Breaking News
Home / Breaking News / ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡುವದೇ ನಮ್ಮ ಗುರಿ – ಅನೀಲ ಬೆನಕೆ

ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡುವದೇ ನಮ್ಮ ಗುರಿ – ಅನೀಲ ಬೆನಕೆ

ಬೆಳಗಾವಿ :ಕಡಿಮೆ ಅವಧಿಯಲ್ಲಿ ಭಾರತವನ್ನು ಸುಧಾರಣೆ‌ ಮಾಡಿ ಇಡೀ‌ ವಿಶ್ವವೇ ದೇಶದ ಕಡೆ ನೋಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಇನ್ನೊಮ್ಮೆ ಪ್ರಧಾನಿಯನ್ನಾಗಿಸುವ ಗುರಿ ಮೋದಿ‌ ಬ್ರಿಗೇಡ್ ಹಾಗೂ ಎಲ್ಲರು ಹೊಂದಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದರು.
ಅವರು ರವಿವಾರ ನಗರದ ಖಾಸಗಿ ಹೊಟೇಲ್ ನಲ್ಲಿ ನಾಲ್ಕು ಜಿಲ್ಲೆಯ ಮೋದಿ ಬ್ರಿಗೇಡ್ ನ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಭಾರತ ವಿಶ್ವಗುರು ಮಾಡಿದ್ದ‌ ಶ್ರೇಯ ಪ್ರಧಾನಿ ನರೇಂದ್ರ‌ ಮೋದಿ ಅವರಿಗೆ ಸಲ್ಲುತ್ತದೆ. ಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಅತೀ ಹೆಚ್ಚು ಬಿಜೆಪಿ ಸಂಸದರನ್ನು ಗೆಲ್ಲಿಸಿ ಮೋದಿ ಅವರ ಕೈ ಬಲಪಡಿಸಬೇಕಿದೆ ಎಂದರು.
ಬರುವ ಕಾಲಯದಲ್ಲಿ ನಾವೇಲ್ಲರು ಸೇರಿಕೊಂಡು‌ ಬರುವ ಲೋಕಸಭಾ ಚುನಾವಣೆಯನ್ನು‌ ಗುರಿಯಲ್ಲಿಟ್ಟುಕೊ‌ಂಡು ಮೋದಿ ಬ್ರಿಗೇಡ್ ಕೆಲಸ ಮಾಡಬೇಕು. ಪದಾಧಿಕಾರಿಗಳ ಮೇಲೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಎಲ್ಲರೂ ಮೈಯನ್ನು ಕಣ್ಣಾಗಿರಿಸಿಕೊಂಡು ಕೆಲಸ ಮಾಡಿದರೆ ಪ್ರಧಾನಿ ಕೈ ಬಲಪಡಿಸುವಲ್ಲಿ ಸಂದೇಹವೇ ಇಲ್ಲ ಎಂದರು.
70 ವರ್ಷದಿಂದ ಕಾಂಗ್ರೆಸ್ ನವರು ದೇಶದ ಅಭಿವೃದ್ಧಿ ಮಾಡಿರಲಿಲ್ಲ. ಕೇವಲ ನಾಲ್ಕುವರೆ ವರ್ಷದ ಅವಧಿಯಲ್ಲಿ ಇಡೀ ವಿಶ್ವವೇ ಭಾತರದ ಕಡೆ ತಿರುಗಿ ನೋಡುತ್ತಿದೆ ಎಂದು ಹೇಳಿದರು.
ಐದು‌ ವರ್ಷದ ಹಿಂದೆ ಬೆಳಗಾವಿಯಲ್ಲಿ ನಮೋ‌ ಬ್ರಿಗೇಡ್ ಪ್ರಾರಂಭಿಸಿದ್ದೇವು. ಈಗ ಮೋದಿ‌ ಬ್ರಿಗೇಡ್ ದೇಶಾದ್ಯಂತ ಪ್ರಧಾನಿ ಕೊಡುಗೆಯನ್ನು ಜನರಿಗೆ ಮನವರಿಕೆ‌ ಮಾಡಿಕೊಟ್ಟು ಅವರನ್ನು‌ ಇನ್ನೊಮ್ಮೆ ಪ್ರಧಾನಿಯನ್ನಾಗಿ ಮಾಡುವ ಏಕೈಕ ಉದ್ದೇಶವಾಗಿದೆ ಎಂದರು.
ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರ ಯೋಜನೆಯನ್ನು ಜನಸಾಮಾನ್ಯರಿಗೂ ತಿಳಿಸುವ ಕಾರ್ಯವನ್ನು ಈ ಬ್ರಿಗೇಡ್ ಮಾಡಬೇಕು. ನಮೋ ಬ್ರಿಗೇಡ್ ದ ಯುವ ಬ್ರಿಗೇಡ್ ನಿಂದ ಇದು ಮಾತ್ರ ಸಾಧ್ಯವಾಗಲಿದೆ ಎಂದು ಹೇಳಿದರು.
ಮೋದಿ‌ ಬ್ರಿಗೇಡ್ ನ ರಾಜ್ಯಾಧ್ಯಕ್ಷ‌ ಸಂತೋಷ ಬಶೆಟ್ಟಿ,ಸಂಗಮೇಶ ಉಪಾಧ್ಯೆ, ತಾನಾಜಿ ಮಾನೆ, ಮಹಾಂತೇಶ ಒಕ್ಕುಂದ, ಬಸನಗೌಡ ನಿರವಾಣಿ, ಸಾಗರ‌ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *