Breaking News
Home / Breaking News / ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಜಾ ಮಾಡಲು ಶಂಕರ ಮುನವಳ್ಳಿ ಆಗ್ರಹ

ಸಚಿವ ರಮೇಶ್ ಜಾರಕಿಹೊಳಿ ಅವರನ್ನು ವಜಾ ಮಾಡಲು ಶಂಕರ ಮುನವಳ್ಳಿ ಆಗ್ರಹ

ಜಾರಕಿಹೊಳಿ ಸಹೋದರರ ಶಾಸಕತ್ವ ವಜಾ ಮಾಡಿ: ಮುನವಳ್ಳಿ
ಬೆಳಗಾವಿ ಸಮ್ಮಿಶ್ರ ಸರಕಾರದಲ್ಲಿ ನಮ್ಮ ಶಾಸಕರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಬೇದರಿಕೆ ಹಾಕುತ್ತಿರುವ ಕಾಂಗ್ರೆಸ್ ನ ಜಾರಕಿಹೊಳಿ ಸಹೋದರರ ಶಾಸಕತ್ವ ಸ್ಥಾನವನ್ನು ರದ್ದು ಪಡಿಸಬೇಕೆಂದು ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಒತ್ತಾಯಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಮಾನವ ಬಂಧುತ್ವ ವೇದಿಕೆಯಿಂದ ನಮ್ಮ ಸಮಾಜದವರನ್ನು ಹತ್ತಿಕ್ಕುವ ಒಂದು ಸಂಘ.
ಪರಿಶಿಷ್ಟ ಜಾತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ಯಾರು ರಾಜಕೀಯವಾಗಿ ಬೆಳೆಯಬಾರದು ಎಂಬ ದುರುದ್ದೇಶದಿಂದ ಜಾರಕಿಹೊಳಿ ಸಹೋದರರು ದಕ್ಷಿಣ ಕ್ಷೇತ್ರದಿಂದ ನಾನು ಗೆಲವು ಸಾಧಿಸುತ್ತೇನೆ ಎಂದು ಬೇರೆ ಜಿಲ್ಲೆಯ ಎಂ.ಡಿ.ಲಕ್ಷ್ಮೀನಾರಾಯಣ ನಿಲ್ಲಿಸಿದರು.‌ರಾಯಬಾಗದಲ್ಲಿಯೂ ಕಾಂಗ್ರೆಸ್ ಸುಲಭವಾಗಿ ಜಯಸಾಧಿಸುತ್ತಿತ್ತು. ಅದಕ್ಕ ಜಾರಕಿಹೊಳಿ ಸಹೋದರರು ಅಡ್ಡಗಾಲು ಹಾಕಿದರು. ಇಂಥವರಿಂದ ಕಾಂಗ್ರೆಸ್ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಜಾರಕಿಹೊಳಿ ಸಹೋದರರನ್ನು ಹೈಕಮಾಂಡ್ ಹತೋಟಿಯಲ್ಲಿಡದಿದ್ದರೆ ಲೋಕಸಭಾ ಚನಾವಣೆಯಲ್ಲಿ ನಿಷ್ಠಾವಂತ ಕಾರ್ಯಕರ್ತರು ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಪದೇ ಪದೇ ಪಕ್ಷ‌ ಬಿಟ್ಟು ಹೋಗುತ್ತೇನೆ ಎಂದು ಬ್ಲ್ಯಾಕ್ ಮೇಲ್ ಮಾಡುವ ತಂತ್ರ ಮಾಡುತ್ತಿದ್ದಾರೆ‌. ಅವರನ್ನು ಪಕ್ಷದಿಂದ ವಜಾಗೊಳಿಸಲು ಹೈಕಮಾಂಡ್ ಹಿಂದೆ ಮುಂದೆ ನೋಡುತ್ತಿರುವುದು ದುರ್ದೈವದ ಸಂಗತಿ ಎಂದರು.
ಕಳೆದ 40 ವರ್ಷದಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರನ್ನು ತುಳಿಯುತ್ತಾ ಬಂದಿದ್ದಾರೆ. ಬರುವ ಸಚಿವ ಸಂಪುಟ ವಿಸ್ತರಣೆಯಲ್ಲಿ ರಮೇಶ ಜಾರಕಿಹೊಳಿ ಅವರನ್ನು ವಜಾ ಮಾಡಿ ಗಣೇಶ ಹುಕ್ಕೇರಿ ಇಲ್ಲವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಚಿವರನ್ನಾಗಿ ಮಾಡಿ ಎಂದು ಆಗ್ರಹಿಸಿದರು.

About BGAdmin

Check Also

ಡಿಸಿ ಕಚೇರಿ ಎದರು ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ..?

ಬೆಳಗಾವಿ- ಡಿಸಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಬಟನೆಯಲ್ಲಿ ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ಜಯಶ್ರಿ …

Leave a Reply

Your email address will not be published. Required fields are marked *