Breaking News
Home / Breaking News / ಎಸ್. ಟಿ. ಪಿ ಪ್ಲಾಂಟ್….ರೈತರಿಗೆ ಡೋಂಟ್ ವಾಂಟ್ ….ಮುಂದುವರೆದ ಹಗ್ಗ ಜಗ್ಗಾಟ ರೈತರಿಗೆ ಹೆಬ್ಬಾಳಕರ ಸಾಥ್…!!!

ಎಸ್. ಟಿ. ಪಿ ಪ್ಲಾಂಟ್….ರೈತರಿಗೆ ಡೋಂಟ್ ವಾಂಟ್ ….ಮುಂದುವರೆದ ಹಗ್ಗ ಜಗ್ಗಾಟ ರೈತರಿಗೆ ಹೆಬ್ಬಾಳಕರ ಸಾಥ್…!!!

ಬೆಳಗಾವಿ- ಬೆಳಗಾವಿ ನಗರಕ್ಕೆ ಹೊಂದಿಕೊಂಡಿರುವ ಹಲಗಾ ಗ್ರಾಮದ ಬಳಿ ಸರ್ಕಾರ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಹಲಗಾ ಗ್ರಾಮದ 20 ಎಕರೆ ಜಮೀನು ಸ್ವಾಧೀನ ಪಡಿಸಿಕೊಂಡಿದ್ದು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಇಂದು ರೈತರ ಜೊತೆ ಸಭೆ ನಡೆಸಿ ರೈತರನ್ನು ಮನವೊಲಿಸಲು ಮಾಡಿದ ಪ್ರಯತ್ನ ವಿಫಲವಾಯಿತು

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಹಲಗಾ ಗ್ರಾಮದ ರೈತರು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ಮೇಯರ್ ಚಿಕ್ಕಲದಿನ್ನಿ,ಪಾಲಿಕೆ ಆಯುಕ್ತ ಶಶಿಧರ ಕುರೇರ, ಮೊದಲಾದವರು ಭಾಗವಹಿಸಿದ್ದರು

ಹಲಗಾ ಗ್ರಾಮದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲಾಗಿದೆ ಫೈನಲ್ ನೋಟಿಪಿಕೇಶ್ ಆಗಿ ಜಮೀನಿನ ದಾಖಲೆಗಳಲ್ಲಿ ಸರ್ಕಾರಿ ಜಮೀನು ಎಂದು ದಾಖಲಾಗಿದೆ ರೈತರು ಅಭಿವೃದ್ಧಿ ಕಾಮಗಾರಿಗೆ ಸಹಕರಿಸಿ ಎಂದು ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿಕೊಂಡಾಗ ರೈತರು ಇದಕ್ಕೆ ಒಪ್ಪಲಿಲ್ಲ ಫಲವತ್ತಾದ ಜಮೀನು ನಮ್ಮ ಬದುಕಿನ ಆಸರೆ ಒಂದಿಂಚು ಜಮೀನು ನಾವು ಕೊಡೋದಿಲ್ಲ ಎಂದು ರೈತರು ವಿರೋಧ ವ್ಯೆಕ್ತ ಪಡಿಸಿದರು

ಮದ್ಯ ಪ್ರವೇಶಿಸಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಗ್ರಾಮೀಣ ಕ್ಷೇತ್ರದ ರೈತರು ಸುವರ್ಣ ಸೌಧ ನಿರ್ಮಾಣಕ್ಕೆ ಜಮೀನು ಕೊಟ್ಟಿದ್ದಾರೆ ಕಚರಾ ಡಿಪೋ ಕೂಡಾ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿದೆ ,ರಿಂಗ್ ರಸ್ತೆಗಾಗಿ ಗ್ರಾಮೀಣ ಕ್ಷೇತ್ರದ ಜಮೀನು ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ ಈಗ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಿಸಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಜಮೀನು ಬೇಕಾ ? ಇದು ಯಾವ ನ್ಯಾಯ ಎಂದು ಲಕ್ಷ್ಮೀ ಹೆಬ್ಬಾಳಕರ ಅಸಮಾಧಾನ ವ್ಯಕ್ತಪಡಿಸಿ ಪೈನಲ್ ನೋಟಿಫಿಕೇಶನ್ ಹೊರಡಿಸಿದ ಮೇಲೆ ಹಲವಾರು ಸಂಧರ್ಭದಲ್ಲಿ ನೋಟಿಫಿಕೇಶನ್ ರದ್ದು ಪಡಿಸಿದ ಹಲವಾರು ಉಧಾಹರಣೆಗಳಿವೆ ಹಲಗಾ ಗ್ರಾಮದ ರೈತರ ಜಮೀನು ವಾಪಸ್ ಕೊಡಿ ಎಂದು ಹೆಬ್ಬಾಳಕರ ಮನವಿ ಮಾಡಿಕೊಂಡರು

ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ ರೈತರ ಜೊತೆ ಇನ್ನೊಂದು ಬಾರಿ ಸಭೆ ನಡೆಸಿ ಸಮಾಲೋಚನೆ ಮಾಡಿ ಆದಾಗ್ಯೂ ಒಪ್ಪದಿದ್ದರೆ ರೈತರ ನಿಲುವಿನ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು

About BGAdmin

Check Also

ಅಂಬಡಗಟ್ಟಿಯಲ್ಲಿ ಗಟ್ಟಿಯಾದ ರಾಂಗ್ ನಂಬರ್ ಲವ್…!!

ಬೆಳಗಾವಿ : ಫೇಸ್ ಬುಕ್ ಲವ್….ವ್ಯಾಟ್ಸಪ್ ಡವ್….ಮಿಸ್ ಕಾಲ್ ಲವ್ ನಾವು ನೋಡಿದ್ದೇವೆ ಆದ್ರೆ ಈಗ ರಾಂಗ್ ನಂಬರ್ ಕಾಲ್ …

Leave a Reply

Your email address will not be published. Required fields are marked *