Home / Breaking News / ಬೆಳಗಾವಿಯ ಕೆಎಲ್ಇ ಸಂಸ್ಥೆ ಸಮಾಜದ ಋಣ ತೀರಿಸಲಿ…

ಬೆಳಗಾವಿಯ ಕೆಎಲ್ಇ ಸಂಸ್ಥೆ ಸಮಾಜದ ಋಣ ತೀರಿಸಲಿ…

ಕೊರೋನಾ – ಸರ್ಕಾರ ಶ್ವೇತ ಪತ್ರ ಹೊರಡಿಸಲಿ, ಜನಪ್ರತಿನಿಧಿಗಳು ಪ್ರೇಮ ಪತ್ರ ಹೊರಡಿಸಲಿ

ಬೆಳಗಾವಿ ಜಿಲ್ಲೆಯಲ್ಲಿ ಮಹಾಮಾರಿ ಕೊರೋನಾ ಮರಣ ಮೃದಂಗ ಮುಂದುವರೆದಿದೆ,ಆಸ್ಪತ್ರೆಗಳಲ್ಲಿ ಬೆಡ್ ಸಿಗುತ್ತಿಲ್ಲ,ಬೆಡ್ ಸಿಕ್ಕರೂ ಆಕ್ಸೀಜನ್,ಸಿಗುತ್ತಿಲ್ಲ,ಜನರ ಗೋಳಾಟ ಕಡಿಮೆ ಆಗಿಲ್ಲ,ರಾಜ್ಯದಲ್ಲಿಯೇ ಅತೀದೊಡ್ಡ ಜಿಲ್ಲೆಯಲ್ಲಿ ಜನಸಂಖ್ಯೆಗೆ ತಕ್ಕಂತೆ ಸರ್ಕಾರದ ನೆರವು ಸಿಗುತ್ತಿಲ್ಲ,ಕೊರೋನಾ ಕಾಟ ನೀಗಿಸಲು ಏನೇ ಕೇಳಿದರೂ ಇಲ್ಲಾ..ಇಲ್ಲಾ.ಇಲ್ಲಾ..ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ.ಜಿಲ್ಲೆಯಲ್ಲಿ ನಾಲ್ಕು ಜನ ಮಂತ್ರಿಗಳಿದ್ದರೂ ಅವರು ಕಾಳಜಿ ಮಾಡುತ್ತಿಲ್ಲ,ಇಂತಹ ಸಂಧರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ,ತಮ್ಮ,ಜವಾಬ್ದಾರಿ ನಿಭಾಯಿಸಿ ಒಬ್ಬರಿಗೆ ಇನ್ನೊಬ್ಬರು ಸಹಾಯ ಹಸ್ತ ಚಾಚಬೇಕಾದ ಅಗತ್ಯವಿದೆ…..

ಬೆಳಗಾವಿ ಸುದ್ದಿ ವಿಶೇಷಮಹಾಮಾರಿ ಕೊರೋನಾ ವೈರಸ್ ಸೋಂಕಿಗೆ ಇಡೀ ಜಗತ್ತೇ ತಲ್ಲಣಗೊಂಡಿದೆ.ಸೋಂಕು ನಗರ, ಗ್ರಾಮೀಣ ಪ್ರದೇಶಗಳಿಗೂ ಲಗ್ಗೆ ಇಟ್ಟಾಗಿದೆ. ಬಡವರ ಬದುಕನ್ನು ಕೊರೋನಾ ಬರ್ಬಾದ್ ಮಾಡಿದೆ. ಒಂದೆಡೆ ಸೋಂಕಿನ ಭೀತಿ, ಇನ್ನೊಂದೆಡೆ ಕೆಲಸ ಇಲ್ಲದೇ ಮನೆಗಳನ್ನು ನಡೆಸುವುದೇ ಕಷ್ಟ. ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದೇ ಬಡ ವರ್ಗದ ಜನತೆ ನರಕಯಾತನೆ ಅನುಭವಿಸುವಂತಹ ದುಸ್ಥಿತಿ ಎದುರಾಗಿದೆ. ಇಂತಹ ಸಂದಿಗ್ಧ ವಿಷಮ ಸ್ಥಿತಿಯಲ್ಲಿ ಉಳ್ಳವರು ಬಡ ವರ್ಗದ ಕುಟುಂಬಗಳಿಗೆ ನೆರವಿನ ಹಸ್ತ ಚಾಚಬೇಕಾದ ಅಗತ್ಯವಿದೆ.ಬೆಳಗಾವಿ ಜಿಲ್ಲೆಯಲ್ಲೇನೂ ಕೋಟ್ಯಾಧೀಶರರಿಗೆ ಕೊರತೆ ಇಲ್ಲ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಕೂಡ ಹೊರತಾಗಿಲ್ಲ. ಕೊರೋನಾದ ಇಂತಹ ಸಂಕಷ್ಚದ ಸಮಯದಲ್ಲಿ ಕೋಟ್ಯಾಧೀಶರು, ಬಡ ಬಗ್ಗರಿಗೆ, ಕೂಲಿ ಕಾರ್ಮಿಕರಿಗೆ, ಬೀದಿ ಬದಿಯ ವ್ಯಾಪಾರಸ್ಥರು ಸೇರಿದಂತೆ ಬಡವರ್ಗದ  ಕುಟುಂಬಗಳಿಗೆ ಆರ್ಥಿಕ ನೆರವು ಒದಗಿಸುವುದರ ಜೊತೆಗೆ ಆಹಾರ ಕಿಟ್ ಗಳನ್ನು ನೀಡಿ, ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆಯಬೇಕಿದೆ.

ಕೊರೋನಾ ಸಂಕಷ್ಟದಲ್ಲಿರುವ ಜನತೆಯ ನೆರವು ನೀಡುವುದು ಕೇವಲ ಸರ್ಕಾರದ ಕೆಲಸವಲ್ಲ. ಇದರಲ್ಲಿ ಎಲ್ಲರ ಜವಾಬ್ದಾರಿಯೂ ಇದೆ.ಕೊರೋನಾ ವೈರಸ್ ಇಂದು ಕರುಳ ಬಳ್ಳಿ ಸಂಬಂಧಗಳನ್ನು ಕಡಿದುಹಾಕುತ್ತಿದೆ. ಸೋಂಕಿನಿಂದ ಸತ್ತರೇ ಸಂಬಂಧಿಕರಿಲ್ಲದೇ ಶವವನ್ನು ಅನಾಥ ಶವದಂತೆ ಶವಸಂಸ್ಥಾರ ಮಾಡುತ್ತಿರುವ ದೃಶ್ಯಗಳು ದೃಷ್ಯ ಮಾಧ್ಯಗಳಲ್ಲಿ ಕ್ಷಣ ಕ್ಷಣಕ್ಕೂ ಕಾಣಸಿಗುತ್ತಿವೆ. ಮಾನವೀಯತೆ ಇಂದು ಮಾಯವಾಗಿದೆ. ಎನ್ನುವುದನ್ನು ಇಂದಿನ ವಿಷಯ ಪರಿಸ್ಥಿತಿ ಎಲ್ಲರಿಗೂ ಮನವರಿಕೆ ಮಾಡಿಕೊಟ್ಟಾಗಿದೆ.ಕಳೆದ ವರ್ಷವೂ ಕಾಡಿದ ಕೊರೋನಾ ಈ ಬಾರಿ ಎರಡನೇ ಅಲೆ ಎಬ್ಬಿಸಿದೆ. ಜನರ ನಿದ್ದೆ ಕೆಡೆಸಿದೆ. ಎಲ್ಲಿ ನೋಡಿದ್ದಲ್ಲಿ ಕೊರೋನಾದ್ದೇ ರಣಕೇಕೆ ಕೇಳಿಬರುತ್ತಿದೆ. ಕೊರೋನಾ ಸಂಕಷ್ಟಕ್ಕೆ ಇಡಾಗಿರುವ ಬಡ ಕುಟುಂಬಗಳಿಗೆ ನೆರವಿನ ಸಹಾಯ ಹಸ್ತ ನೀಡಬೇಕಿರುವುದು ಸಮಾಜದ ಕರ್ತವ್ಯವೂ ಹೌದು.
ಕೊರೋನಾಸೋಂಕಿತರ ನೆರವಿಗೆ ಈಗಾಗಲೇ ಜನಪ್ರತಿನಿಧಿಗಳು ಸೇರಿದಂತೆ ಸಮಾಜ ಸೇವಕರು ತಮ್ಮದೇ ಆದ ನೆರವು ನೀಡಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಇದೀಗ ಕೊರೋನಾದಿಂದ ಉದ್ಯೋಗ ಇಲ್ಲದೇ ಒಪ್ಪತ್ತಿನ ಊಟಕ್ಕೂ ಗತಿ ಇಲ್ಲದೇ ಇರುವ ಬಡ ಕುಟುಂಬಗಳ ಪರಿಸ್ಥಿತಿ ನಿಜಕ್ಕೂ ಕರುಣಾಜನಕವಾಗಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ರಾಜಕಾರಣಿಗಳು, ಸಮಾಜ ಸೇವಕರು, ಸಂಘ- ಸಂಸ್ಥೆಗಳು ಬಡ ಜನತೆಗೆ ಧೈರ್ಯ ತುಂಬುವ ಜೊತೆಗೆ ಅವರಿಗೆ ನೆರವು ನೀಡಲು ಮುಂದಾಗಬೇಕಾದ ಅನಿವಾರ್ಯತೆಯಿದೆ.ಗೋಕಾಕದ ಶಾಸಕ ರಮೇಶ ಜಾರಕಿಹೊಳಿ, ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಯಮಕನಮರಡಿ ಶಾಸಕ ಸತೀಶಜಾರಕಿಹೊಳಿ ಹೀಗೆ ಜಾರಕಿಹೊಳಿ ಸಹೋದರರು ಈಗಾಗಲೇ ಜನತೆ ಸೇವೆಗೆ ನಿಂತಿದ್ದಾರೆ. ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಬೆಳಗಾವಿ ಉತ್ತರ ಶಾಸಕ ಅನಿಲ ಬೆನಕೆ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಇವರು ಕೂಡ ಸೇವೆಗೆ ನಿಂತಿದ್ದಾರೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ರಾಜು ಸೇಠ್ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಲೋಕಸಭೆಗೆ ಆಯ್ಕೆಯಾದ ಮಂಗಲಾ ಸುರೇಶ ಅಂಗಡಿ ಅವರು ಬಡ ಜನತೆಗೆ ಆಹಾರ ಕಿಟ್ ಗಳನ್ನು ಹಂಚಿಕೆ ಮಾಡಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ದಂಪತಿ ತಮ್ಮ ಶಾಲೆಯಲ್ಲಿ ಕೋವಿಡ್ ಕೇಂದ್ರವನ್ನು ಆರಂಭಿಸಿದ್ದಾರೆ.   ಹೀಗೆ ಇನ್ನು ಯಾರು ಏನು ಮಾಡುತ್ತಿದ್ದಾರೆ ಎನ್ನುವುದು ಸಮಾಜಕ್ಕೆ ಗೊತ್ತಾಗಬೇಕಿದೆ. ಸರ್ಕಾರದ ಏನು ಮಾಡಿದೆ ಎನ್ನುವುದರ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಕ್ಷೇತ್ರದ ಜನತೆಗೆ ಯಾವ ರೀತಿಯ ನೆರವು ನೀಡುತ್ತಿದ್ದಾರೆ ಎನ್ನುವದರ ಬಗ್ಗೆ ಪ್ರೇಮ ಪತ್ರವನ್ನು ಹೊರಡಿಸಲಿ.

