Breaking News
Home / Breaking News / ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹೊಸ ಬಸ್ ಭಾಗ್ಯ….!!

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ಹೊಸ ಬಸ್ ಭಾಗ್ಯ….!!

ಬೆಳಗಾವಿ: ಬೆಳಗಾವಿಯ ಗ್ರಾಮೀಣ ಕ್ಷೇತ್ರದಲ್ಲಿರುವ ಸುವರ್ಣ ವಿಧಾನಸೌಧ ಗುರುವಾರ ತನ್ನ ತವರು ಕ್ಷೇತ್ರದ ಅಭಿವೃದ್ದಿಗೆ ಸಾಕ್ಷಿಯಾಯಿತು. ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ತಮ್ಮ ಕ್ಷೇತ್ರದ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧದ ಎದುರು 10 ಹೊಸ ಬಸ್‍ಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಹೊಸ ಬಸ್‍ಗಳಿಗೆ ಪೂಜೆ ನೆರವೆರಿಸಿ ಹಸಿರು ನಿಶಾನೆ ತೋರಿಸಿ ತಮ್ಮ ಕ್ಷೇತ್ರದ ಹತ್ತು ಮಾರ್ಗಗಳಲ್ಲಿ ಹತ್ತು ಬಸ್‍ಗಳನ್ನು ಬಿಳ್ಕೊಟ್ಟು ಮಾಧ್ಯಮದವರ ಜತೆ ಮಾತನಾಡಿದ ಶಾಸಕಿ ಹೆಬ್ಬಾಳಕರ್, ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ದಿನನಿತ್ಯ ಬೆಳಗಾವಿಗೆ ಉದ್ಯೋಗ ಮಾಡಲು ಬರುತ್ತಾರೆ. ಗ್ರಾಮೀಣ ಕ್ಷೇತ್ರದ ವಿದ್ಯಾರ್ಥಿಗಳು ದಿನನಿತ್ಯ ಓಡಾಡುತ್ತಾರೆ. ಕ್ಷೇತ್ರದ ಜನರಿಗೆ ಬಸ್‍ನ ಅನಾನುಕೂಲತೆಯಿಂದ ತೊಂದರೆಯಾಗುತ್ತಿರುವುದನ್ನು ಸಾರಿಗೆ ಸಚಿವರ ಗಮನಕ್ಕೆ ತಂದು ಕ್ಷೇತ್ರದ ನಾಯಕರ ಜತೆ ಅವರನ್ನು ಭೇಟಿಯಾಗಿ ಕ್ಷೇತ್ರಕ್ಕೆ 20 ಹೊಸ ಬಸ್‍ಗಳನ್ನು ಬಿಡುವಂತೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಪ್ರಥಮ ಹಂತದಲ್ಲಿ 10 ಬಸ್‍ಗಳನ್ನು ಬಿಡುಗಡೆ ಮಾಡಿದ್ದಾರೆ ಎಂದು ಹೇಳಿದರು.
ಗ್ರಾಮೀಣ ಕ್ಷೇತ್ರದಲ್ಲಿ ಓಡಾಡುತ್ತಿರುವ ಬಸ್‍ಗಳು ಹಳೆಯದಾಗಿದ್ದು, ಮಳೆಗಾಲದಲ್ಲಿ ಸೋರುತ್ತವೆ. ಕ್ಷೇತ್ರದ ಜನ ಉತ್ತಮ ಸಾರಿಗೆ ವ್ಯವಸ್ಥೆಗಾಗಿ ಪರದಾಡುವುದನ್ನು ತಪ್ಪಿಸಲು ಹೊಸ ಬಸ್‍ಗಳನ್ನು ಮಂಜೂರು ಮಾಡಿಸಲಾಗಿದೆ. ಉಳಿದ 10 ಬಸ್‍ಗಳು ಶೀಘ್ರದಲ್ಲಿಯೆ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಓಡಾಡಲಿವೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ತಾಲೂಕಾ ಪಂಚಾಯತಿ ಅಧ್ಯಕ್ಷ ಶಂಕರಗೌಡ ಪಾಟೀಲ, ಕಾಂಗ್ರೆಸ್ ಮುಖಂಡ ಯುವರಾಜ್ ಕದಂ, ಸುರೇಶ ಇಟಗಿ, ಸುರೇಶ ಕಂಬಿ, ಗೋಪಾಲಗೌಡ ಪಾಟೀಲ, ಮಾರುತಿ ಸನದಿ, ಅಡಿವೇಶ ಇಟಗಿ, ಸಿ.ಸಿ.ಪಾಟೀಲ, ಶ್ರೀಕಾಂತ ಭರಮಣ್ಣವರ ಸೇರಿದಂತೆ ಮೊದಲಾದವರು ಹಾಜರಿದ್ದರು.

ರೈತರಿಗೆ ಅನ್ಯಾಯ ಮಾಡಲಾರೆ

ಇದೇ ವರ್ಷ ತಮ್ಮ ಒಡೆತನದ ಹರ್ಷಾ ಶುಗರ್ಸ್ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿದ್ದೇನೆ. ಪ್ರಸಕ್ತ ವರ್ಷ ಕಾರ್ಖಾನೆಯಲ್ಲಿ ಕಬ್ಬು ನುರಿಸುವ ಹಂಗಾಮು ಆರಂಭವಾಗಿದೆ. ಕಬ್ಬಿನ ಬೆಲೆ ವಿಷಯದಲ್ಲಿ ಸರಕಾರ ಮತ್ತು ಕಾರ್ಖಾನೆ ಮಾಲೀಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡುತ್ತಿದ್ದೇನೆ. ಈ ಉದ್ಯಮದಲ್ಲಿ ನಾನು ಹೊಸಬಳು. ಕಬ್ಬಿನ ಬೆಲೆ ನೀಡುವ ವಿಷಯದಲ್ಲಿ ನಾನಂತೂ ರೈತರಿಗೆ ಅನ್ಯಾಯ ಮಾಡುವುದಿಲ್ಲ. ಸರಕಾರದ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ದನಾಗಿದ್ದೆನೆ.
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಕ್ಕರೆ ಕಾರ್ಖಾನೆಯ ಸಭೆಗೆ ನನಗೆ ಆಹ್ವಾನ ನೀಡಿದ್ದರೆ ನಾನು ಹಾಜರಾಗಿರುತ್ತಿದೆ. ನಾನು ಸಕ್ಕರೆ ಕಾರ್ಖಾನೆಯನ್ನು ಈ ವರ್ಷ ಆರಂಭ ಮಾಡಿರುವುದರಿಂದ ಆಹ್ವಾನ ನೀಡಿಲ್ಲ ಕರೆದಿದ್ದರೆ ಹೋಗುತ್ತಿದ್ದೆ ಎಂದರು.
ರೈತ ಮಹಿಳೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಮಾತನಾಡಿರುವ ಬಗ್ಗೆ ರೈತ ಮಹಿಳೆ ಮತ್ತು ಕುಮಾರಸ್ವಾಮಿ ಅವರು ಇಬ್ಬರೂ ಈ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಈ ಕುರಿತು ನಾನು ಹೆಚ್ಚು ಮಾತನಾಡುವುದಿಲ್ಲ. ಜೆಡಿಎಸ್ ಪಕ್ಷದ ಚಿಹ್ನೆ ರೈತ ಮಹಿಳೆಯಾಗಿದೆ. ಜೆಡಿಎಸ್ ಪಕ್ಷ ರೈತ ಮಹಿಳೆಯನ್ನು ಗೌರವಿಸಿ ಪೂಜಿಸುತ್ತಿರುವಾಗ ಮುಖ್ಯಮಂತ್ರಿ ಅವರು ರೈತ ಮಹಿಳೆಯ ಬಗ್ಗೆ ಹಗುರವಾಗಿ ಮಾತನಾಡಲು ಸಾಧ್ಯವೇ ಇಲ್ಲ ಎಂದರು.

About BGAdmin

Check Also

ಪರಿಷ್ಲೃತ ಮತದಾರರ ಯಾದಿ ಪ್ರಕಟ- ಡಿಸಿ ಬೊಮ್ಮನಹಳ್ಳಿ

ಬೆಳಗಾವಿ ಮತದಾರ ತಿದ್ದುಪಡಿ ಹಾಗೂ ಪರಿಷ್ಕರಣೆಯಲ್ಲಿ ಮಹಿಳಾ ಹಾಗೂ ಪುರುಷರು ಸೇರಿ 3722034 ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ‌ ಡಾ.ಎಸ್.ಬಿ.ಬೊಮ್ಮನಹಳ್ಳಿ ಹೇಳಿದರು. …

Leave a Reply

Your email address will not be published. Required fields are marked *