Breaking News
Home / Breaking News / ಬೆಳಗಾವಿಯ ಸೊಸೈಟಿಯಲ್ಲಿ ಅಡವಿಟ್ಟ ನಾಲ್ಕು ಕೆಜಿ ಬಂಗಾರ ಸ್ವಾಹಾ…..!!!

ಬೆಳಗಾವಿಯ ಸೊಸೈಟಿಯಲ್ಲಿ ಅಡವಿಟ್ಟ ನಾಲ್ಕು ಕೆಜಿ ಬಂಗಾರ ಸ್ವಾಹಾ…..!!!

ಬೆಳಗಾವಿ- ಸೊಸೈಟಿಯಲ್ಲಿ ಅಡವಿಟ್ಟ 4 ಕೆಜಿ ಬಂಗಾರ ನಾಪತ್ತೆಯಾದ ಘಟನೆ ಬೆಳಗಾವಿಯ ಬಾಪಟಗಲ್ಲಿಯ ಶ್ರೀಕಾಳಿಕ ದೈವಜ್ಞ ಸಹಕಾರಿ ಸೊಸೈಟಿಯಲ್ಲಿ ನಡೆದಿದೆ

ಕೃತ್ಯ ಸೊಸೈಟಿ ಸಿಬ್ಬಂದಿಯಿಂದಲೇ ನಡೆದಿದ್ದು ನೂರಾರು ಗ್ರಾಹಕರಿಗೆ ಪಂಗನಾಮ ಹಾಕಿದ ಪ್ರಕರಣದ ಕುರಿತು ಸೊಸೈಟಿ ಚೇರ್ಮನ್ ಶಶಿಕಾಂತ ಕಾರೇಕರ್ ಖಡೇಬಜಾರ್ ಠಾಣೆಗೆ ದೂರು ನೀಡಿದ್ದಾರೆ

ಸೊಸೈಟಿ ಮ್ಯಾನೆಜರ್ ಮಂಗೇಶ ಶಿರೋರ್ಡರ್ ವಿರುದ್ಧ ವಂಚನೆ ಆರೋಪ ಮಾಡಲಾಗಿದ್ದು
ವಂಚನೆಗೈದು ಪರಾರಿಯಾಗಿದ್ದ ಮ್ಯಾನೆಜರ್ ಸೇರಿ 3 ಜನರ ಬಂಧನ ಮಾಡಲಾಗಿದೆ

ಮ್ಯಾನೆಜರ್ ಮಂಗೇಶ ಶಿರೋರ್ಡಕರ್, ಸಿಬ್ಬಂಧಿಗಳಾದ ಶ್ರೀಶೈಲ ತಾರಿಹಾಳ,
ಮಾರುತಿ ರಾಯ್ಕರ್ ಬಂಧಿತ ಆರೋಪಿಗಳಗಾಗಿದ್ದಾರೆ
ಸೊಸೈಟಿ ನೂರಾರು ಗ್ರಾಹಕರು ಚಿನ್ನಾಭರಣವನ್ನು ಅಡವಿಟ್ಟಿದ್ದರು ಅಡವಿಟ್ಟ ಚಿನ್ನವನ್ನು ಮ್ಯಾನೆಜರ್ ಸೇರಿ ಮೂರು ಜನ ದುರ್ಬಳಕೆ ಮಾಡಿಕೊಂಡಿದ್ದಾರೆ
ಚಿನ್ನವನ್ನ ಬೇರೆ ಬೇರೆ ಬ್ಯಾಂಕನಲ್ಲಿ ಮತ್ತೆ ಅಡವಿಟ್ಟು ಹಣ ಪಡೆದಿದ್ದರು ಹೀಗೆ ಬಂದ 83 ಲಕ್ಷ ಹಣವನ್ನು ವೈಯಕ್ತಿಕ ಕಾರಣಕ್ಕೆ ಬಳಿಸಿಕೊಂಡಿದ್ದರು

ಬಂಧಿತ ಆರೋಪಿಗಳನ್ನು 4 ದಿನ ಪೊಲೀಸ ವಶಕ್ಕೆ ನೀಡಿದ ನ್ಯಾಯಾಲಯ
ಬೆಳಗಾವಿಯ ಮೂರುನೇ ಜೆಎಂಎಫ್ಸಿ ನ್ಯಾಯಾಲಯ

About BGAdmin

Check Also

ಕಾಂಗ್ರೆಸ್ ಟಿಕೆಟ್ ಗಾಗಿ ರಮೇಶ್ ಗೆ ರಮೇಶ್ ದುಂಬಾಲು…..!!

ಬೆಳಗಾವಿ- ಲೋಕಸಭೆ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿ ಆಕಾಂಕ್ಷಿಗಳ ಲಾಭಿ ಜೋರಾಗಿಯೇ ನಡೆದಿದೆ ಬೆಳಗಾವಿಯಿಂದ ಎರಡು ಬಾರಿ ಶಾಸಕರಾಗಿದ್ದ ರಮೇಶ್ ಕುಡಚಿ …

Leave a Reply

Your email address will not be published. Required fields are marked *