Breaking News
Home / Breaking News / ಸಾವಿರಾರು ಮಹಿಳೆಯರ ಮೊಗದಲ್ಲಿ ಬಣ್ಣದ ಹರ್ಷ….!!!!

ಸಾವಿರಾರು ಮಹಿಳೆಯರ ಮೊಗದಲ್ಲಿ ಬಣ್ಣದ ಹರ್ಷ….!!!!

ಬೆಳಗಾವಿ-ಭಾರತೀಯ ಸಂಸ್ಕೃತಿಯ ಸಂಗಮವಾಗಿರುವ ಕುಂದಾನಗರಿಯಲ್ಲಿ ಸಾವಿರಾರು ಮಹಿಳೆಯರು ಒಂದೇ ಸ್ಥಳದಲ್ಲಿ ಬಣ್ಣದೋಕುಳಿ ಆಡಿ,ಐದು ಘಂಟೆಗಳ ಕಾಲ ಸಾಮೂಹಿಕವಾಗಿ ಹೆಜ್ಜೆ ಹಾಕಿ ಸಂಬ್ರಮಿಸಲು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಒಡೆತನದ ಹರ್ಷಾ ಶುಗರ್ಸ ಮಹಿಳೆಯರಿಗಾಗಯೇ ಆಯೋಜಿಸಿದ ವುಮೇನಿಯಾ ಹೋಳಿ ಮುಖ್ಯ ವೇದಿಕೆಯಾಯಿತು

ಪುರುಷರಂತೆ ಮಹಿಳೆಯರು ನಿಶ್ಚಿಂತವಾಗಿ ನಿರಾತಂಕವಾಗಿ ಬಣ್ಣದ ಹಬ್ಬ ಆಚರಿಸಬೇಕು ಎಂಬ ಉದ್ದೇಶದಿಂದ ಕಳೆದ ಮೂರು ವರ್ಷದ ಹಿಂದೆ ಲಕ್ಷ್ಮೀ ಹೆಬ್ಬಾಳಕರ ಅವರು ಮಹಿಳೆಯರ ಸಂಬ್ರಮಕ್ಕಾಗಿ ವುಮೇನಿಯಾ ಹೋಳಿ ಕಾರ್ಯಕ್ರಮ ಆರಂಭಿಸಿದರು ಈ ಕಾರ್ಯಕ್ರಮ ಈ ವರ್ಷ ಸಾವಿರಾರು ಮಹಿಳೆಯರು ಒಟ್ಟಿಗೆ ಬಣ್ಣದಾಟವಾಡಿ ಕುಣಿದು ಕುಪ್ಪಳಿಸಲು ಕಾರಣವಾಯಿತು

ಬೆಳಿಗ್ಗೆ 9-00 ಘಂಟೆಗೆ ಬೆಳಗಾವಿಯ ಕ್ಲಬ್ ರಸ್ತೆಯ ಬೆಲಗಾಮ್ ಕ್ಲಬ್ ನಲ್ಲಿ ಆರಂಬವಾದ ವುಮೇನಿಯಾ ಹೋಳಿಗೆ ಮಹಿಳೆಯರು ,ಯುವತಿಯರು ತಂಡೋಪ ತಂಡವಾಗಿ ಬಂದು ಭಾಗವಹಿಸಿ ವುಮೇನಿಯಾ ಹೋಳಿಯ ರಂಗೇರಿಸಿದರು

ವುಮೇನಿಯಾ ಆವರಣದಲ್ಲ ವಿವಿದ ಬಣ್ಣ ತುಂಬಿದ ಬುಟ್ಟಿಗಳು ,ಕಲರ್ ತುಂಬಿದ ಬಲೂನ್ ಗಳು ,ಸೆಲ್ಫಿ ಕಾರ್ನರ್,ರೇನ್ ಡ್ಯಾನ್ಸ ಸೇರಿದಂತೆ ವಿವಿಧ ಬಗೆಯ ವ್ಯೆವಸ್ಥೆ ಮಾಡಲಾಗಿತ್ತು ಒಟ್ಟಾರೆ ಸಾವಿರಾರು ಮಹಿಳೆಯರು ವುಮೇನಿಯಾ ಬಣ್ಣದ ಹೊಂಡದಲ್ಲಿ ಮಿಂದೆದ್ದರು

ಮುಂಬೈ ಮೂಲದ ಪ್ರಸಿದ್ದ ಡಿಜೆ ಕಂಪನಿಯ ಭಾಂಗಡಾ ವಾದ್ಯಕ್ಕೆ ಮುಹಿಳೆಯರು ಯುವತಿಯರು ಮಕ್ಕಳು ನಿರಾತಂಕವಾಗಿ ಹೆಜ್ಜೆ ಹಾಕಿ ಬಣ್ಣದ ಹಬ್ಬಕ್ಕೆ ಮೆರಗು ತಂದಿದ್ದು ವಿಶೇಷವಾಗಿತ್ತು

ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಬೆಳಗಾವಿ ಭಾರತೀಯ ಸಂಸ್ಕೃತಿಯ ಕೂಡಲ ಸಂಗಮ ಇಲ್ಲಿ ವೈಶಿಷ್ಟಪೂರ್ಣವಾಗಿ ಹೋಳಿ ಹಬ್ಬ ಆಚರಿಸಲಾಗುತ್ತಿದೆ ಜಾತಿ,ಭಾಷೆಯ ಬೇಧಭಾವ ಇಲ್ಲದೇ ಇಲ್ಲಿಯ ಜನ ಭಾವೈಕ್ಯತೆಯಿಂದ ಹಬ್ಬ ಆಚರಿಸುತ್ತಾರೆ ಪುರುಷರಂತೆ ಮಹಿಳೆಯರೂ ಸಂಬ್ರಮಿಸಬೇಕು ಅವರೂ ನಿರಾತಂಕವಾಗಿ ಸಾಮೂಹಿಕವಾಗಿ ಹಬ್ಬ ಆಚರಿಸಬೇಕು ಎನ್ನುವ ಉದ್ದೇಶದಿಂದ ವುಮೇನಿಯಾ ಹೋಳಿ ಆಚರಿಸಲಾಗುತ್ತಿದೆ ಇದಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ ವುಮೇನಿಯಾ ಹೋಳಿಯಲ್ಲಿ ವರ್ಷ ಕಳೆದಂತೆ ಭಾಗವಹಿಸುವ ಮಹಿಳೆಯರ ಸಂಖ್ಯೆ ದುಪ್ಪಟ್ಟಾಗುತ್ತಿದೆ ಎಂದು ಹರ್ಷ ವ್ಯೆಕ್ತಪಡಿಸಿದರು

ಹರ್ಷಾ ಶುಗರ್ಸ ಪ್ರಾಯೋಜಕತ್ವದಲ್ಲಿ ನಡೆದ ವುಮೇನಿಯಾ ಹೋಳಿಯಲ್ಲಿ ಸಂಗ್ರಹವಾದ ಪ್ರವೇಶ ಶುಲ್ಕವನ್ನು ಹುತಾತ್ಮ ಯೋದರ ನಿಧಿಗೆ ಸಮರ್ಪಿಸಲಾಗುವದು ಎಂದು ಹೆಬ್ಬಾಳಕರ ತಿಳಿಸಿದರು

ವುಮೇನಿಯಾ ಹೋಳಿಯಲ್ಲಿ ಹೆಬ್ಬಾಳಕರ ಅವರ ತಾಯಿ ಮತ್ತು ಸಹೋದರಿಯರು ಎಲ್ಲರ ಗಮನ ಸೆಳೆದರು ಮಾಜಿ ಶಾಸಕ ಫಿರೋಜ್ ಸೇಠ ಅವರ ಶ್ರೀಮತಿ ವುಮೇನಿಯಾ ಹೋಳಿಯ ಮುಖ್ಯ ಅತಿಥಿಯಾಗಿದ್ದು ವಿಶೇಷ

About BGAdmin

Check Also

ಬೆಳಗಾವಿಗೆ ಐಐಐಟಿ ಬರುವದನ್ನು ತಪ್ಪಸಿದವರೇ ಸುರೇಶ್ ಅಂಗಡಿ- ಲಕ್ಷ್ಮೀ ಹೆಬ್ಬಾಳಕರ ಆರೋಪ

ಬೆಳಗಾವಿ-ನುಡಿದಂತೆ ನಡೆದಿದ್ದೇನೆ.ಅಲ್ಪಾವಧಿಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಿದ್ದೇನೆ.ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಳ್ಳಿ ಹಳ್ಳಿಗಳಲ್ಲಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದೇನೆ,ಲೋಕಸಭಾ ಚುನಾವಣೆ ನನ್ನ ಗೌರವದ …

Leave a Reply

Your email address will not be published. Required fields are marked *