Breaking News
Home / Breaking News (page 20)

Breaking News

ಬೆಂಗಳೂರಿನಲ್ಲಿ ಕಮಾಲ್ ….ಬೆಳಗಾವಿ ಪಾಲಿಕೆಯ ವಾರ್ಡುಗಳ ಮೀಸಲಾತಿ ಅದಲ್ ಬದಲ್ ….!!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ವಾರ್ಡುಗಳ ಮೀಸಲಾತಿಯಲ್ಲಿ ಅದಲು ಬದಲಾಗಿದ್ದು ಅಕ್ಷೇಪಣೆಗಳನ್ನು ಸಲ್ಲಿಸಿದ ಬಳಿಕ ಸರ್ಕಾರ ಈಗ ಪರಿಷ್ಕೃತ ಮೀಸಲಾತಿ ಗೆಜೆಟ್ ಪ್ರತಿ ಬಿಡುಗಡೆ ಮಾಡಿದೆ ಅಕ್ಷೇಪಣೆಗಳನ್ನು ಸಲ್ಲಿಸುವ ಮೊದಲು ಬಿಡುಗಡೆಯಾಗಿದ್ದ ಮೀಸಲಾತಿ ಪಟ್ಡಿಯನ್ನು ಆಧರಿಸಿ ಬಹಳಷ್ಟು ಜನ ಆಕಾಂಕ್ಷಿಗಳು ಹೊಸ ಬಟ್ಟೆ ಹೊಲಿಸಿಕೊಂಡು ತಮ್ಮ ತಮ್ಮ ವಾರ್ಡುಗಳಲ್ಲಿ ತಯಾರಿ ನಡೆಸಿದ್ದರು ಆದರೆ ಸರ್ಕಾರ ಬಿಡುಗಡೆ ಮಾಡಿರುವ ಪರಿಷ್ಕೃತ ಪಟ್ಟಿ ನೋಡಿದ ಆಕಾಂಕ್ಷಿಗಳಿಗೆ ಶಾಕ್ ಆಗಿದೆ ವಾರ್ಡುಗಳ ಮೀಸಲಾತಿಯಲ್ಲಿ ಹಲವಾರು …

Read More »

ಬೆಳಗಾವಿಯ ಭೂತರಾಮಟ್ಟಿ ಪಾರ್ಕ್ ನಲ್ಲಿ ಟೈಗರ್ ಸಫಾರಿಗೆ ಗ್ರೀನ್ ಸಿಗ್ನಲ್….

ಬೆಳಗಾವಿ- ಬೆಳಗಾವಿಯ ಭೂತರಾಮಟ್ಟಿಯಲ್ಲಿರುವ ಅರಣ್ಯ ಇಲಾಖೆಯ ಪಾರ್ಕ್ ನಲ್ಲಿ ಟೈಗರ್ ಸಫಾರಿ ಆರಂಭವಾಗುವದು ನಿಶ್ಚಿತವಾಗಿದೆ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಬೆಳಗಾವಿ ಮಹಾನಗರ ಪಾಲಿಕೆ ಭೂತರಾಮಟ್ಟಿಯ ಪಾರ್ಕ ಅಭಿವೃದ್ಧಿ ಪಡಿಸಿ ಅಲ್ಲಿ ಡೈಗರ್ ಸಫಾರಿ ಆರಂಭಿಸಲು ಪಾಲಿಕೆ ನಿರ್ಧರಿಸಿದೆ ಭೂತರಾಮಟ್ಟಿಯ ಪ್ರಾಣಿ ಸಂಗ್ರಹಾಲಯ ದ ಅಭಿವೃದ್ಧಿಗಾಗಿ ಮೂರನೇ ಕಂತಿನ 100 ಕೋಟಿ ಅನುದಾನದಲ್ಲಿ ಎರಡು ಕೋಟಿ ರೂ ಅನುದಾನ ಮೀಸಲಿಟ್ಟಿದ್ದು ಈ ಅನುದಾನ ಟೈಗರ್ ಸಫಾರಿ …

Read More »

ಸಂವಿಧಾನ ಸುಟ್ಟವರಿಗೆ ಪಾಠ ಕಲಿಸಲು ದಲಿತ ಬ್ರಿಗೇಡ್ ಆಗ್ರಹ

ಬೆಳಗಾವಿ ದೆಹಲಿಯಲ್ಲಿ ಇತ್ತೀಚೆಗೆ ಜಂತರಮಂತರ್ ಮೈದಾನದಲ್ಲಿ ದೇಶ ದ್ರೋಹಿಗಳು ಪವಿತ್ರವಾದ ಮೀಸಲಾತಿ ಹಾಗೂ ಎಸ್ಸಿ,ಎಸ್ಟಿ ಕಾಯ್ದೆಯನ್ನು‌ ವಿರೋಧಿಸಿ ಸಂವಿಧಾನವನ್ನು ಸುಟ್ಟವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ‌ ಸೋಮವಾರ ದಲಿತ ಯುವ ಬ್ರಿಗೇಡ್ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪ್ರಪಂಚದ ಯಾವ ರಾಷ್ಟ್ರದಲ್ಲೂ ಇರದ ಮೀಸಲಾತಿ ಭಾರಯದಲ್ಲಿ ಏಕೆ ಎಂದು ವಾದ ಮಾಡುವ ಮತ್ತು ಆರ್ಥಿಕ ಆಧಾರದ ಮೇಲೆ ಮೀಸಲಾತಿ ಕೊಡಬೇಕು ಎನ್ನುವ ಬಂಡವಾಳಶಾಯಿ ಭಂಡರಿಗೆ ಸಂವಿಧಾನದ …

Read More »

ಪ್ಲಾಸ್ಟಿಕ್ ಧ್ವಜ ಬಳಕೆ ಸಂಪೂರ್ಣವಾಗಿ ನಿಷೇಧಿಸಿ

ಬೆಳಗಾವಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯ ದಿನಾಚಾರಣೆಯಲ್ಲಿ ತ್ರಿವರ್ಣ ಧ್ವಜಕ್ಕೆ ಅವಮಾನವಾಗುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ‌ ಸೋಮವಾರ ಹಿಂದು ಜನಜಾಗೃತಿ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಸ್ವಾತಂತ್ರ್ಯ ದಿನಾಚಾರಣೆಯಲ್ಲಿ ಸ್ವಾಭಿಮಾನದಿಂದ ದೇಶಾಭಿಮಾನದ ಹಾಡುಗಳನ್ನು ಹಾಡುತ್ತೇವೆ. ಆದರೆ ಧ್ವಜಾರೋಹಣವಾದ ಕೆಲವೇ ಗಂಟೆಗಳಲ್ಲಿ ಅದು ಕಸದ ತೊಟ್ಟಿ, ಜನರ ಕಾಲ್ತುಳಿತಕ್ಕೆ ಸಿಲುಕಿ ಅವಮಾನ ಮಾಡುತ್ತಿರುವುದು ಈ‌ ಹಿಂದೆ ಕಂಡು ಬಂದಿದೆ. ನಮ್ಮ ರಾಷ್ಟ್ರ ಧ್ವಜದ ಪ್ರತಿಷ್ಠೆಯನ್ನು ಎತ್ತರಕ್ಕೆ ಏರಿಸಲು ಮಹಾಪುರುಷರು ತಮ್ಮ …

Read More »

ಬೆಂಗಳೂರಿನಲ್ಲಿ15 ಕೋಟಿ ರೂ ಟೋಪಿ….ಬೆಳಗಾವಿಯಲ್ಲಿ ಅರೆಸ್ಟ್…

ಬೆಳಗಾವಿ-ಬೆಂಗಳೂರಿನಲ್ಲಿ ಸುಮಾರು‌ ೧೫ ಕೋಟಿ‌ರೂ.ವಂಚನೆ ಮಾಡಿದ ಆರೋಪ ಹೊತ್ತ ವ್ಯಕ್ತಿ ಶಿವಪ್ರಸಾದ ಎಂಬಾತನನ್ನು ಬೆಂಗಳೂರು ಪೋಲೀಸರು ಬೆಳಗಾವಿಯಲ್ಲಿ ಬಂಧಿಸಿದ್ದಾರೆ ಜಾಧವ ನಗರದ ಅಪಾರ್ಟಮೆಂಟನಲ್ಲಿ ಅಡಿಗಿದ್ದ ಆರೋಪಿ ಶಿವಪ್ರಸಾದನನ್ನು ಸುಮಾರು ೧೨ ತಾಸು ಕಾಯ್ದು ಬಂಧಿಸಿದ ಬೆಂಗಳೂರು ಪೊಲೀಸ್. ಬೆಂಗಳೂರಿನಲ್ಲಿ ಸುಮಾರು ಹದಿನೈದು ಕೋಟಿ ರೂ ವಂಚನೆ ಮಾಡಿದ್ದ ಶಿವಪ್ರಸಾದ ಬೆಳಗಾವಿಯ ಜಾಧವ ನಗರದಲ್ಲಿರುವ ಪ್ರಸಿತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿದ್ದ ಆರೋಪಿ ಶಿವಪ್ರಸಾದ ಪತ್ತೆಗೆ ಜಾಲಬೀಸಿ ಬೆಳಗಾವಿಗೆ ಆಗಮಿಸಿದ ಬೆಂಗಳೂರು …

Read More »

ಬೆಳಗಾವಿಯಲ್ಲಿ ಸಾವಿತ್ರಿಬಾಯಿ ಪುಲೆ ..ಚಿತ್ರದ ಅಲೆ ..ಪ್ರತಿಯೊಬ್ಬರೂ ನೋಡಲೇ ಬೇಕು ಈ ಚಿತ್ರದಲ್ಲಿರುವ ಕಲೆ…,!!!!

ಬೆಳಗಾವಿ: ಚಲನಚಿತ್ರಗಳು ಸಮಾಜಕ್ಕೆ ದಿಕ್ಸೂಚಿ ಇದ್ದಂತೆ, ಮಾರ್ಗದರ್ಶಿ ಸೂತ್ರದೊಂದಿಗೆ ಸಮಾಹಕ್ಕೆ ಸಂದೇಶ ನೀಡಬೇಕು. ಈ ನಿಟ್ಟಿನಲ್ಲಿ ತುಳಿತಕ್ಕೊಳಗಾದ ವರ್ಗವನ್ನು ಮೇಲೆತ್ತುವ ಸಾವಿತ್ರಿಬಾಯಿ ಫುಲೆ ಅವರ ಸಾಧನೆ ಮೇಲೆ ಬೆಳಕು ಚೆಲ್ಲಿರುವುದು ಶ್ಲಾಘನೀಯ ಕಾರ್ಯ ಎಂದು ಕಾರಂಜಿಮಠದ ಗುರುಸಿದ್ದ ಸ್ವಾಮೀಜಿ ಹೇಳಿದರು. ನಗರದ ನಿರ್ಮಲಾ ಚಿತ್ರಮಂದಿರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಅವರ ಕೃತಿ ಆಧಾರಿತ ‘ಸಾವಿತ್ರಿಬಾಯಿ ಫುಲೆ’ ಚಲನಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು. ಚಲನಚಿತ್ರಗಳು ಪ್ರಸ್ತುತ …

Read More »

ಸತೀಶ ಸಚಿವನಾದರೂ ಆದರೂ ಅಷ್ಟೇ, ನಾನಾದರೂ ಅಷ್ಟೇ- ರಮೇಶ ಜಾರಕಿಹೊಳಿ

ಬೆಳಗಾವಿ – ಹಲವಾರು ವರ್ಷಗಳ ನಂತರ ಅವಧಿಗೂ ಮುನ್ನ ಬೆಳಗಾವಿ ಜಿಲ್ಲೆಯ ಹಿಡಕಲ್ ಜಲಾಶಯ ಭರ್ತಿಯಾಗಿದ್ದು ಜಿಲ್ಲಾ ಉಸ್ತೂವಾರಿ ಮತ್ತು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಇಂದು ಜಲಾಶಯಕ್ಕೆ ಬಾಗಿನ ಅರ್ಪಿಸಿದರು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂ, ಭರ್ತಿಯಾಗಿ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಲು ಜಲಾಶಯದ ಎಲ್ಲ ಗೇಟ್ ಗಳನ್ನು ತೆರವು ಮಾಡಲಾಗಿದೆ 51 ಟಿಎಂಸಿ ಸಾಮರ್ಥ್ಯದ ಡ್ಯಾಂ ಪೂರ್ಣ ಭರ್ತಿಯಾದ ಹಿನ್ನೆಲೆ ಬಾಗಿನ ಅರ್ಪಣೆ …

Read More »

ರಸ್ತೆ ರಿಪೇರಿಗಾಗಿ ರಾಡಿಯಲ್ಲಿ ಉರುಳಾಡಿದ ಕ್ರಾಂತಿ ನೆಲದ ಜನ …!!!!

ಬೆಳಗಾವಿ- ಗ್ರಾಮಗಳ ಸುಧಾರಣೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪ್ರತಿವರ್ಷ ಸಾವಿರಾರು ಕೋಟಿ ರೂ ಗಳನ್ನು ಖರ್ಚು ಮಾಡುತ್ತದೆ ಆದರೆ ಹಳ್ಳಿಗಳ ರಸ್ತೆಗಳು ಮಾತ್ರ ಸುಧಾರಣೆ ಆಗುತ್ತಿಲ್ಲ ಹಳ್ಳಿಯ ಜನ ನಮ್ಮೂರಿನ ರಸ್ತೆ ರಿಪೇರಿ ಮಾಡ್ರಪ್ಪೋ ಎಂದು ಬಾಯಿ ಬಡಿದುಕೊಳ್ಳುವ ಪರಿಸ್ಥಿತಿ ದೂರಾಗದೇ ಇರುವದು ದುರ್ದೈವ ಇದು ವೀರ ರಾಣಿ ಕಿತ್ತೂರ ಚನ್ನಮ್ಮಾಜಿಯ ಕ್ಷೇತ್ರ ನಮ್ಮ ಸರ್ಕಾರಗಳು ಈ ವೀರ ವನಿತೆಯ ಕ್ಷೇತ್ರಕ್ಕೆ ಎಷ್ಟು ಗೌರವ ಕೊಟ್ಟಿವೆ ನೋಡಿ ದೇಶ …

Read More »

ಬೆಳಗಾವಿ ಪತ್ರಕರ್ತರಿಗೆ ನಿವೇಶನ, ಶಾಸಕ ಅನೀಲ ಬೆನಕೆ ಭರವಸೆ

ಬೆಳಗಾವಿ- ಬೆಳಗಾವಿಯಲ್ಲಿ ಪತ್ರಿಕಾ ದಿನಾಚರಣೆ ನಡೆಯಿತು ಕಾರ್ಯಕ್ರಮವನ್ನು ನಾಗನೂರ ಮಠದ ಸಿದ್ದರಾಮ ಸ್ವಾಮಿಗಳು ಉದ್ಘಾಟಿಸಿ ಮಾತನಾಡಿದರು ಸಮಾಜ ಸೇವೆಗೆ ಸಾಕಷ್ಟು ಕ್ಷೇತ್ರಗಳಿವೆ. ಅದರಲ್ಲಿ ಪತ್ರಕರ್ತ ವೃತ್ತಿ ಉತ್ತಮ ಕ್ಷೇತ್ರವಾಗಿದೆ. ಪತ್ರಕರ್ತರ ಸಂಘ ಉತ್ತಮವಾಗಿ ಕೆಲಸ ಮಾಡ್ತಿದೆ. ಸಮಾಜದ ಸ್ವಾಸ್ಥ್ಯ ಕಾಪಾಡುವ, ಪ್ರಜಾಪ್ರಭುತ್ವ ಕಾಪಾಡುವ ನಿಟ್ಟಿನಲ್ಲಿ ಪತ್ರಕರ್ತರ ಕೆಲಸ ಮಹತ್ವವಾಗಿದೆ. ವರದಿಗಾರರು ಸಾಕಷ್ಟು ಸವಾಲು, ಗಂಡಾಂತರ ಎದುರಿಸುತ್ತಾರೆ. ಸರಕಾರ ಗಮನಿಸಬೇಕು. ಅವರನ್ನು ಗೌರವಿಸಬೇಕು. ಸತ್ಯ ಕಹಿ. ಹಾಗಾಗಿ ಪತ್ರಿಕೆಯ ಸತ್ಯ ವಿಷಯಗಳು …

Read More »

ದೋಸಾ ತಿನ್ನಲು ಹೋಗಿ ಎಂಟು ಲಕ್ಷ ಲಾಸು…ದೂರು ಕೊಟ್ಟ ಬಾಸು…!!!

ಬೆಳಗಾವಿ- ಮಹಾಲಿಂಗಪೂರದ ಚಿನ್ನದ ವ್ಯಾಪಾರಿಯೊಬ್ಬ ಚಿನ್ನ ಖರೀದಿಸಲು ಬೆಳಗಾವಿಗೆ ಬಂದಾಗ ಕಾರು ನಿಲ್ಲಿಸಿ ದೋಸಾ ತನ್ನಲು ಹೊಟೇಲ್ ಗೆ ಹೋದಾಗ ಕಾರಿನ ಗಾಜು ಒಡೆದು ಆರುವರೆ ಲಕ್ಷ ನಗದು ಒಂದುವರೆ ಲಕ್ಷ ಮೌಲ್ಯದ ಚಿನ್ನ ದೋಚಿದ ಘಟನೆ ಬೆಳಗಾವಿಯ ವಡಗಾಂವ ಪ್ರದೇಶದಲ್ಲಿ ನಡೆದಿದೆ ಮಹಾಲಿಂಗಪೂರದ ಚಿನ್ನದ ವ್ಯಾಪಾರಿ ಮಲ್ಲಪ್ಪ ಸಂಗಪ್ಪ ಸೋನಾರ್ ಎಂದಿನಂತೆ ಚಿನ್ನ ಖರೀಧಿ ಮಾಡಲು ಬೆಳಗಾವಿಗೆ ಬಂದಿದ್ದರು ವಡಗಾವಿಯ ಯಳ್ಳೂರ ರಸ್ತೆಯಲ್ಲಿರುವ ದಿವೇಶ್ವರ ಮಂದಿರದ ಬಳಿ ಕಾರು …

Read More »