Breaking News
Home / Breaking News / ಪ್ರಧಾನಿ ಮೋದಿ ಸುಳ್ಳುಗಾರ ಅಲ್ಲವೇ ? ಕೋನರೆಡ್ಡಿ ಪ್ರಶ್ನೆ

ಪ್ರಧಾನಿ ಮೋದಿ ಸುಳ್ಳುಗಾರ ಅಲ್ಲವೇ ? ಕೋನರೆಡ್ಡಿ ಪ್ರಶ್ನೆ

ಬೆಳಗಾವಿ
ಸಮ್ಮಿಶ್ರ ಸರಕಾರದ ಸಿಎಂ ಬಗ್ಗೆ ಮಾತನಾಡುತ್ತಿರುವ ಬಿಜೆಪಿಯ ಜಗದೀಶ ಶೆಟ್ಟರ, ಕೋಟ‌ ಶ್ರೀನಿವಾಸ ಪೂಜಾರಿ, ಈಶ್ವರಪ್ಪ ಬಿಜೆಪಿಯ ಡುಬ್ಲಿಕೇಟ್ ನಾಯಕರು ಎಂದು ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ ಲೇವಡಿ‌ ಮಾಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಡಿ.10 ರಂದು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿರೋಧ ಪಕ್ಷ ಬಿಜೆಪಿಯವರು ಸೌಧಕ್ಕೆ ಮುತ್ತಿಗೆ ಹಾಕುವ ಮುನ್ನ ಕೇಂದ್ರ ಸರಕಾರದ ಮೇಲೆ ರಾಜ್ಯದ ಸಮಸ್ಯೆಯ ಬೆಳಕು ಚೆಲ್ಲಬೇಕು ಎಂದು ಒತ್ತಾಯಿಸಿದರು.
ಪ್ರಧಾನಿ ನರೇಂದ್ರ ಮೋದಿ ಉದ್ಯಮಿ ಸ್ನೇಹಿತರಾದ ಅದಾನಿ ಸಮೂಹ ಸಂಸ್ಥೆಗಳ ಮಾಲೀಕ ಗೌತಮ್ ಅದಾನಿ ಹಾಗೂ ರಿಲಯನ್ಸ್ ಮಾಲೀಕ ಅನಿಲ್ ಅಂಬಾನಿ ವಿಮೆ ಕಂಪನಿಗೆ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ನೀಡುವ ಮೂಲಕ ರೈತರ ಹೆಸರಿನಲ್ಲಿ 4.65 ಲಕ್ಷ ಕೋಟಿ ರು. ಅವ್ಯಹಾರ ಮಾಡಿದ್ದಾರೆ ಎಂದು ಆರೋಪಿಸಿದರು.
ಕೇಂದ್ರದಿಂದ ರಾಜ್ಯಕ್ಕೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಬೇಕಿದೆ. ಬಿಜೆಪಿಯ ಕೇಂದ್ರ ಸರಕಾರ ಬರ ಅಧ್ಯಯನ ನಡೆಸಿದೆ. ಅದರ ಹಣವನ್ನು ಬಿಡುಗಡೆ ಮಾಡಿಸಲಿ ಎಂದು ಒತ್ತಾಯಿಸಿದರು.
ಎಫ್ ಆರ್ ಪಿ ದರ ನಿಗದಿ ಮಾಡುವುದು ಕೇಂದ್ರ ಸರಕಾರದ್ದು. ಆದರೆ ಕುಮಾರಸ್ವಾಮಿ ಸರಕಾರದ‌‌‌ ಮೇಲೆ ಗೂಬೆ ಕುರಿಸುವುದು ಸರಿಯಲ್ಲ ಎಂದರು.
ಕರ್ನಾಟಕ ರಾಜ್ಯದಿಂದ ಕೇಂದ್ರಕ್ಕೆ ಜಿಎಸ್ ಟಿ ತುಂಬುತ್ತೇವೆ. ವಿನಾಕಾರಣ ಸಮ್ಮಿಶ್ರ ಸರಕಾರದ ವಿರುದ್ದ ಮಾತನಾಡುವ ನೈತಿಕ ಹಕ್ಕಿಲ್ಲ ಎಂದರು.
ರಾಜ್ಯದ ಮುಖ್ಯಮಂತ್ರಿಗೆ ಸುಳ್ಳುಗಾರ, ಮೋಸುಗಾರ ಎಂದು ಆರೋಪಿಸುವ ಬಿಜೆಪಿಯವರು ಪ್ರಧಾನಿ ಮೋದಿ ಸುಳ್ಳುಗಾರವಲ್ಲವೆ ಪ್ರಶ್ನಿಸಿದರು.
ಬೆಂಗಳೂರಿನಲ್ಲಿ ಬಿಜೆಪಿಯವರು ಆಪರೇಷ್ ನ ಕಮಲ್ ದ ಆಸ್ಪತ್ರೆ ತೆರೆದಿದ್ದಾರೆ. ಅಲ್ಲಿ ಯಾರು ಹೋಗುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಫೈಜುಲ್ಲಾ ಮಾಡಿವಾಲೆ, ಶಂಕರ‌ ಮಾಡಲಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

About BGAdmin

Check Also

ಡಿಸಿ ಕಚೇರಿ ಎದರು ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿದ್ದು ಯಾಕೆ ಗೊತ್ತಾ..?

ಬೆಳಗಾವಿ- ಡಿಸಿ ಕಚೇರಿ ಎದುರು ನಡೆಯುತ್ತಿರುವ ಪ್ರತಿಬಟನೆಯಲ್ಲಿ ರೈತ ಮಹಿಳೆ ಮತ್ತೆ ಕಣ್ಣೀರು ಹಾಕಿ ಎಲ್ಲರ ಗಮನ ಸೆಳೆದಿದ್ದಾರೆ ಜಯಶ್ರಿ …

Leave a Reply

Your email address will not be published. Required fields are marked *