Home / Breaking News / ಬೆಳಗಾವಿ ಭೀಮ್ಸ್ ಕುರಿತು ಮೌನ ಮುರಿದ,ಬಿಸ್ವಾಸ್…

ಬೆಳಗಾವಿ ಭೀಮ್ಸ್ ಕುರಿತು ಮೌನ ಮುರಿದ,ಬಿಸ್ವಾಸ್…

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕೋವೀಡ್ ನಿರ್ವಹಣೆ ಮಾಡಲು,ಬೆಳಗಾವಿ ಜಿಲ್ಲಾ ಆಸ್ಪತ್ರೆ ಭೀಮ್ಸ್ ಗೆ ಮೇಲುಸ್ತುವಾರಿ, ಅಧಿಕಾರಿಯಾಗಿ ನೇಮಕಗೊಂಡಿರುವ,ಪ್ರಾದೇಶಿಕ ಆಯುಕ್ತ ಅಮಲನ್ ಆದಿತ್ಯ ಬಿಸ್ವಾಸ್ ಇವತ್ತು ಮೌನ ಮುರಿದಿದ್ದಾರೆ.

ಬೆಳಗಾವಿಯಲ್ಲಿ ಬಿಮ್ಸ್ ವಿಶೇಷ ಆಡಳಿತ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಸಿಎಂ,ವಿಡಿಯೋ ಕಾನ್ಫರೆನ್ಸ್ ಬಳಿಕ ಮಾದ್ಯಮಗಳ ಜೊತೆ ಮಾತನಾಡಿ, ಬಿಮ್ಸ್ ನಲ್ಲಿ ಎರಡು ದಿನಗಳಿಂದ ಸಭೆ ಮಾಡಿದ್ದೇನೆ. ಬಿಮ್ಸ್ ನಲ್ಲಿ ಕೆಲವು ವೈದ್ಯರು ಹೊರಗೆ ಕೆಲಸ ಮಾಡುತ್ತಾರೆ. ಇದನ್ನು ಸರಿ ಪಡಿಸಲು ಕ್ರಮ ಕೈಗೊಳ್ಳಲಾಗುವುತ್ತದೆ. ಸರ್ವಿಸ್ ರೂಲ್ಸ್ ಪ್ರಕಾರ ಅನುಮತಿ ಇದೆಯೋ ಇಲ್ಲವೋ ಬೇರೆ.
ಸದ್ಯ ನಮ್ಮ ಹೋರಾಟ ಕೋವಿಟ್ ವಿರುದ್ಧ ಇದೆ.
ಎಲ್ಲರೂ ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಣೆ ಮಾಡಬೇಕು. ಹಿರಿಯ, ಕಿರಿಯ ಎಲ್ಲಾ ವೈದ್ಯರು ಚಿಕಿತ್ಸೆ ಹೋಗಬೇಕು. ಎಂದು ಕಟ್ಡುನಿಟ್ಟಿನ ಸೂಚನೆ ನೀಡಿದ್ದೇನೆ,ಎಂದು ಬಿಸ್ವಾಸ್ ಹೇಳಿದರು.

ಆಸ್ಪತ್ರೆಯಲ್ಲಿ ಸ್ವಚ್ಛತೆ, ಪೌಷ್ಠಿಕ ಆಹಾರ ನೀಡುವ ಬಗ್ಗೆ ಚರ್ಚೆ ಮಾಡಿದ್ದೇನೆ. ಆಸ್ಪತ್ರೆಯಲ್ಲಿ ಪಿ ಜಿ ಕೋರ್ಸ್ ಇಲ್ಲ. ಬ್ಲಾಕ್ ಫಂಗಸ್ ಚಿಕಿತ್ಸೆ ಕೊಡಲು ಶಸ್ತ್ರ ಚಿಕಿತ್ಸೆ ಅವಶ್ಯಕ ಆಸ್ಪತ್ರೆಯಲ್ಲಿ ಇಬ್ಬರೇ ವೈದ್ಯರು ಇದ್ದು. ಇ ಎಸ್ ಐ ಆಸ್ಪತ್ರೆಯಿಂದ ಒಬ್ಬರನ್ನು ಡೆಪ್ಯುಟ ಮಾಡಲಾಗಿದೆ.
ಗದಗ ಹಾಗೂ ಹುಬ್ಬಳ್ಳಿಯಿಂದ ಮೂರು ಜನ ಪಿಜಿ ಸ್ಟೂಡೆಂಟ್ ಡೆಪ್ಯುಟ ಮಾಡಲಾಗಿದ್ದು ಬ್ಲ್ಯಾಕ್ ಫಂಗಸ್ ಚಿಕಿತ್ಸೆಗೆ ಬೆಳಗಾವಿ ಭೀಮ್ಸ್ ನಲ್ಲಿ ಎಲ್ಲರೀತಿಯ ವ್ಯೆವಸ್ಥೆ ಮಾಡಲಾಗಿದೆ.
35 ಜನ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇದೆ.
ದಿನಕ್ಕೆ 9 ಜನರಿಗೆ ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದು ಸೂಚನೆ ನೀಡಿದ್ದೇವೆ ಎಂದರು.

ಶಸ್ತ್ರ ಚಿಕಿತ್ಸೆ ಮಾಡಲು ಹೆಚ್ಚಿ‌ನ ಉಪಕರಣಕ್ಕೆ ಟೆಂಡರ್ ಕರೆಯಲಾಗಿದೆ ಗುತ್ತಿಗೆ ನೌಕರರ ಟೆಂಡರ್ ಅವಧಿ ಮುಗಿದಿದೆ. ಒಂದು ರೂಪಾಯಿ ಟೆಂಡರ್ ಮಾಡಲು ಸಾಧ್ಯವಿಲ್ಲ. ಇದನ್ನು ವ್ಯವಸ್ಥೆ ಸರಿ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ.
ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬೇಕಿರೋ ಔಷಧಿ ಬರುತ್ತಿದೆ.ಈಗ ಔಷಧಿ ಕೊರತೆ ಇಲ್ಲ ಎಂದರು.

Check Also

52 ದಿನಗಳ ಬೀಗಕ್ಕೆ ಬ್ರೆಕ್,ಬೆಳಗಾವಿ ಇಂದಿನಿಂದ ಖುಲ್ಲಂ ಖುಲ್ಲಾ…!!!

ಬೆಳಗಾವಿ- ಬೆಳಗಾವಿ ಜಿಲ್ಲೆ ಕೊರೋನಾ ಮಹಾಮಾರಿಯ ಕಾಟಕ್ಕೆ ತತ್ತರಿಸಿತ್ತು,ಜಿಲ್ಲೆಯ ಜನ ಬರೊಬ್ಬರಿ 52 ದಿನಗಳ ಅನುಭವಿಸಿದ ಮನೆವಾಸದಿಂದ ಇಂದು ಮುಕ್ತಿ …

Leave a Reply

Your email address will not be published. Required fields are marked *