Breaking News
Home / Breaking News

Breaking News

ಉಗ್ರರ ದಾಳಿ ಖಂಡಿಸಿ ಹುಕ್ಕೇರಿ ಬಂದ್ …ಪ್ರತಿಭಟನೆ

ಬೆಳಗಾವಿ : ಜಮ್ಮು ಕಾಶ್ಮೀರದ ಪುಲಾಮದಲ್ಲಿ ಸಿ.ಆರ್.ಪಿ.ಎಫ್ ಯೋದರ ಮೇಲಿನ ಹಲ್ಲೆ ಖಂಡಿಸಿ ಶನಿವಾರ ಹುಕ್ಕೇರಿ ಪಟ್ಟಣದಲ್ಲಿ ಪ್ರತಿಭಟನೆ. ಬಂದಗೆ ಬೆಂಬಲಿಸಿ ಶನಿವಾರ ಮುಂಜಾನೆಯಿಂದಲೆ ಅಂಗಡಿ ಮುಂಗಟ್ಟುಗಳನ್ನು ಬಂದ ಮಾಡಿದ ವ್ಯಾಪಾರಸ್ಥರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ ಶಿಕ್ಷಣ ಸಂಸ್ಥೆಗಳು. ಎಂದಿನಂತೆ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ವಾಹನಗಳು. ಹುಕ್ಕೇರಿಯ ಅಡವಿಸಿದ್ದೇಶ್ವರ ಮಠದಿಂದ ಬಸವ ಸರ್ಕಲ್ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲ್ಲಿದೆ. ಅಲ್ಲದೆ ಉಗ್ರರ ದಾಳಿ ಖಂಡಿಸಿ ಇಂದು …

Read More »

ದಾಳಿಗೆ ಪ್ರತಿದಾಳಿ ಮಾಡಿ ಪಾಕಿಸ್ತಾನವನ್ನು ದಮನ ಮಾಡಿ

ಬೆಳಗಾವಿ ಭಾರತೀಯ ಸೈನಿಕರ ಮೇಲೆ ಪಾಕಿಸ್ತಾನದ ಉಗ್ರರ ಹಲ್ಲೆಯನ್ನು ಖಂಡಿಸಿ ಶುಕ್ರವಾರ ವಿಶ್ವ ಹಿಂದು‌ ಪರಿಷದ್, ಬಜರಂಗ ದಳದ ಕಾರ್ಯಕರ್ತರು ಚನ್ನಮ್ಮ‌ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಮ್ಮು ಕಾಶ್ಮೀರದ ಪುಲ್ಮಾದಲ್ಲಿ ಗುರುವಾರ ಮಧ್ಯಾಹ್ನ ಕರ್ತವ್ಯಕ್ಕೆ ಹೊದ ಭಾರತೀಯ ಸೇವೆಯ ವಾಹನದ ಮೇಲೆ ಪಾಕ್ ಬೆಂಬಲಿತ ಉಗ್ರರ ವಾಹನಕ್ಕೆ ಡಿಕ್ಕಿ ಹೊಡೆಸಿ ಭಾರತದ ಶೂರ, ವೀರರ ಸೇನಾನಿಗಳನ್ನು ಬಲಿ ತೆಗೆದುಕೊಂಡಿದ್ದಾರೆ. ಇದು ಪಾಕಿಸ್ತಾನ ಭಾರತದ ಮೇಲೆ ಹಲ್ಲೆ …

Read More »

ಕಾಂಗ್ರೆಸ್ ಟಿಕೆಟ್ ಗಾಗಿ ರಮೇಶ್ ಗೆ ರಮೇಶ್ ದುಂಬಾಲು…..!!

