Breaking News
Home / Breaking News / ಬರ ಪರಿಹಾರ ಕಾಮಗಾರಿ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ದೇಶಪಾಂಡೆ

ಬರ ಪರಿಹಾರ ಕಾಮಗಾರಿ,ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಚಿವ ದೇಶಪಾಂಡೆ

ಬೆಳಗಾವಿ
ಬರಗಾಲ‌ ಬಿದಿದ್ದಿದೆ. ಅಧಿಕಾರಿಗಳು ಧನ ಕಾಯ್ತಿರೋ ಅಥವಾ ಕೆಲಸ ಮಾಡುತ್ತಿರೋ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ದೇಶಪಾಂಡೆ ತರಾಟೆಗೆ ತೆಗೆದುಕೊಂಡರು.
ಶನಿವಾರ ಜಿಪಂ ಸಭಾಂಗಣದಲ್ಲಿ ಜಿಲ್ಲೆಯ ಕಂದಾಯ ಇಲಾಖೆ ಹಾಗೂ ಪ್ರಕೃತಿ ವಿಕೋಪಗಳಿಗೆ ಸಂಬಂಧಿಸಿದ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಅಧಿಕಾರಿಗಳಿಗೆ ನೇರವಾಗಿ ಹಂಚಿಕೆ ಮಾಡಲು ಅಧಿಕಾರವಿಲ್ಲ. ಜನಪ್ರಗತಿ ನಿಧಿಗಳನ್ನು ಮುಂದೆ ಇಟ್ಟುಕೊಂಡು ಹಂಚಿಕೆ ಮಾಡಬೇಕು ಎಂದು ತಾಕೀತು ಮಾಡಿದರು.
ಹಲವಾರು ಇಲಾಖೆಯಲ್ಲಿ ವಿವಿಧ ಸರಕಾರಿ‌ ಕಾಮಗಾರಿಗಳಿಗೆ ಅಧಿಕಾರಿಗಳು ಜನಪ್ರತಿನಿಧಿಗಳನ್ನು ಕರೆದುಕೊಂಡು ಹೋಗಬೇಕು. ಆದರೆ ಬೆಳಗಾವಿಯಲ್ಲಿ ಇಂಥದ್ದು‌ ನಡೆಯಬಾರದು. ಮೂರು ಎಸಿಗಳು, ಪಶು ಸಂಗೋಪನೆ ಇಲಾಖೆ ಸೇರಿದಂತೆ‌ ವಿವಿಧ ಇಲಾಖೆಗಳಲ್ಲಿ ಪರಿಶೀಲನೆ ನಡೆಸಿ ಎಷ್ಟು ರೈತರಿಗೆ ಮೇವಿನ ಕಿಟ್ ನೀಡಿದ್ದಾರೆ ಎಂದು ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಎಚ್ಚರಿಸಿದ್ದರು.
ಸವದತ್ತಿಯಲ್ಲಿ ಬರಗಾಲದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಮೇವಿನ ಮೀನಿ ಕಿಟ್ ವಿತರಣೆ ಮಾಡಿಲ್ಲ. ಸ್ಥಳೀಯ ಶಾಸಕರ ಗಮನಕ್ಕೆ ಬಾರದೆ ಬರಗಾಲದ ಸಮೀಕ್ಷೆಯನ್ನು ಅಧಿಕಾರಿಗಳು ನಡೆಸಿದ್ದಾರೆ ಎಂದು ಶಾಸಕ ಆನಂದ ಮಾಮನಿ ಆರೋಪಿಸಿದರು.

