Breaking News
Home / Breaking News / ಕುಡಚಿ ಕ್ಷೇತ್ರಕ್ಕೆ ಸುರೇಶ ತಳವಾರಗೆ ಕೈ ಟಿಕೇಟ್ ಪಕ್ಕಾ…!

ಕುಡಚಿ ಕ್ಷೇತ್ರಕ್ಕೆ ಸುರೇಶ ತಳವಾರಗೆ ಕೈ ಟಿಕೇಟ್ ಪಕ್ಕಾ…!

ಬೆಳಗಾವಿ:

ಕುಡಚಿ ವಿಧಾನಸಭಾ ಕ್ಷೇತ್ರವನ್ನ ಈ ಬಾರಿ ಕೈ ವಶ ಮಾಡಿಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್  ಈ ಬಾರಿ ಇಲ್ಲಿ ಹೊಸ ಮುಖಕ್ಕೆ ಮಣಿ ಹಾಕಲು ನಿರ್ಧರಿಸಿದೆ.

ಇದಕ್ಕಾಗಿಯೇ ಕಾರ್ಯತಂತ್ರ ರೂಪಿಸಿದ್ದು, ಬೆಳಗಾವಿ ಜಿಲ್ಲಾಕಾಂಗ್ರೆಸ್ ಸಮೀತಿಯ ಎಸ್ ಸಿ ಘಟಕದ ಅಧ್ಯಕ್ಷ ಸುರೇಶ ತಳವಾರ ಅವರನ್ನ ಕಣಕ್ಕಿಳಿಸಲು ಮುಂದಾಗಿದೆ.ಹೈಕಮಾಂಡ್ ಸಹ ಇದಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಇವರಿಗೆ ಟಿಕೇಟ್ ನೀಡುವುದು ಬಹುತೇಕ ಖಚಿತ ಅಂತಾ ಮಾಹಿತಿ ಲಭ್ಯವಾಗಿದೆ.

ಕಳೆದ ಎರಡು ಬಾರಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲು ಕಂಡಿದೆ. ಮಾಜಿ ಶಾಸಕ ಶ್ಯಾಮ್ ಘಾಟಗೆ ಹಾಲಿ ಶಾಸಕ ಪಿ.ರಾಜೀವ್ ವಿರುದ್ಧ ಬಾರಿ ಅಂತರದಲ್ಲಿ ಸೋಲು ಕಂಡಿದ್ದರು. ಅಷ್ಟೇ ಅಲ್ಲ ಅವರಿಗೆ ಟಿಕೇಟ್ ಸಿಗುವುದು ಕಷ್ಟ ಎನ್ನುವುದನ್ನ ಅರಿತು ಅವರು ಈ ಬಾರಿ ಸ್ಪರ್ಧೆ ಮಾಡುತ್ತಿಲ್ಲ. ಬದಲಿಗೆ ಅವರ ಪುತ್ರನನ್ನ ಕುಡಚಿ ಕ್ಷೇತ್ರದಿಂದ ಕಣಕ್ಕಿಳಿಸಲು ತಯಾರಿ ಮಾಡಿಕೊಂಡಿದ್ದರು.ಈಗಾಗಲೇ ಮಾಜಿ ಶಾಸಕ ಶಾಮ್ ಘಾಟಗೆ ಪುತ್ರ ಅಮೀತ್ ಘಾಟಗೆ ಕ್ಷೇತ್ರದಲ್ಲಿ ಪ್ರಚಾರ ಸಹ ನಡೆಸಿದ್ದಾರೆ.

