Breaking News
Home / Breaking News / ಬೆಳಗಾವಿ ಜಿಲ್ಲೆಯಲ್ಲಿ ಷಾ…ಶೋ..ಕ್ಯಾನ್ಸಲ್

ಬೆಳಗಾವಿ ಜಿಲ್ಲೆಯಲ್ಲಿ ಷಾ…ಶೋ..ಕ್ಯಾನ್ಸಲ್

ಬೆಳಗಾವಿ- ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮೀತ ಷಾ ಬೆಳಗಾವಿಗೆ ಬರುತ್ತಾರೆಂದು ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಿದ್ಧತೆ ಮಾಡಿಕೊಂಡಿದ್ದ ಬಿಜೆಪಿ ನಾಯಕರಿ ಅಮೀತ ಷಾ ಕಾರ್ಯಕ್ರಮವನ್ನು ಧಿಡೀರ್ ರದ್ದು ಮಾಡಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಶಾಕ್ ನೀಡಿದ್ದಾರೆ

ಇವತ್ತಿನ‌ ಅಮಿತ್ ಶಾ ಮುಂಬೈ ಕರ್ನಾಟಕ ಪ್ರವಾಸ ದಿಢೀರ್ ರದ್ದಾಗಿದೆ. ಇಂದಿನಿಂದ ಎರಡು ದಿನಗಳ ಕಾಲ ಪ್ರವಾಸ ಮಾಡಲಿದ್ದ ಅಮಿತ್ ಶಾ ಪ್ರವಾಸ ಮುಂದೂಡಲಾಗಿದೆ. ಸಂಸತ್ತಿನಲ್ಲಿ ಸಿಜೆಐ ವಿರುದ್ದ ಮಹಾಭಿಯೋಗ ಮಂಡನೆಯಿದ್ದು. ಸಂಸತ್ತಿನಲ್ಲಿ ವಿಪಕ್ಷಗಳು ಪ್ರಸ್ತಾಪ ಮಂಡಿಸುವ ಹಿನ್ನೆಲೆ ಸಂಸತ್ ಕಲಾಪದಲ್ಲಿ ಭಾಗವಹಿಸಲು ಪ್ರವಾಸ ಮುಂದುಡಲಾಗಿದೆ. ಆದ್ರೆ. ಏಪ್ರೀಲ್ 12, 13 ರಂದು ಮುಂಬೈ ಕರ್ನಾಟಕ ಪ್ರವಾಸ ಮಾಡಲಿದ್ದಾರೆ ಎಂದು ಬಿಜೆಪಿ ಮುಖಂಡ ಈರಣ್ಣ ಕಡಾಡಿ ತಿಳಿಸಿದ್ದಾರೆ. ಇಷ್ಟೇಲ್ಲದೇ, ಅಮಿತ್ ಶಾ ನಾಳೆ ಸಂಜೆ ಕಾಗಿನೆಲೆ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾವೇರಿ ಜಿಲ್ಲೆಯ ಕಾಗಿನೆಯಲ್ಲಿ ನಡೆಯಲಿರುವ ಒಬಿಸಿ ಕಾರ್ಯಕ್ರಮದಲ್ಲಿ
ಅಮಿತ್ ಶಾ ಜೊತೆಗೆ ಮಧ್ಯಪ್ರದೇಶ ಸಿಎಂ ಶಿವರಾಜಸಿಂಗ್ ಚೌಹಾಣ್ ಸಹ ಭಾಗವಹಿಸುವರು ಎಂದು ಹೇಳಿದ್ದಾರೆ

ಅಮೀತ ಷಾ ಬೆಳಗಾವಿ ಜಿಲ್ಲೆಯ ಪ್ರವಾಸ ಹಿನ್ನಲೆಯಲ್ಲಿ ಬೆಖಗಾವಿ ಜಿಲ್ಲೆಯ ಬಿಜೆಪಿ ಮುಖಂಡರು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು ರಾಷ್ಟ್ರೀಯ ಅಧ್ಯಕ್ಷ ಅಮೀತ ಷಾ ಅವರನ್ನು ಸ್ವಾಗತ ಕೋರಿ ದಿನಪತ್ರಿಕೆ ಗಳಲ್ಲಿ ಪುಟಗಟ್ಟಲೆ ಜಾಹಿರಾತು ನೀಡಲಾಗಿತ್ತು ನಿಪ್ಪಾಣಿ ಯಲ್ಲಿ ಬಿಜೆಪಿ ಮಹಿಳಾ ಸಮಾವೇಶಕ್ಕಾಗಿ ಪೆಂಡಾಲ್ ಹಾಕಲಾಗಿತ್ತು ಕಾರ್ಯಕ್ರಮ ಧಿಡೀರ್ ರದ್ದಾದ ಹಿನ್ನಲೆಯಲ್ಲಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರಲ್ಲಿ ನಿರಾಶೆ ಮೂಡಿದೆ

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *