Breaking News
Home / Breaking News / ಎಪಿಎಂಸಿ ತರಕಾರಿ ಬ್ಲಾಕ್ ಬಂದ್ ,ರಸ್ತೆಯಲ್ಲೇ ವಹಿವಾಟು…!!!

ಎಪಿಎಂಸಿ ತರಕಾರಿ ಬ್ಲಾಕ್ ಬಂದ್ ,ರಸ್ತೆಯಲ್ಲೇ ವಹಿವಾಟು…!!!

ಬೆಳಗಾವಿ-ವಿಕೆಂಡ್ ಕರ್ಫ್ಯು ನಿಂದಾಗಿ ಎರಡು ದಿನ ಬಂದ್ ಆಗಿದ್ದ ಬೆಳಗಾವಿಯ ಎಪಿಎಂಸಿ ಮಾರುಕಟ್ಟೆ ಇವತ್ತು ಓಪನ್ ಆಗಿದ್ದು  ಮಾರುಕಟ್ಟೆಗೆ ಸಿಕ್ಕಾಪಟ್ಟೆ ತರಕಾರಿ ಬಂದಿದೆ.

ಎಪಿಎಂಸಿ ಮಾರುಕಟ್ಟೆಯ ಕಾಯಿಪಲ್ಲೆ ಮಾರ್ಕೆಟ್ ವಿಭಾಗದ ಬ್ಲಾಕ್ ಗಳನ್ನು ಬಂದ್ ಮಾಡಿರುವ ಕಾರಣ,ರಸ್ತೆ,ಮತ್ತು ಆವರಣದಲ್ಲೇ ವಹಿವಾಟು ಶುರುವಾಗಿದೆ. ಎರಡು ದಿನ ಮಾರ್ಕೆಟ್ ಬಂದ್ ಆಗಿರುವ ಕಾರಣ ಇವತ್ತು ಮಾರ್ಕೆಟ್ ಗೆ ನಿರೀಕ್ಷೆಗೂ ಮೀರಿ ತರಕಾರಿ ಬಂದಿದೆ.

ಎಪಿಎಂಸಿ ಆಡಳಿತ ಮಂಡಳಿ ತರಕಾರಿ ಮಾರುಕಟ್ಟೆಯ ಬ್ಲಾಕ್ ಗಳನ್ನು ಬಂದ್ ಮಾಡಿ ರಸ್ತೆಯಲ್ಲೇ ವಹಿವಾಟಿಗೆ ಅವಕಾಶ ಮಾಡಿಕೊಟ್ಟಿದೆ,ಹೀಗಾಗಿ ಮಾರುಕಟ್ಟೆಯಲ್ಲಿ ಫುಲ್ ರಶ್ ಆಗಿದ್ದು,ಚಿಲ್ಲರೆ ವ್ಯಾಪಾರಿಗಳೂ ಸಹ ಹೋಲ್ ಸೇಲ್ ಮಾರ್ಕೆಟ್ ಗೆ ಮುಗಿಬಿದ್ದಿದ್ದಾರೆ.

ಇರುವ ವ್ಯೆವಸ್ಥೆಗೆ ಕೀಲಿ ಹಾಕಿ ರಸ್ತೆಯ ಮೇಲೆ ವಹಿವಾಟು ಮಾಡಲು ಅನುಮತಿ ನೀಡಿರುವ ಎಪಿಎಂಸಿ ಆಡಳಿತ ಮಂಡಳಿಯ ಕಾರ್ಯವೈಖರಿ ನೆಗೆ ಪಾಟೀಲಕ್ಕೀಡಾಗಿದೆ.

ವರ್ತಕರು ಏನಂತಾರೆ ಗೊತ್ತಾ..??

ಹೌದು ಎರಡು ದಿನ ಮಾರ್ಕೆಟ್ ಬಂದ್ ಇರುವ ಕಾರಣ ಇವತ್ತು ಸಿಕ್ಕಾಪಟ್ಟೆ ಮಾಲು ಬಂದಿದೆ,ನಾಳೆಯಿಂದ ನಾವು ರಶ್ ಆಗದಂತೆ ವ್ಯೆವಸ್ಥೆ ಮಾಡಿಕೊಳ್ಳುತ್ತೇವೆ,ಎಪಿಎಂಸಿ ಮಾರುಕಟ್ಟೆ ಆವರಣ ದೊಡ್ಡದಾಗಿದೆ,ಇಲ್ಲಿಯೇ ವ್ಯೆವಸ್ಥಿತವಾಗಿ ಮಾರುಕಟ್ಟೆ ನಡೆಸುತ್ತೇವೆ.ಎಪಿಎಂಸಿ ಸ್ಥಳಾಂತರದಿಂದ ನಮಗೂ ಕಷ್ಟ ,ರೈತರಿಗೂ ಅನಾನಕೂಲ,ಕಳೆದ ವರ್ಷ ಅಲ್ಲಲ್ಲಿ ಶೆಡ್ ಹಾಕಿ ವ್ಯಾಪಾರ ಮಾಡಿದ್ದೇವು,ಮಳೆ,ಗಾಳಿಗೆ ಶೆಡ್ ಗಳು ಹಾರಿ ಹೋಗಿದ್ದವು.ಈ ಭಾರಿ ಹಾಗೆ ಆಗುವದು ಬೇಡ ಎಪಿಎಂಸಿ ಮಾರುಕಟ್ಟೆಯಲ್ಲೇ ವ್ಯೆವಸ್ಥಿತವಾಗಿ ಎಲ್ಲ ರೀತಿಯ ಅನಕೂಲ ಮಾಡಿಕೊಂಡು ಶಿಸ್ತು ಕಾಯ್ದುಕೊಳ್ಳುತ್ತೇವೆ ಅಂತಾರೆ ವ್ಯಾಪಾರಿಗಳು.

Check Also

ಬೆಳಗಾವಿಯ ನಕಲಿ ಐಡಿ ಪ್ರೀಂಟೀಂಗ್ ಪ್ರೆಸ್, ಮೇಲೆ ಪೋಲೀಸರ ದಾಳಿ….

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಖಡಕ್ ಲಾಕ್ ಡೌನ್ ಇದೆ,ಅಲ್ಲಲ್ಲಿ ಖಾಕಿ ಪಡೆ ಗಂಭೀರವಾಗಿ ವಾಹನ ಸವಾರರನ್ನು ತಪಾಸಣೆ ಮಾಡುತ್ತಿದೆ.ಹೀಗಾಗಿ ಕೆಲವರು ನಕಲಿ …

Leave a Reply

Your email address will not be published. Required fields are marked *