ಅಷ್ಟೇ ಅಲ್ಲ ಮಗನಿಗೆ ಟಿಕೇಟ್ ಕೊಡಿಸಲು ಶಾಮ್ ಘಾಟಗೆ ಮಲ್ಲಿಕಾರ್ಜುನ ಖರ್ಗೆ ಮೂಲಕ ದೆಹಲಿ ಮಟ್ಟದಲ್ಲಿ ಲಾಭಿ ನಡೆಸಿದ್ದಾರೆ. ಆದ್ರೆ ಘಾಟಗೆ ಕುಟುಂಬಕ್ಕೆ ಕ್ಷೇತ್ರದಲ್ಲಿಒಳ್ಳೆಯ ಅಭಿಪ್ರಾಯ ಇಲ್ಲದ ಕಾರಣ ಅಮೀತ್ ಘಾಟಗೆ ಗೆಲುವು ಸಾಧ್ಯವಿಲ್ಲ ಎನ್ನುವುದನ್ನ ಅರಿತಿರುವ ಕಾಂಗ್ರೆಸ್ ಹೈಕಮಾಂಡ್ ಇದೀಗ ಹೊಸಬರನ್ನ ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಇನ್ನೂ ಮತ್ತೊಬ್ಬ ಟಿಕೇಟ್ ಆಕಾಂಕ್ಷಿ ಮಹೇಶ ತಮ್ಮಣ್ಣವರ ಟಿಕೇಟ್ ಕೇಳಿದ್ದಾರೆ. ಅಷ್ಟೇ ಅಲ್ಲ ಹೈಕಮಾಂಡ ಎದುರು ತಮಗೆ ಟಿಕೇಟ್ ನೀಡುವಂತೆ ಲಾಭಿ ನಡೆಸಿದ್ರೂ ಅಷ್ಟೊಂದು ವರ್ಕೌಟ್ ಆಗಿಲ್ಲ ಎನ್ನಲಾಗಿದೆ. ಇನ್ನೂ ಸುರೇಶ ತಳವಾರ ವೃತ್ತಿಯಲ್ಲಿ ಗುತ್ತಿಗೆದಾರ, ಅಷ್ಟೇ ಅಲ್ಲ ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ಹಾಗೂ ದಲಿತ ಮತಗಳ ಕ್ರೂಢೀಕರಣಕ್ಕೆ ಹಲವು ವರ್ಷಗಳಿಂದ ಕೆಳಮಟ್ಟದಿಂದ ಕೆಲಸ  ಮಾಡುತ್ತಿದ್ದಾರೆ. ಇನ್ನೂ ಸುರೇಶ ತಳವಾರ ಶಾಸಕರಾದ ಸತೀಶ ಜಾರಕಿಹೋಳಿ, ರಮೇಶ ಜಾರಕಿಹೋಳಿ ಹಾಗೂ ವಿಧಾನಪರಿಷತ್ ಸದಸ್ಯ ವಿವೇಕರಾವ್ ಪಾಟೀಲ್ ಅವರ ಅಪ್ತ ವಲಯದಲ್ಲಿ ಗುರ್ತಿಸಿಕೊಂಡವರು. ಅಷ್ಟೇ ಅಲ್ಲ ರಾಜ್ಯಮಟ್ಟದಲ್ಲಿ ಡಾ.ಎಚ್.ಸಿ.ಮಹಾದೇವಪ್ಪ, ಜಿ.ಪರಮೇಶ್ವರ ಅವರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದಾರೆ

ಈಗಾಗಲೇ ಮಲ್ಲಿಕಾರ್ಜುನ ಖರ್ಗೆ ಅವರನ್ನ ಭೇಟಿ ಮಾಡಿದ್ದು, ಅವರು ಸಹ ಸುರೇಶ ತಳವಾರ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ ಅಂತಾ ಗೊತ್ತಾಗಿದೆ.

ಇನ್ನೂ ಕುಡಚಿ ಕ್ಷೇತ್ರದ ಮೇಲೆ ವಿವೇಕರಾವ್ ಪಾಟೀಲ್ ಹಿಡಿತ ಇರುವುದರಿಂದ ಅವರೂ ಸಹ ಸುರೇಶ ತಳವಾರ ಸ್ಪರ್ಧೆಗೆ ಹಸಿರು ನಿಶಾನೆ ತೋರಿಸಿದ್ದಾರೆ ಎನ್ನಲಾಗಿದೆ. ಸದ್ಯ ಸಿಕ್ಕಿರುವ ಕಾಂಗ್ರೆಸ್ ಉನ್ನತ ಮೂಲಗಳ ಮಾಹಿತಿ ಪ್ರಕಾರ ಕಾಂಗ್ರೆಸ್ ಸ್ಕ್ರೀನಿಂಗ್ ಕಮೀಟಿಯಲ್ಲೂ ಸುರೇಶ ತಳವಾರ ಒಂದೇ ಹೆಸರು ಶಿಪ್ಪಾರಸ್ಸು ಆಗಿದೆ ಎನ್ನಲಾಗಿದೆ. ಕಳೆದೆರಡು ದಿನಗಳಿಂದ ನಡೆದಿರುವ ವಿದ್ಯಮಾನಗಳ ಪ್ರಕಾರ ಸುರೇಶ ತಳವಾರ ಗೆ ಟಿಕೇಟ್ ಪಕ್ಕಾ ಅಂತಾ ಹೇಳಲಾಗುತ್ತಿದೆ.

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *