Breaking News
Home / Breaking News / ನಾನು ನನ್ನ ಹೆಂಡತಿ,ಮಕ್ಕಳನ್ನು ಪ್ರೀತಿಸುತ್ತಿದ್ದೆ

ನಾನು ನನ್ನ ಹೆಂಡತಿ,ಮಕ್ಕಳನ್ನು ಪ್ರೀತಿಸುತ್ತಿದ್ದೆ

ಬೆಳಗಾವಿ- ಬೆಳಗಾವಿಯ ಖ್ಯಾತನಾಮ ಅಮೃತ ಮಲಾಮ ಮಾಲೀಕ ಶೈಲೇಂದ್ರ ಜೋಶಿ ನಿನ್ನೆ ಮದ್ಯರಾತ್ರಿ ಡೆತ್ ನೋಟ್ ‌ ಬರೆದಿಟ್ಟು ರಿವಾಲ್ವರ್ ನಿಂದ ತೆಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿಯ ವಿಜಯನಗರದಲ್ಲಿ ನಡೆದಿದೆ

43 ವರ್ಷ ವಯಸ್ಸಿನ ಶೈಲೇಶ್ ಜೋಶಿ ಹಲವಾರು ವರ್ಷಗಳಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಜೀವನದಲ್ಲಿ ಚಿಗುಪ್ಸೆಗೊಂಡು ತಡರಾತ್ರಿ ನಾನು ನನ್ನ ಹೆಂಡತಿ ಹಾಗೂ ಮಕ್ಕಳನ್ನು ಪ್ರೀತಿಸುತ್ತಿದ್ದೆ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

ಮದ್ಯರಾತ್ರಿ ನೋವು ತಾಳಲಾರದೆ ಮನೆಯಲ್ಲಿ ಲೈಸನ್ಸ ಹೊಂದಿದ ರಿವಾಲ್ವರ್ ನಿಂದ ಗುಂಡು ಹಾರಿಸಿಕೊಂಡು ತಮ್ಮ ಮನೆಯಲ್ಲೇ ಪ್ರಾಣ ಬಿಟ್ಟಿದ್ದಾರೆ

ಬೆಳಗಾವಿಯ ಖ್ಯಾತನಾಮ ಅಮೃತ ಮಲಾಮ ಕಂಪನಿಯ ಮಾಲೀಕರಾಗಿದ್ದ ಶೈಲೇಶ್ ಜೋಶಿ ಇಬ್ಬರು ಪುತ್ರಿಯರನ್ನು ರನ್ನು ಹೊಂದಿದ್ದಾರೆ ಮಾದ್ಯಮಗಳ ಜೊತೆ ಮಾತನಾಡಿದ ಶೈಲೇಶ್ ಅವರ ತಾಯಿ ಶೈಲೇಶ್ ಹಲವಾರು ವರ್ಷಗಳಿಂದ ಲಿವರ್ ಪ್ರಾಬ್ಲಮ್ ನಿಂದ ಬಳಲುತ್ತಿದ್ದ ಆತನ ಲಿವರ್ ಟ್ರಾನ್ನಪ್ಲಾಂಟ್ ಮಾಡುವ ಪ್ರಯತ್ನ ದಲ್ಲಿರುವಾಗಲೇ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ

ಅಮೃತ ಫಾರ್ಮಾಟಿಕಲ್ಸ ಮೂಲಕ ನೂರಾರು ಜನರಿಗೆ ಉದ್ಯೋಗ ಕೊಡಸಿದ್ದ ಶೈಲೇಶ್ ಜೋಶಿ ಮದ್ಯರಾತ್ರಿ ಎರಡು ಘಂಟೆಗೆ ಆತ್ಮಹತ್ಯೆ ಮಾಡಿಕೊಂಡ ಸುದ್ಧಿ ಹರಡುತ್ತಿದ್ದಂತೆಯೇ ಸಾವಿರಾರು ಜನ ಅವರ ಮನೆ ಎದುರು ಸೇರಿದ್ದಾರೆ

ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ತನಿಖೆ ಮುಂದುವರೆದಿದೆ

About BGAdmin

Check Also

ಬೆಳಗಾವಿಗೆ ಐಐಐಟಿ ಬರುವದನ್ನು ತಪ್ಪಸಿದವರೇ ಸುರೇಶ್ ಅಂಗಡಿ- ಲಕ್ಷ್ಮೀ ಹೆಬ್ಬಾಳಕರ ಆರೋಪ

ಬೆಳಗಾವಿ-ನುಡಿದಂತೆ ನಡೆದಿದ್ದೇನೆ.ಅಲ್ಪಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ,ಲೋಕಸಭಾ ಚುನಾವಣೆ ನನ್ನ ಗೌರವದ …

Leave a Reply

Your email address will not be published. Required fields are marked *