Breaking News
Home / Breaking News / ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿದ್ದು ಯಾಕೆ ಗೊತ್ತಾ…?

ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ತಪ್ಪಿದ್ದು ಯಾಕೆ ಗೊತ್ತಾ…?

ಬೆಳಗಾವಿ – ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಘಟಾನುಘಟಿ ಕಾಂಗ್ರೆಸ್ ಅಭ್ಯರ್ಥಿಗಳನ್ಮು ಸೋಲಿಸಿದವರ್ಯಾರು ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ ಆದ್ರೆ ಸೋಲು ಅನುಭವಿಸಿದವರು ಸೋಲಿಸಿದ ನಾಯಕರ ಹೆಸರನ್ನು ಬಹಿರಂಗವಾಗಿ ಹೇಳದೇ ರಾಹುಲ್ ಗಾಂಧಿ ಅವರಿಗೆ ಲಿಖಿತ ದೂರು ನೀಡಿ ನಮ್ಮನ್ನು ಸೋಲಿಸಿದವರಿಗೆ ಸಚಿವ ಸ್ಥಾನ ನೀಡೀದ್ರೆ ಸಾಮೂಹಿಕವಾಗಿ ರಾಜೀನಾಮೆ ನೀಡುತ್ತೇವೆ ಎಂದು ದೂರು ಕೊಟ್ಟ ಹಿನ್ನಲೆಯಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಕೈತಪ್ಪಿರುವದು ಸತ್ಯ ಸಂಗತಿಯಾಗಿದೆ

ಪ್ರಸಕ್ತ ವಿಧಾಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿದ ಅಶೋಕ ಪಟ್ಟಣ,ಫಿರೋಜ್ ಸೇಠ , ಆನಂದ ಚೋಪ್ರಾ ಡಿಬಿ ಇನಾಮದಾರ ಹಾಗೂ ಪ್ರದೀಪ ಮಾಳಗಿ ಅವರು ನಮ್ಮ ಸೋಲಿಗೆ ಸತೀಶ ಜಾರಕಿಹೊಳಿ ಅವರೇ ಕಾರಣ ಅವರಿಗೆ ಮಂತ್ರಿ ಮಾಡಿದ್ರೆ ನಾವೆಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಸಾಮಹಿಕ ರಾಜೀನಾಮೆ ಕೊಡುತ್ತೇವೆ ಎಂದು ರಾಹುಲ್ ಗಾಂಧೀ ಅವರಿಗೆ ಲಿಖಿತ ದೂರು ನೀಡಿದ ಹಿನ್ನಲೆಯಲ್ಲಿ ಸತೀಶ ಜಾರಕಿಹೊಳಿ ಅವರಿಗೆ ಕೊನೆ ಘಳಿಗೆಯಲ್ಲಿ ಮಂತ್ರಿ ಸ್ಥಾನ ಕೈ ತಪ್ಪಿರುವದು ಬಹಿರಂಗ ಸತ್ಯವಾಗಿದೆ

ಬೆಳಗಾವಿ ಜಿಲ್ಲೆಯಿಂದ ಮುಂದೆ ಯಾರು ಮಂತ್ರಿ ಆಗಬಹುದು ಮಂತ್ರಿಯಾಗಲು ಯಾರ್ಯಾರು ನಮಗೆ ಪೈಪೋಟಿ ನೀಡಬಹುದು ಎನ್ನುವ ಮುಂದಶಲೋಚನೆಯಿಂದ ಸತೀಶ ಜಾರಕಿಹೊಳಿ ನನ್ನನ್ನು ಸೋಲಿಸಿದ್ದಾರೆ ಎಂದು ಅಶೋಕ ಪಟ್ಟಣ ರಾಹುಲ್ ಗಾಂಧಿಯವರನ್ನು ಖುದ್ದಾಗಿ ಭೇಟಿಯಾಗಿ ದೂರು ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ

ಜೊತೆಗೆ ಡಿಬಿ ಇನಾಮದಾರ್ ಸವದತ್ತಿಯ ಆನಂದ ಚೋಪ್ರಾ ರಾಯಬಾಗದ ಪ್ರದೀಪ ಮಾಳಗಿ ಸೇರಿತೆ ಚುನಾವಣೆಯಲ್ಲಿ ಪರಾಭವಗೊಂಡ ಅನೇಕ ಜನ ಅಭ್ಯರ್ಥಿಗಳು ನಮ್ಮ ಸೋಲಿಗೆ ಸತೀಶ ಜಾರಕಿಹೊಳಿ ಅವರೇ ಕಾರಣ ಎಂದು ದೂರು ಕೊಟ್ಡ ಹಿನ್ನಲೆಯಲ್ಲಿ ಸತೀಶ್ ಅವರಿಗೆ ಕೊನೆ ಘಳಿಗೆಯಲ್ಲಿ ಮಂತ್ರಿ ಸ್ಥಾನ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ

ಒಂದು ಕಡ ಸತೀಶ ಜಾರಕಿಹೊಳಿ ಬೆಂಬಲಿಗರು ಸರೀಶ್ ಅವರಿಗೆ ಮಂತ್ರಿ ಮಾಡದಿದ್ದರೆ ಸಾಮೂಹಿಕ ರಾಜೀನಾಮೆ ಕೊಡ್ತೇವಿ ಅಂತ ಬೆದರಿಕೆ ಸಂದೇಶ ಕಳುಹಿಸಿದರೆ ಇನ್ನೊಂದು ಕಡೆ ಸತೀಶ್ ಅವರನ್ನು ಮಂತ್ರಿ ಮಾಡಿದ್ರೆ ನಾವೇ ಪಕ್ಷಕ್ಕೆ ರಾಜೀನಾಮೆ ಕೊಡ್ತೇವಿ ಎಂದು ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ಹೇರಿದ ಪರಿಣಾಮ ಹೈಕಮಾಂಡ್ ಗೊಂದಲದಲ್ಲಿದೆ ಎಂದು ಹೇಳಲಾಗುತ್ತದೆ

ಒಟ್ಟಾರೆಯಾಗಿ ಬೆಳಗಾವಿ ಜಿಲ್ಲೆಯ ಮಂತ್ರಿ ಸ್ಥಾನ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು ಲಕ್ಷ್ಮೀ ಹೆಬ್ಬಾಳಕರ ಕೂಡಾ ಮಂತ್ರಿ ಸ್ಥಾನ ತಪ್ಪಿದ್ದಕೆ ಸುಮ್ಮನೇ ಕೂರುವದಿಲ್ಲ ಎಂದು ಹೇಳಿಕೆ ನೀಡಿ ತಮ್ಮ ಅಸಮಾಧಾನ ಹೊರಗೆ ಹಾಕಿದ್ದಾರೆ

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಬಿ ಪಾಟೀಲ ಕೂಡಾ ಸತೀಶ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದು ವಿಶೇಷವಾಗಿದೆ

About BGAdmin

Check Also

ಧಾರವಾಡದ ಕಟ್ಟಡದ ಅವಶೇಷದಲ್ಲಿ ಬದುಕುಳಿದ ಬೆಳಗಾವಿ ಜಿಲ್ಲೆಯ ಯುವಕ

75 ಘಂಟೆಗಳ ಬಳಿಕವೂ ಬದುಕುಳಿದ ಸವದತ್ತಿ ತಾಲ್ಲೂಕಿನ ಯುವಕ ಬೆಳಗಾವಿ- ಸವದತ್ತಿ ಯಲ್ಲಮ್ಮ ದೇವಿಯ ಪವಾಡವೋ ಅಥವಾ ಆತನ ಅದೃಷ್ಟ …

Leave a Reply

Your email address will not be published. Required fields are marked *