Breaking News
Home / Breaking News / ಮೂವರು ಅಭ್ಯರ್ಥಿಗಳು ಮೂರಾಬಟ್ಟಿಯಾದ ಎಂಇಎಸ್

ಮೂವರು ಅಭ್ಯರ್ಥಿಗಳು ಮೂರಾಬಟ್ಟಿಯಾದ ಎಂಇಎಸ್

ಬೆಳಗಾವಿ: ಗಡಿಭಾಗದ ಬೆಳಗಾವಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದೆ. ಎಂಇಎಸ್ ಸಂಘಟಣೆಗೆ ಬಂಡಾಯದ ರೋಗ ತಗಲಿದ್ದು, ಬೆಳಗಾವಿ ದಕ್ಷಿಣ, ಉತ್ತರ, ಗ್ರಾಮೀಣ ಹಾಗೂ ಖಾನಾಪೂರ ಕ್ಷೇತ್ರದಲ್ಲಿ ಎಂಇಎಸ್ ಅಭ್ಯರ್ಥಿಗಳು ಬಂಡಾಯದ ಬಾವುಟ ಹಾರಿಸಿದ್ದಾರೆ.

ಬೆಳಗಾವಿ ಉತ್ತರದಲ್ಲಿ ಶಾಸಕ ಸಂಭಾಜಿ ಪಾಟೀಲ ಬೆಳಗಾವಿ ದಕ್ಷಿಣದಿಂದ ಉತ್ತರ ಕ್ಷೇತ್ರಕ್ಕೆ ಪಲಾಯಣ ಮಾಡಿ ಇವರ ವಿರುದ್ಧ ಎಂಇಎಸ್ ನಾಯಕ ಬಾಳಾಸಾಹೇಬ ಕಾಕತಕರ ಬಂಡಾಯದ ಬಾವುಟ ಹಾರಿಸಿದ್ದು, ಇಬ್ಬರೂ ಕಣದಲ್ಲಿ ಉಳಿದುಕೊಂಡಿದ್ದಾರೆ.
ಬೆಳಗಾವಿ ದಕ್ಷಿಣದಲ್ಲಿ ಎಂಇಎಸ್ ನಾಯಕ ಮಾಜಿ ಮೇಯರ್ ಕಿರಣ ಸಾಯೀನಾಯಕ ವಿರುದ್ಧ ಪ್ರಕಾಶ ಮರಗಾಳೆ ಬಂಡಾಯದ ಬಾವುಟ ಹಾರಿಸಿ ಕಣದಲ್ಲಿ ಉಳಿದುಕೊಂಡಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ  ಎಂಇಎಸ್ ಮಾಜಿ ಶಾಸಕ ಮನೋಹರ ಕೀಣೇಕರ ವಿರುದ್ಧ ನಗರ ಸೇವಕ ಗ್ರಾಮೀಣ ಕ್ಷೇತ್ರದ ಎಂಇಎಸ್ ಯುವ ನಾಯಕ ಮೋಹನ ಬೆಳಗುಂದಕರ ಹಾಗೂ ಜಿಲ್ಲಾ ಪಂಚಾಯತ ಸದಸ್ಯ ಮೋಹನ ಮೋರೆ ಬಂಡಾಯದ ಬಾವುಟ ಹಾರಿಸಿದ್ದಾರೆ.
ಒಟ್ಟಾರೆ ಎಂಇಎಸ್ ಸಂಘಟಣೆ ಬಂಡಾಯದ ಬೇಗುದಿಯಲ್ಲಿ ಸಿಲುಕಿ ಎಲ್ಲ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡು ಎಂಇಎಸ್ ಸಂಘಟಣೆಯನ್ನು ಮೂರಾಬಟ್ಟೆ ಮಾಡಿದ್ದಾರೆ

ಮಾಜಿ ಶಾಸಕ ಮನೋಹರ ಕಿನೇಕರ ಹಾಗು ಕಿರಣ ಠಾಖೂರ ನಡುವಿನ ಜಟಾಪಟಿ ಮುಂದುವರೆದಿದ್ದು ಬೆಳಗಾವಿ,ಉತ್ತರ ದಕ್ಷಿಣ,ಬೆಳಗಾವಿ ಗ್ರಾಮೀಣ,ಖಾನಾಪೂರ ಕ್ಷೇತ್ರಗಳಲ್ಲಿ ಎರಡೂ ಬಣಗಳ ಅಭ್ಯರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *