Breaking News
Home / Breaking News / ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕುಮಾರಸ್ವಾಮಿ ವಿಶ್ವಾಸಮತ ?

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕುಮಾರಸ್ವಾಮಿ ವಿಶ್ವಾಸಮತ ?

ಬೆಳಗಾವಿ ಜಿಲ್ಲೆಯಿಂದ ಮಂತ್ರಿ ಯಾರಾಗ್ತಾರೆ?
ಬೆಳಗಾವಿ- ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸಮತ ಗಳಿಸುವಲ್ಲಿ ವಿಫಲರಾಗಿ ರಾಜಿನಾಮೆ ನೀಡುತ್ತಿದ್ದಂತೆಯೇ ಬೆಳಗಾವಿ ಜಿಲ್ಲೆಯಿಂದ ಮಂತ್ರಿ ಯಾರಾಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ
ರಮೇಶ ಜಾರಕಿಹೊಳಿನಾ?ಸತೀಶ ಜಾರಕಿಹೊಳಿನಾ? ಅಥವಾ ಲಕ್ಷ್ಮೀ ಹೆಬ್ಬಾಳಕರನಾ? ಎನ್ನುವ ಚರ್ಚೆ ಈಗ ಶುರುವಾಗಿದೆ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರು ಯಾರಾಗ್ತಾರೆ ಎನ್ನುವ ಪ್ರಶ್ನೆ ಕೂಡಾ ರಾಜಕೀಯ ನಾಯಕರಲ್ಲಿ ಮನೆ ಮಾಡಿದೆ
ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಕೋಟಾದಲ್ಲಿ ಲಕ್ಷ್ಮೀ ಹೆಬ್ಬಾಳಕರ ಮಂತ್ರಿ ಆಗೋದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ ಆದರೆ ಸತೀಶ ಜಾರಕೊಹೊಳಿ ಉಸ್ತುವಾರಿ ಸಚಿವರಾಗ್ತಾರಾ ಅಥವಾ ರಮೇಶ ಜಾರಕೊಹೊಳಿ ಜಿಲ್ಲಾ ಮಂತ್ರಿಯಾಗಿ ಮುಂದುವರೆಯುತ್ತಾರೆ ಎನ್ನುವದನ್ನು ಕಾದು ನೋಡಬೇಕಾಗಿದೆ
ಕುಮಾರಸ್ವಾಮಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿಯೇ ವಿಶ್ವಾಸಮತ ಗಳಿಸುವ ಸಾಧ್ಯತೆ ಇದೆ ಹೀಗಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಬೆಳಗಾವಿಗೆ ಶಿಪ್ಟ ಆಗುವ ಸಾಧ್ಯತೆ ಇದೆ

About BGAdmin

Check Also

ಇಂದು ಸಂಜೆ ಬೆಳಗಾವಿಯ ಎಲ್ಲ ಮುಸ್ಲಿಂ ಜಮಾತ್ ಗಳಿಂದ ಬೃಹತ್ ಕ್ಯಾಂಡಲ್ ಮಾರ್ಚ್

ಬೆಳಗಾವಿ- ಇತ್ತೀಚಿಗೆ ಕಾಶ್ಮೀರದಲ್ಲಿ ಉಗ್ರರ ದಾಳಿಗ ವೀರಮರಣ ಹೊಂದಿದ ವೀರ ಜವಾನರಿಗೆ ಶೃದ್ಧಾಂಜಲಿ ಅರ್ಪಿಸಲು ಬೆಳಗಾವಿ ನಗರದ ಎಲ್ಲ ಮುಸ್ಲೀಂ …

Leave a Reply

Your email address will not be published. Required fields are marked *