Breaking News
Home / Breaking News / ಸಂವಿಧಾನ ಸುಟ್ಟವರಿಗೆ ಗಲ್ಲು ಶಿಕ್ಷೆ ಕೊಡಿ

ಸಂವಿಧಾನ ಸುಟ್ಟವರಿಗೆ ಗಲ್ಲು ಶಿಕ್ಷೆ ಕೊಡಿ

ಬೆಳಗಾವಿ : ದೆಹಲಿಯಲ್ಲಿ ಇತ್ತೀಚೆಗೆ ಜಂತರಮಂತರ್ ಮೈದಾನದಲ್ಲಿ ದೇಶ ದ್ರೋಹಿಗಳು ಪವಿತ್ರವಾದ ಮೀಸಲಾತಿ ಹಾಗೂ ಎಸ್ಸಿ,ಎಸ್ಟಿ  ಕಾಯ್ದೆಯನ್ನು ವಿರೋಧಿಸಿ ಸಂವಿಧಾನವನ್ನು ಸುಟ್ಟವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಮಂಗಳವಾರ ವಿವಿಧ ದಲಿತ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಪ್ರಪಂಚದ ಯಾವ ರಾಷ್ಟ್ರದಲ್ಲೂ ಇರದ ಮೀಸಲಾತಿ ಭಾರತದಲ್ಲಿ ಏಕೆ ಎಂದು ವಾದ ಮಾಡುವ ಮತ್ತು ಆರ್ಥಿಕ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಎನ್ನುವ ಬಂಡವಾಳಶಾಯಿ ಭಂಡರಿಗೆ ಸಂವಿಧಾನದ ಅರಿವಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ ಚೌಗಲೆ, ಅರ್ಜುನ ದೆಮಟ್ಟಿ, ಮಲ್ಲೇಶ ಕವಣಗಿ, ಜೀವನಕುಮಾರ ಕುರೆ, ರವಿ ಬಸ್ತವಾಡ್ಕರ,  ವಿನಾಯಕ ಕೋಲಕಾರ, ವಿನೋದ ಸೋಲ್ಲಾಪೂರೆ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *