Breaking News
Home / Breaking News / ಕೋವೀಡ್ ಕುಣಿಕೆಯ ಭರಾಟೆಯಲ್ಲಿ ಮರೆತುಹೋದ ಮತ ಏಣಿಕೆ….!!!

ಕೋವೀಡ್ ಕುಣಿಕೆಯ ಭರಾಟೆಯಲ್ಲಿ ಮರೆತುಹೋದ ಮತ ಏಣಿಕೆ….!!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಚುನಾವಣೆ ಮುಕ್ತಾಯವಾಗಿದೆ.ಈ ಮಿನಿ ಸಂಘರ್ಘದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವ ಚರ್ಚೆ,ಲೆಕ್ಕಾಚಾರ ಗಳು ನಡೆಯುತ್ತಿರುವಾಗ ಕೋವೀಡ್ ಮಹಾಮಾರಿ ಒಕ್ಕರಿಸಿದ ಕಾರಣ ಈಗ ಎಲ್ಲವೂ ಮೌನ….

ಮೇ 2 ರಂದು ಮತ ಏಣಿಕೆ ನಡೆಯಲಿದೆ,ಆದರೂ ಗೆಲುವಿನ ಲೆಕ್ಕಾಚಾರದ ಚರ್ಚೆ ಮಾತ್ರ ಸ್ತಬ್ಧ ವಾಗಿದ್ದರೂ ಸಹ ಕ್ರಿಯಾಶೀಲ ರಾಜಕೀಯ ಪಡಸಾಲೆಯಲ್ಲಿ ಮಾತ್ರ. ಚರ್ಚೆ ಮುಂದುವರೆದಿದೆ.

ಬಿಜೆಪಿ ವಿರೋಧಿ ಅಲೆ ಇದೆ ಅಂತಾ ಕಾಂಗ್ರೆಸ್ಸಿನವರ ವಾದ,ಸ್ಥಳೀಯವಾಗಿ ಬಿಜೆಪಿಯ ಅಭಿವೃದ್ಧಿಯ ಅಲೆ ಇದೆ ಅನ್ನೋದು ಬಿಜೆಪಿಯ ವಾದ,ಕಾಂಗ್ರೆಸ್ ಮತ್ತು ಬಿಜೆಪಿಯ ವಾದ,ವಿವಾದ ನಡುವೆ ,ಎಂಈಎಸ್ ಅಭ್ಯರ್ಥಿಯ ಮೊಂಡುವಾದ ವರ್ಕೌಟ್ ಆಗಿದೆ.ಅನ್ನೋದು ಇನ್ನೊಂದು ವಾದ ಹೀಗಾಗಿ ಎಂಈಎಸ್ ನ ಶುಭಂ ಶಿಳಕೆ ಎಷ್ಟು ಮತ ಪಡೆಯುತ್ತಾರೆ ಅನ್ನೋವ ಲೆಕ್ಕಾಚಾರಗಳು ಈಗ ಜೋರಾಗಿಯೇ ನಡೆಯುತ್ತಿವೆ.

ಕೋವೀಡ್ ಭರಾಟೆಯ ನಡುವೆಯೂ ಜಿಲ್ಲಾಡಳಿತ ಮತ ಏಣಿಕೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ,ಮೇ 2 ರಂದು ಮತ ಏಣಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲ ಸಿಬ್ಬಂಧಿಗಳಿಗೆ ಕೋವೀಡ್ ಪರೀಕ್ಷೆ ಕಡ್ಡಾಯ ಮಾಡಲಾಗಿದೆ.ಜೊತೆಗೆ ಮತ ಏಣಿಕೆ ಕೇಂದ್ರಕ್ಕೆ ಹೋಗುವ ಮಾದ್ಯಮ ಪ್ರತಿನಿಧಿಗಳಿಗೂ ಕೋವೀಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ.ಹೀಗಾಗಿ ಮತ ಏಣಿಕೆ ಕೇಂದ್ರದಲ್ಲೂ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಬೆಳಗಾವಿ ಜಿಲ್ಲಾಧಿಕಾರಿಗಳು ಕೈಗೊಳ್ಳುತ್ತಿದ್ದಾರೆ‌.

Check Also

ಬೆಳಗಾವಿಯ ನಕಲಿ ಐಡಿ ಪ್ರೀಂಟೀಂಗ್ ಪ್ರೆಸ್, ಮೇಲೆ ಪೋಲೀಸರ ದಾಳಿ….

ಬೆಳಗಾವಿ-ಬೆಳಗಾವಿ ಮಹಾನಗರದಲ್ಲಿ ಖಡಕ್ ಲಾಕ್ ಡೌನ್ ಇದೆ,ಅಲ್ಲಲ್ಲಿ ಖಾಕಿ ಪಡೆ ಗಂಭೀರವಾಗಿ ವಾಹನ ಸವಾರರನ್ನು ತಪಾಸಣೆ ಮಾಡುತ್ತಿದೆ.ಹೀಗಾಗಿ ಕೆಲವರು ನಕಲಿ …

Leave a Reply

Your email address will not be published. Required fields are marked *