ಹೊಸ ತಾಲೂಕುಗಳಲ್ಲಿ ಕಂದಾಯ ಕಚೇರಿಗಳು ಮಾತ್ರವಾಗಿವೆ. ಸದ್ಯ ಬೆಳಗಾವಿಯಲ್ಲಿ 10 ತಾಲೂಕುಗಳು ಮಾತ್ರ ಸರಕಾರ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ. ಕಾಗವಾಡ, ಮೂಡಲಗಿಯನ್ನು ಸೇರ್ಪಡೆಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬರಗಾಲ ಎಂದು ಪರಿಗಣಿಸಲು ಕೆಲ ತಾಂತ್ರಿಕ ಅಂಶವನ್ನು ನೋಡಲಾಗುತ್ತಿದೆ.‌‌ಸಚಿವರು ಯಾವುದೇ ತಾರತಮ್ಯ ಅನುಸರಿಸುತ್ತಿಲ್ಲ. ರಾಜ್ಯ ಸರಕಾರ ಈಗಾಗಲೇ ಮುಂಗಾರು ಬೆಳೆಯ ಬಗ್ಗೆ ಮಾತ್ರ ಘೋಷಣೆ ಮಾಡಿದ್ದೇವೆ. ಹಿಂಗಾರು ಬೆಳೆಯ ಬಗ್ಗೆ ನಿರ್ಣಯ ತೆಗೆದುಕೊಳ್ಳುಲು ರಾಜ್ಯ ಸರಕಾರಕ್ಕೆ ಬರುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಮನಸ್ಸು ಮಾಡಬೇಕು. ಅವರು ಮನಸ್ಸು ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ ಎಂದರು.
ಸಂಸದ ಸುರೇಶ ಅಂಗಡಿ ಮಾತನಾಡಿ, ಎಲ್ಲವನ್ನು ಪ್ರಧಾನಿ‌ ನರೇಂದ್ರ ಮೋದಿ ಮಾಡಲು ಸಾಧ್ಯವಿಲ್ಲ. ರಿಯಾಲಿಟಿ ಚಕ್ ಮಾಡದೆ ಅಧಿಕಾರಿಗಳು ಸ್ವಯಂ ಪ್ರೇರಿತವಾಗಿ ಕೆಲಸ ಮಾಡುವುದರಿಂದ ಇಂಥ ಸಮಸ್ಯೆಗಳನ್ನು ಜನರು ಎದುರಿಸಬೇಕಾಗುತ್ತದೆ. ಅಧಿಕಾರಿಗಳು ಏನು ಮಾಡುತ್ತಿದ್ದಿರಿ ಎಂದು ಪ್ರಶ್ನಿಸಿದರು.
ರೈತರ ಬೆಳೆಗಳ ಲಾಭವನ್ನು ದಳ್ಳಾಳಿಗಳು ಹಾಗೂ ವ್ಯಾಪಾರಸ್ಥರು ಲಾಭ ಪಡೆಯುತ್ತಿದ್ದಾರೆ. ರೈತರರಿಂದ ದವಸ ದಾನ್ಯಗಳು ಸಮರ್ಪಕವಾಗಿ ಆಗುತ್ತಿಲ್ಲ. ಜಿಲ್ಲಾಡಳಿತ ಖರೀದಿ ಕಡತವನ್ನು ಆದೇಶ ಮಾಡುತ್ತಿಲ್ಲ. ಕೇಂದ್ರ ಸರಕಾರ‌‌ ಎಷ್ಟು ಖರೀದಿಗೆ ಅವಕಾಶ ನೀಡಿದ್ದಾರೆ ಉತ್ತರ ಕೊಡಬೇಕು ಎಂದರು.
ಸಭೆಯಲ್ಲಿ ಶಾಸಕರಾದ ಉಮೇಶ ಕತ್ತಿ, ಮಹಾಂತೇಶ ‌ಕೌಜಲಗಿ, ಅನಿಲ ಬೆನಕೆ, ಮಹಾಂತೇಶ ದೊಡ್ಡಗೌಡರ, ಶ್ರೀಮಂತ ಪಾಟೀಲ, ದುರ್ಯೋಧನ ಐಹೊಳೆ, ಮಹಾದೇವಪ್ಪ ಯಾದವಾಡ, ಮಹೇಶ ಕಮಠೋಳಿ, ಮಹಾಂತೇಶ ಕವಟಗಿಮಠ, ಜಿಪಂ ಅಧ್ಯಕ್ಷೆ ಆಶಾ ಐಹೊಳೆ, ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About BGAdmin

Check Also

ಬೆಳಗಾವಿಗೆ ಐಐಐಟಿ ಬರುವದನ್ನು ತಪ್ಪಸಿದವರೇ ಸುರೇಶ್ ಅಂಗಡಿ- ಲಕ್ಷ್ಮೀ ಹೆಬ್ಬಾಳಕರ ಆರೋಪ

ಬೆಳಗಾವಿ-ನುಡಿದಂತೆ ನಡೆದಿದ್ದೇನೆ.ಅಲ್ಪಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ,ಲೋಕಸಭಾ ಚುನಾವಣೆ ನನ್ನ ಗೌರವದ …

Leave a Reply

Your email address will not be published. Required fields are marked *