ಬೆಳಗಾವಿ- ಲೋಕಸಭೆ ಚುನಾವಣೆ ಘೋಷಣೆಯಾಗುವ ಹೊಸ್ತಿಲಲ್ಲಿ ಆಕಾಂಕ್ಷಿಗಳ ಲಾಭಿ ಜೋರಾಗಿಯೇ ನಡೆದಿದೆ ಬೆಳಗಾವಿಯಿಂದ ಎರಡು ಬಾರಿ ಶಾಸಕರಾಗಿದ್ದ ರಮೇಶ್ ಕುಡಚಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ದಿಸಲು ನಿರ್ಧರಿಸಿದ್ದಾರೆ ಬೆಳಗಾವಿ ಉತ್ತರ ದಕ್ಷಿಣ ಎಂದು ಕ್ಷೇತ್ರ ವಿಂಗಡನೆಯ ಬಳಿಕ ಕಾಂಗ್ರೆಸ್ ಟಿಕೆಟ್ ನಿಂದ ವಂಚಿತರಾಗಿದ್ದ ರಮೇಶ್ ಕುಡಚಿ ದಶಕದ ಅಜ್ಞಾತವಾಸದ ಬಳಿಕ ಈಗ ಮತ್ತೆ ರಂಗಪ್ರವೇಶ ಮಾಡಿದ್ದಾರೆ ಈ ಬಾರಿ ಲೋಕಸಭೆಗೆ ಸ್ಪರ್ದಿಸಲು ತಮಗೆ ಕಾಂಗ್ರೆಸ್ ಟಿಕೆಟ್ ದೊರಕಿಸಿ ಕೊಡುವಂತೆ ರಮೇಶ್ ಕುಡಚಿ …

Read More »

ಬೆಳಗಾವಿಯ ಹುಕ್ಕೇರಿ ಹಿರೇಮಠಕ್ಕೆ ಕಾಶಿ ಜಗದ್ಗುರುಗಳ ಭೇಟಿ

ಬೆಳಗಾವಿ ಎರಡು ಸಾವಿರದ ಮಕ್ಕಳು ವೇಧವನ್ನು ಕಲಿಯುವುದರೊಂದಿಗೆ ಐದನೂರು ಜನ ಹೆಣ್ಣು ಮಕ್ಕಳು ವೇಧವನ್ನು ಕಲಿಯುವದರ ಮೂಲಕ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಗುರುಕುಲ ಕ್ರಾಂತಿಯನ್ನೆ ಮಾಡಿದೆ ಎಂದು ಕಾಶಿ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಬಗವತ್ಪಾದರು ಹೇಳಿದರು. ಅವರು ಗುರುವಾರ ನಗರದ ಲಕ್ಷ್ಮೀಟೆಕಡಿಯ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಇಷ್ಟ ಲಿಂಗ ಪೂಜೆ ಸಾಮೂಹಿಕ ರುದ್ರಪಠಣ ಮಹಿಳೆಯರಿಂದ ಜರುಗಿದ ಕಾರ್ಯಕ್ರಮದಲ್ಲಿ ಮಾತನಾಡಿದರು. ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗಡಿ …

Read More »

ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಪಿ ಜಿ ಆರ್ ಸಿಂಧ್ಯಾ ಕಣ್ಣು…!!!!

ಬೆಳಗಾವಿ- ಅತೀ ಹೆಚ್ಚು ಮರಾಠಾ ಸಮುದಾಯದ ಮತದಾರರನ್ನು ಹೊಂದಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಮೇಲೆ ಜಿಡಿಎಸ್ ಮುಖಂಡ ಪಿ ಜಿ ಆರ್ ಸಿಂದ್ಯಾ ಅವರ ಕಣ್ಣು ಬಿದ್ದಿದೆ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡರೆ ಪಿ ಜಿ ಆರ್ ಸಿಂಧ್ಯಾ ಅವರಿಗಾಗಿ ಜೆ ಡಿ ಎಸ್ ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಬಿಟ್ಟು ಕೊಡುವಂತೆ ಪಟ್ಟು ಹಿಡಿಯಲಿದೆ ಎನ್ನುವ ಸುದ್ಧಿ ಈಗ ಜಿಲ್ಲೆಯಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ ಬೆಳಗಾವಿ …

Read More »

ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಭಜನೆ ಇಲ್ಲ- ಸಿಎಂ ಭರವಸೆ

ಬೆಳಗಾವಿ- ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವನ್ನು ಯಾವುದೇ ಕಾರಣಕ್ಕೂ ವಿಭಜಿಸುವದಿಲ್ಲ ಹಾಸನದಲ್ಲಿ ವಿಶ್ವ ವಿದ್ಯಾಲಯದ ಪ್ರಾದೇಶಿಕ ಕಚೇರಿಯನ್ನು ಮಾತ್ರ ಆರಂಭಿಸುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಶಾಸಕ ಅಭಯ ಪಾಟೀಲರಿಗೆ ಭರವಸೆ ನೀಡಿದ್ದಾರೆ ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯವನ್ನು ವಿಭಜನೆ ಮಾಡುವ ನಿರ್ಧಾರವನ್ನು ಕೈಬಿಡುವಂತೆ ಉತ್ತರ ಕರ್ನಾಟಕ ಭಾಗದ 50 ಜನ ಶಾಸಕರು ಸಹಿ ಮಾಡಿದ ಮನವಿ ಅರ್ಪಿಸಲು ಸಿ ಎಂ ಬಳಿ ಶಾಸಕ ಅಭಯ ಪಾಟೀಲ ಮತ್ತು …

Read More »

ಪ್ರೇಮಿಗಳ ದಿನವೇ ಎರಡನೇಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ವಿಧ್ಯಾರ್ಥಿ

ಬೆಳಗಾವಿ- ಪ್ರೇಮಿಗಳ ದಿನವೇ ಯುವಕನೊಬ್ಬ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಎರಡನೇಯ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಿಗ್ಗೆ 11-30 ಕ್ಕೆ ನಡೆದಿದೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಿವಿಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ನಿಪ್ಪಾಣಿಯ 18 ವರ್ಷದ. ಶಿವಪ್ರಸಾದ ಪವಾರ ಆತ್ಮಹತ್ಯೆ ಮಾಡುಕೊಂಡ ದುರ್ದೈವಿಯಾಗಿದ್ದಾನೆ ನಿಪ್ಪಾಣಿ ಮೂಲದ ಈ ಯುವಕ ಅನಾಥ ಅರ್ದ ದಿನ ವ್ಯಾಸಂಗ ಮಾಡಿ ಅರ್ದ ದಿನ ಧಾಭಾದಲ್ಲಿ ಕೆಲಸ ಮಾಡಿ ವ್ಯಾಸಂಗ ಮುಂದುವರೆಸಿದ್ದ ಇಂದು ಬೆಳಿಗ್ಗೆ …

Read More »

ನಾಳೆ ಹುಟ್ಟು ಹಬ್ಬ ಇಲ್ಲ, ಮತದಾನದ ದಿನವೇ ಲಕ್ಷ್ಮೀ ಹೆಬ್ಬಾಳಕರ ಜನ್ಮ ದಿನ

ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಜನ್ಮ ದಿನ ನಾಳೆ ಫೆಬ್ರುವರಿ 14 ಆದರೆ ಲಕ್ಷ್ಮೀ ಹೆಬ್ನಾಳಕರ ನಾಳೆ ಜನ್ಮ ದಿನ ಆಚರಿಸಿಕೊಳ್ಳುತ್ತಿಲ್ಲ ವಿಧಾಸಭೆ ಚುನಾವಣೆಯ ಮತದಾನದ ದಿನ ಮೇ 12 ರಂದು ಜನ್ಮ ದಿನ ಆಚರಿಸುವಂತೆ ಅಭಿಮಾನಿಗಳಲ್ಲಿ ಲಕ್ಷ್ಮೀ ಹೆಬ್ಬಾಳಕರ ಮನವಿ ಮಾಡಿಕೊಂಡಿದ್ದಾರೆ ಲಕ್ಷ್ಮೀ ಹೆಬ್ಬಾಳಕರ ವಿಧಾಸಭೆ ಚುನಾವಣೆಯಲ್ಲಿ ಗೆದ್ದು ಶಾಸಕಿಯಾದ ತಕ್ಷಣ ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನ ಇಂದು ನನಗೆ ರಾಜಕೀಯವಾಗಿ ಮರುಜನ್ಮ ನೀಡಿದ್ದಾರೆ …

Read More »

VTU ವಿಭಜನೆ ರಾಜಧಾನಿಯಲ್ಲಿ ಜನಪ್ರತಿನಿಧಿಗಳ ಆಕ್ರೋಶ …ಬೆಳಗಾವಿಯಲ್ಲೂ ಸಭೆ

ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವನ್ನು ವಿಭಜಿಸುವ ರಾಜ್ಯ ಸರಕಾರದ ಬಜೆಟ್ ಪ್ರಸ್ತಾವನೆಗೆ ಎಲ್ಲ ಕ್ಷೇತ್ರಗಳ ಪ್ರಮುಖರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು ಕಳೆದ ರವಿವಾರ ಸರ್ವ ಕನ್ನಡ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ವಿವಿಧ ರಂಗಗಳಿಂದ ಬೆಂಬಲ ವ್ಯಕ್ತವಾಗುತ್ತಿದೆ. ವಿಟಿಯು ಉಳಿಸಿಕೊಳ್ಳಲು ವಿವಿಧ ಕಡೆಗಳಿಂದ ಪ್ರಯತ್ನಗಳು ತೀವ್ರಗತಿಯಿಂದ ನಡೆಯುತ್ತಿವೆ. ಬೆಳಗಾವಿ ದಕ್ಷಿಣ ಮತಕ್ಷೇತ್ರದ ಬಿಜೆಪಿ ಶಾಸಕ ಅಭಯ ಪಾಟೀಲ,ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ,ಬೈಲಹೊಂಗಲದ ಕಾಂಗ್ರೆಸ್ ಶಾಸಕ ಮಹಾಂತೇಶ ಕೌಜಲಗಿ ಮುಂತಾದವರು ಬೆಂಗಳೂರಿನಲ್ಲಿ …

Read More »

ಬೆಳಗಾವಿ ಹೋರಾಟಗಾರರ ಆಕ್ರೋಶಕ್ಕೆ ಬೆದರಿ ಬೆಳಗಾವಿ ಪ್ರವಾಸ ರದ್ದು ಮಾಡಿದ ಜಿಟಿ ದೇವೇಗೌಡ

ಬೆಳಗಾವಿ – ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ವಿಭಜಿಸುವ ನಿರ್ಧಾರ ಕೈಗೊಂಡು ಬೆಳಗಾವಿಯಲ್ಲಿ ಪ್ರವಾಸ ಮಾಡಲಿದ್ದ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡ ಏಕಾಏಕಿ ಬೆಳಗಾವಿ ಪ್ರವಾಸವನ್ನು ಮೊಟಕು ಗೊಳಿಸಿದ್ದಾರೆ ಜಿಟಿ ದೇವೇಗೌಡ ಬೆಳಗಾವಿಗೆ ಬರ್ತಾರೆ ವಾಸ್ತವ್ಯ ಮಾಡ್ತಾರೆ ಅವರ ಕಾರಿನ ಮುಂದೆ ಮಲಗೋಣ ಅವರ ಕಾರಿಗೆ ಬೆಂಕಿ ಹಚ್ಚೋಣ ,ಅವರಿಗೆ ಕಪ್ಪು ಬಾವುಟ ತೋರಿಸೋಣ ಎಂದು ಲೆಕ್ಕ ಹಾಕಿ ಕನ್ನಡ ಸಂಘಟನೆಗಳ ನಾಯಕರಿಗೆ ನಿರಾಶೆ ಆಗಿದೆ

Read More »