Breaking News
Home / Breaking News / ನಾಪತ್ತೆಯಾದ ಯುವಕನ ಶವ ತಿಲ್ಲಾರಿ ಘಾಟಿನಲ್ಲಿ ಪತ್ತೆ

ನಾಪತ್ತೆಯಾದ ಯುವಕನ ಶವ ತಿಲ್ಲಾರಿ ಘಾಟಿನಲ್ಲಿ ಪತ್ತೆ

ಬೆಳಗಾವಿ- ಅಗಸ್ಟ10 ರಂದು ನಾಪತ್ತೆಯಾದ ಯುವಕನ ಶವ ಇಂದು ತಿಲ್ಲಾರಿ ಘಾಟ ಬಳಿ ಪತ್ತೆಯಾಗಿದ್ದು ತಿಳಕವಾಡಿ ಪೋಲೀಸರು ಸ್ಥಳಕ್ಕೆ ಧಾವಿಸಿದ್ದಾರೆ

ಯಳ್ಳೂರ ರಸ್ತೆಯ ಅನ್ನಪೂರ್ಣೇಶ್ವರಿ ನಗರದ ನಿವಾಸಿ 27 ವರ್ಷದ ರಾಹುಲ್ ಶರಣಪ್ಪ ದಿವಟಗಿ ಎಂಬ ಯುವಕ ಅಗಸ್ಟ 10 ರಂದು ನಾಪತ್ತೆಯಾಗಿದ್ದ ಅದೇ ದಿನ ಆತನ ಅಪಹರಣ ನಡೆದಿತ್ತು ಎಂದು ಹೇಳಲಾಗಿದ್ದು ಡಿಳಕವಾಡಿ ಪೋಲೀಸರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲು ಮಾಡಿಕೊಂಡು ಅಷ್ಡೊಂದು ಸಿರೀಯಸ್ ಆಗಿ ತೆಗೆದುಕೊಂಡಿರಲಿಲ್ಲ ಎಂದು ಹೇಳಲಾಗಿದೆ

ಇಂದು ಬೆಳಿಗ್ಗೆ ಅಪಹರಣಕ್ಕೊಳಗಾಗಿ ನಾಪತ್ತೆಯಾದ ಈ ಯುವಕನ ಶವ ತಿಲ್ಲಾರಿ ಘಾಟಿನಲ್ಲಿ ಸಿಕ್ಕಿದೆ ಎಂಬ ಮಾಹಿತಿ ದೊರಕುತ್ತಿದ್ದಂತೆಯೇ ಟಿಳಕವಾಡಿ ಠಾಣೆಯ ಪೋಲೀಸರ ತಂಡ ತಿಲ್ಲಾರಿ ಘಾಟಿಗೆ ದೌಡಾಯಿಸಿದೆ

ಈ ಪ್ರಕರಣಕ್ಕೆ ಸಮಂಧಿಸಿದಂತೆ ಪೋಲೀಸರು ಓರ್ವನನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದು ಮುಖ್ಯ ಆರೋಪಿಯ ಪತ್ತೆಗೆ ಪೋಲೀಸರು ಜಾಲ ಬೀಸಿದ್ದಾರೆ

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *