡರು ಕಾಂಟೋನ್ಮೆಂಟ್ ಸದಸ್ಯರು,ಉರ್ದು ಭಾಷಿಕ ನಗರ ಸೇವಕರು ಮತ್ತು ಕಾಂಗ್ರೆಸ್ ಮುಖಂಡರು ಭಾಗವಹಿಸಿ ಫಿರೋಜ್ ಸೇಠ ಅವರಿಗೆ ಬಹಿರಂಗ ಬೆಂಬಲ ವ್ಯೆಕ್ತ ಪಡಿಸಿ ಸೇಠ ಅವರ ಬೆಂಬಲಕ್ಕೆ ಮುಸ್ಲೀಂ ಸಮುದಾಯ ಒಗ್ಗಟ್ಟಾಗಿದೆ ಎಂಬ ಸಂದೇಶವನ್ನು ಸೇಠ ರಾಜಕೀಯ ವಿರೋಧಿಗಳಿಗೆ ರವಾನಿಸಿದರು

About BGAdmin

Check Also

ಧಾರವಾಡದ ಕಟ್ಟಡದ ಅವಶೇಷದಲ್ಲಿ ಬದುಕುಳಿದ ಬೆಳಗಾವಿ ಜಿಲ್ಲೆಯ ಯುವಕ

75 ಘಂಟೆಗಳ ಬಳಿಕವೂ ಬದುಕುಳಿದ ಸವದತ್ತಿ ತಾಲ್ಲೂಕಿನ ಯುವಕ ಬೆಳಗಾವಿ- ಸವದತ್ತಿ ಯಲ್ಲಮ್ಮ ದೇವಿಯ ಪವಾಡವೋ ಅಥವಾ ಆತನ ಅದೃಷ್ಟ …

Leave a Reply

Your email address will not be published. Required fields are marked *