Breaking News
Home / Breaking News / ಪರೀಕ್ಷೆ ಮುಂದೂಡಿಕೆ,ಗಂಟು ಮೂಟೆ ಕಟ್ಟಿದ ವಿದ್ಯಾರ್ಥಿಗಳು…

ಪರೀಕ್ಷೆ ಮುಂದೂಡಿಕೆ,ಗಂಟು ಮೂಟೆ ಕಟ್ಟಿದ ವಿದ್ಯಾರ್ಥಿಗಳು…

ಬೆಳಗಾವಿ- ಇವತ್ತು ರಾತ್ರಿಯಿಂದ ರಾಜ್ಯ ಸರ್ಕಾರ 14 ದಿನ ಜನತಾ ಕರ್ಫ್ಯೂ ಜಾರಿ ಮಾಡಿದ ಹಿನ್ನೆಲೆಯಲ್ಲಿ,ಬೆಂಗಳೂರು ಸೇರಿ ಅನ್ಯ ಜಿಲ್ಲೆಗಳಿಂದ ಬೆಳಗಾವಿಗೆ ಜನ ವಾಪಸಾಗುತ್ತಿದ್ದಾರೆ.

ಇಂದು ಬೆಳಿಗ್ಗೆ ಬೆಳಗಾವಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ದಂಡು ಆಗಮಿಸಿತು,ಇನ್ನೊಂದು ದಂಡು ಬೇರೆ,ಬೇರೆ ಕಡೆಗೆ ಹೋಗಲು ರೆಡಿಯಾಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿತ್ತು,ಇಂದು ರಾತ್ರಿಯಿಂದ ಸರ್ಕಾರಿ, ಖಾಸಗಿ ಬಸ್‌ಗಳ ಸಂಚಾರ ಸ್ಥಗಿತ ಹಿನ್ನೆಲೆಯಲ್ಲಿ ಜನ ತಮ್ಮ ತಮ್ಮ ಸ್ವಗ್ರಾಮಗಳತ್ತ ಮುಖಮಾಡಿದರು.

ವಿಟಿಯು, ಆರ್‌ಸಿಯು ಪರೀಕ್ಷೆಗಳು ಮುಂದೂಡಿಕೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳುತಮ್ಮ ತಮ್ಮ ಊರುಗಳಿಗೆ ಲಗೇಜ್ ಸಮೇತ ವಾಪಸ್ ಆದರು.ಕೊನೆಯ ಘಳಿಗೆಯಲ್ಲಿ ವಿಟಿಯು ಪರೀಕ್ಷೆ ಮುಂದೂಡಿಕೆ ಹಿನ್ನೆಲೆಯಲ್ಲಿ ,ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ವಾಪಸ್ ಹೋದರು.

ಬೆಳಗಾವಿ ನಗರದ ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಸ್ವಗ್ರಾಮಕ್ಕೆ ವಾಪಸ್ ಮರಳಿದರು,ಬಸ್ ನಿಲ್ದಾಣದವರೆಗೂ ಕಾಲೇಜು ಬಸ್‌ನಲ್ಲಿ ಬಂದ ವಿದ್ಯಾರ್ಥಿಗಳು,ನಂತರ ಬಸ್ ಹಿಡಿದು ತಮ್ಮ ಸ್ವ ಗ್ರಾಮಗಳಿಗೆ ಮರಳಿದರು.

Check Also

ಬೆಳಗಾವಿಯ ನಕಲಿ ಐಡಿ ಪ್ರೀಂಟೀಂಗ್ ಪ್ರೆಸ್, ಮೇಲೆ ಪೋಲೀಸರ ದಾಳಿ….

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಖಡಕ್ ಲಾಕ್ ಡೌನ್ ಇದೆ,ಅಲ್ಲಲ್ಲಿ ಖಾಕಿ ಪಡೆ ಗಂಭೀರವಾಗಿ ವಾಹನ ಸವಾರರನ್ನು ತಪಾಸಣೆ ಮಾಡುತ್ತಿದೆ.ಹೀಗಾಗಿ ಕೆಲವರು ನಕಲಿ …

Leave a Reply

Your email address will not be published. Required fields are marked *