ಕೆಎಲ್ಇ ಸಂಸ್ಥೆ ಸಮಾಜದ ಋಣ ತೀರಿಸಲಿ

ಏಷಿಯಾ ಖಂಢದಲ್ಲೇ ಅತ್ಯಂತ ದೊಡ್ಡ ಆಸ್ಪತ್ರೆ ಎಂಬ ಖ್ಯಾತಿ ಹೊಂದಿರುವ ಬೆಳಗಾವಿಯ ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಈ ನಾಡಿನ ಹೆಮ್ಮೆ ವಿಚಾರ. ಸಪ್ತಸಾಗರದಾಚೆಗೂ ತನ್ನ ಸೇವೆಯನ್ನು ವಿಸ್ತರಣೆ ಮಾಡಿದೆ. ಆದರೆ, ಇಂದಿನ ಕೊರೋನಾ ಸಂಕಷ್ಟ ಸಮಯದಲ್ಲಿ ಕೆೆಎಲ್ ಇ ಸಂಸ್ಥೆಯೂ ತನ್ನ ಸಾಮಾಜಿಕ ಜವಾಬ್ದಾರಿ ಮೆರೆಯಬೇಕಿದೆ. ಬಾಗಲಕೋಟೆಯಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರು ತಮ್ಮ ಆಸ್ಪತ್ರೆಯಲ್ಲಿ 500 ಹಾಸಿಗೆಗಳನ್ನು ಕೊರೋನಾ ಸೋಂಕಿತರಿಗೆ ಕಲ್ಪಿಸಲಾಗಿದ್ದು, ಇಲ್ಲಿ ಉಚಿತ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಅದರಂತೆ ಕೆಎಲ್ಇ ಸಂಸ್ಥೆಯೂ ಬಡ ವರ್ಗದ ಕೊರೋನಾ ಸೋಂಕಿತರಿಗೆ ಉಚಿತ ವೈದ್ಯಕೀಯ ಸೇವೆ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಮೂಲಕ ತನ್ನ ಸಮಾಜದ ಋಣವನ್ನು ತೀರಿಸುವ ಕೆಲಸವನ್ನು ಮಾಡಬೇಕಿದೆ. ಕೆಎಲ್ಇ ಸಂಸ್ಥೆಯ ಸಪ್ತರ್ಷಿಗಳು ಕಟ್ಟಿದ ಈ ಸಂಸ್ಥೆಯು ಇಂದು ಸಂಕಷ್ಟದಲ್ಲಿರುವ ಜನತೆಯ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ಸಂಸ್ಥೆಯ ಕಾರ್ಯಾದ್ಯಕ್ಷ ಡಾ.ಪ್ರಭಾಕರ ಕೋರೆ ಕ್ರಮ ಕೈಗೊಳ್ಳಬೇಕಿದೆ.  ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ಬಡ ವರ್ಗದ ಜನತೆಗೆ ಕನಿಷ್ಠ 500 ಹಾಸಿಗೆಗಳನ್ನು ಮೀಸಲಿಟ್ಟರೆ ಜನತೆಯ ಪಾಲಿಗೆ  ನಿಜಕ್ಕೂ ಕೋರೆ ಅವರು ದೇವತಾ ಮನುಷ್ಯ ಎನ್ನಿಸಿಕೊಳ್ಳುತ್ತಾರೆ ಎಂಬುದನ್ನು ಕಾಯ್ದುನೋಡಬೇಕು.
ಮಠಾಧೀಶರು ಮುಂದಾಗಲಿಜಿಲ್ಲೆಯಲ್ಲಿ ಮಠಗಳಿಗೇನೂ ಕೊರತೆಇಲ್ಲ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಮರಾಠೀಶರುಬಡ ಕುಟುಂಬಗಳಿಗೆ ನೆರವು ನೀಡಬೇಕಿದೆ. ಜಿಲ್ಲೆಯ ಬಹುತೇಕ ಮಠಗಳಲ್ಲಿ ಅನ್ನ ದಾಸೋಹದ ಪರಿಕಲ್ಪನೆಯಿದೆ. ಕೆಲವು ಮಠಗಳು ಈಗಾಗಲೇ ಸಂಕಷ್ಟದಲ್ಲಿರುವ ಜನತೆಯೆತಮ್ಮ ಮಠದಲ್ಲೇ ವಾಸ್ತವ್ಯದ ವ್ಯವಸ್ಥೆಯನ್ನೂ ಮಾಡಿವೆ. ಉಳಿದ ಮಠಾಧೀಶರುಕೂಡಸಂಕಷ್ಟದಲ್ಲಿರುವ ಜನತೆಗೆ ನೆರವು ನೀಡಲು ಮುಂದಾಗಬೇಕು.

Check Also

52 ದಿನಗಳ ಬೀಗಕ್ಕೆ ಬ್ರೆಕ್,ಬೆಳಗಾವಿ ಇಂದಿನಿಂದ ಖುಲ್ಲಂ ಖುಲ್ಲಾ…!!!

ಬೆಳಗಾವಿ- ಬೆಳಗಾವಿ ಜಿಲ್ಲೆ ಕೊರೋನಾ ಮಹಾಮಾರಿಯ ಕಾಟಕ್ಕೆ ತತ್ತರಿಸಿತ್ತು,ಜಿಲ್ಲೆಯ ಜನ ಬರೊಬ್ಬರಿ 52 ದಿನಗಳ ಅನುಭವಿಸಿದ ಮನೆವಾಸದಿಂದ ಇಂದು ಮುಕ್ತಿ …

Leave a Reply

Your email address will not be published. Required fields are marked *