Breaking News
Home / Breaking News / ಸಿಎಂ ಬದಲಾವಣೆ ಇಲ್ಲ- ಸತೀಶ್ ಜಾರಕಿಹೊಳಿ

ಸಿಎಂ ಬದಲಾವಣೆ ಇಲ್ಲ- ಸತೀಶ್ ಜಾರಕಿಹೊಳಿ

ಬೆಳಗಾವಿ

ಸಮ್ಮಿಶ್ರ ಸರಕಾರದಲ್ಲಿ ಸಿಎಂ ಬದಲಾಗವಣೆ ಸದ್ಯಕ್ಕಿಲ್ಲ.
ಕಾಂಗ್ರೆಸ್ ಶಾಸಕರು ತಮ್ಮ ಕೆಲಸವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿರಬಹುದು. ಅದನ್ನು ಸಮನ್ವಯ ಸಮಿತಿಯಲ್ಲಿ ಚರ್ಚಿಸಿ ಬಗೆಹರಿಸಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ‌ ಹೇಳಿದರು.

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡುವ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಮ್ಮಿಶ್ರ ಸರಕಾರದಲ್ಲಿ ಸ್ವಾಭಾವಿಕವಾಗಿ ಈ ರೀತಿ ಆಗುತ್ತದೆ. ಸಮ್ಮಿಶ್ರ ಸರಕಾರ ಇದೆ ಬ್ಯಾಲೆನ್ಸ್ ಮಾಡೊದು ಕಷ್ಟದ ಕೆಲಸ ಅದು ಸುಲಭದ ಕೆಲಸ ಅಲ್ಲ. ಅವರು ಈಗಾಗಲೇ ಒಂದು ಬಾರಿ ಸಮ್ಮಿಶ್ರ ಸರಕಾರ ನಡೆಸಿದ್ದಾರೆ ಸಾಮರ್ಥ್ಯ ಇದೆ ಮಾಡುತ್ತಾರೆ.
ಕೆಲವೊಂದು ಸಣ್ಣ ಪುಟ್ಟ ಘಟನೆ ಆದಾಗ ವೈಯಕ್ತಿಕವಾಗಿ ಮಾನಸಿಕವಾಗಿ ನೋವಾಗೊದು ಸ್ವಾಭಾವಿಕ.ಎಂದರು

ಅದನ್ನೆಲ್ಲ ಮೀರಿ ಮಾಡಿದಾಗಲೇ ಮುಖ್ಯಮಂತ್ರಿಗಳಾಗಿರುತ್ತಾರೆ.
ಯಾರಾದರೂ ಎನೋ ಹೇಳಿರಬಹುದು ಅದನ್ನ ನಿಭಾಯಿಸುತ್ತಾರೆ. ಸಿಎಂ ಬಗ್ಗೆ ಸೋಮಶೇಖರ್ ಹೇಳಿಕೆ ವಿಚಾರ.
ಅದು ಅವರ ವೈಯಕ್ತಿಕ ಅಭಿಪ್ರಾಯ ಅದರ ಬಗ್ಗೆ ನಾವು ಹೇಳೊಕೆ ಆಗಲ್ಲ. ಈಗಾಗಲೇ ಕುಮಾರಸ್ವಾಮಿ ಅವರಿಗೆ ಸಾಮರ್ಥ್ಯ ಇದೆ ಮಾಡ್ತಾರೆ. ಸಮನ್ವಯ ಸಮಿತಿ ಇದೆ ಪರಿಹಾರ ಮಾಡಲು ಅಲ್ಲಿ ವೇದಿಕೆ ಇದೆ. ಇಲ್ಲವಾದರೆ ಸಿಎಲ್‌ಪಿ ಸಭೆ ಕರೆದಾಗ ಚರ್ಚೆ ಮಾಡಲು ಅವಕಾಶ ಇದೆ ಎಂದರು

ಇಂತಹ ಘಟನೆ ನಡೆದಾಗ ನಿಭಾಯಿಸುವ ಶಕ್ತಿ ಸಿಎಂ ಗೂ ಇದೆ ನಮ್ಮ‌ ಪಕ್ಷಕ್ಕೂ ಇದೆ.  ತಮ್ಮ ಸ್ವತಂತ್ರವನ್ನ ಹೇಳಿದರೆ ಅದು ವಿರೋಧ ಅಂತಾ ಹೇಳಲು ಆಗುವುದಿಲ್ಲ.
ಈ ರೀತಿ ಆದಾಗ ಅದನ್ನ ಸರಿ ಮಾಡ್ತಾನೆ ಇರ್ತಾರೆ.
ಸಿಎಂ ಬದಲಾವಣೆ ಮಾಡುವ ಪ್ರಶ್ನೆ ಇಲ್ಲ. ಈಗಾಗಲೇ ಹೈಕಮಾಂಡ್ ಹೇಳಿದೆ ಕುಮಾರಸ್ವಾಮಿ ಅವರೇ ಸಿಎಂ ಆಗಿ ಇರುತ್ತಾಾರೆ

About BGAdmin

Check Also

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ

ಹೊಂಡದಲ್ಲಿ ಈಜಲು ಹೋಗಿ ನೀರು ಪಾಲಾದ ಬೆಳಗಾವಿಯ ಬಾಲಕ ಬೆಳಗಾವಿ- ಬಟ್ಟೆ ತೊಳೆಯಲು ಪಾಲಕರ ಜೊತೆ ಹೋದ ಬಾಲಕ ನೀರಿನ …

Leave a Reply

Your email address will not be published. Required fields are marked *