Home / Uncategorized / ಕ್ಷೇತ್ರದಲ್ಲಿ ಮಹಾಮಾರಿ, ಶಾಸಕಿ ಅಂಜಲಿ ಬೈಕ್ ಸವಾರಿ….!!!!

ಕ್ಷೇತ್ರದಲ್ಲಿ ಮಹಾಮಾರಿ, ಶಾಸಕಿ ಅಂಜಲಿ ಬೈಕ್ ಸವಾರಿ….!!!!

ಬೆಳಗಾವಿ-ಖಾನಾಪೂರ ತಾಲ್ಲೂಕಿನಲ್ಲಿ ಕೊರೋನಾ ಮಹಾಮಾರಿ ಎಂಟ್ರಿ ಕೊಟ್ಟ ಬಳಿಕ ಕ್ಷೇತ್ರದಲ್ಲಿ ಪಾದಯಾತ್ರೆ ಮೂಲಕ ಸಂಚರಿಸಿ ಜನಜಾಗೃತಿ ಮೂಡಿಸಿ ಎಲ್ಲರ ಗಮನ ಸೆಳೆದಿದ್ದ ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಇವತ್ತು ಕ್ಷೇತ್ರದಲ್ಲಿ ಬೈಕ್ ಸವಾರಿ ಮಾಡುವ ಮೂಲಕ ಎಲ್ಲರ ಗಮನಸೆಳೆದರು.

ಕಳೆದ ಒಂದು ತಿಂಗಳಿನಿಂದ ಕ್ಷೇತ್ರದಲ್ಲಿ ನಿರಂತರವಾಗಿ ಸಂಚರಿಸುತ್ತಿರುವ ಶಾಸಕಿ ಡಾ.ಅಂಜಲಿ ನಿಂಬಾಳ್ಕರ್ ಇವತ್ತು,ಬೈಕ್ ಹತ್ತಿ ಕ್ಷೇತ್ರದ ವಿವಿಧ ಹಳ್ಳಿಗಳಿಗೆ ರೌಂಡ್ಸ್ ಹಾಕಿದ್ರು,ಜನರ ಯೋಗಕ್ಷೇಮ ವಿಚಾರಿಸುವ ಜೊತೆಗೆ ಕೋವೀಡ್ ಸ್ಥಿತಿಗತಿಗಳ ಕುರಿತು ಕ್ಷೇತ್ರದ ಜನರಿಂದ ಮಾಹಿತಿ ಪಡೆದರು.

ಈ ಸಂಧರ್ಭದಲ್ಲಿ ಮಾತನಾಡಿದ ಅವರು ಸಾರ್ವಜನಿಕರು ಕೊರೋನಾ ಬಗ್ಗೆ ಜಾಗೃತಿ ವಹಿಸಬೇಕು,ಕೋವೀಡ್ ಲಕ್ಷಣಗಳು ಕಂಡು ಬಂದ ಕೂಡಲೇ ಚಿಕಿತ್ಸೆ ಪಡೆಯಬೇಕು,ಲಾಕ್ಡೌನ್ ಅವಧಿಯಲ್ಲಿ ವಿನಾಕಾರಣ ಸುತ್ತಾಡದೇ ಮನೆಯಲ್ಲಿ ಸೇಫಾಗಿ ಇರಬೇಕೆಂದು ಮನವಿ ಮಾಡಿಕೊಂಡರು.

ಕಳೆದ ವಾರ ನಂದಗಡ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅಗತ್ಯಬಿದ್ದರೆ ನಾನೂ ಕೋವೀಡ್ ವಾರ್ಡಿನಲ್ಲಿ ಸೇವೆ ನೀಡಲು ಸಿದ್ಧ ಎಂದು ಸಂದೇಶ ಕಳುಹಿಸಿದ್ದನ್ನು ನಾವಿಲ್ಲಿ ಸ್ಮರಿಸಬಹುದು.

Check Also

ಬೆಳಗಾವಿಯಲ್ಲಿ ಖಡಕ್ ಕರ್ಫ್ಯು,ಮನೆ ಬಿಟ್ಟು ಹೊರಗೆ ಬಂದ್ರೆ ,ಲಾಠಿ ಮಸ್ಯಾಜ್ ಗ್ಯಾರಂಟಿ…!!!

ಬೆಳಗಾವಿ-ಇವತ್ತು ಬೆಳಗಿನ ಜಾವದಿಂದಲೇ ಬೆಳಗಾವಿ ಸ್ತಬ್ಧವಾಗಿದೆ.ಬೆಳಗಾವಿ ಬಸ್ ನಿಲ್ಧಾಣ ನಿಶ್ಯಬ್ದ ವಾಗಿದ್ದರೆ,ಬೆಳಗಾವಿಯ ಬಿದಿಗಳು ಬಿಕೋ ಎನ್ನುತ್ತಿವೆ.ಕಿರಾಣಿ,ಹಾಲು,ಅಂಗಡಿಗಳು ಬಾಗಿಲು ತೆರದರೂ ಬೆಳ್ಳಂ …

Leave a Reply

Your email address will not be published. Required fields are marked *