Breaking News
Home / Breaking News / ಜವಾಬ್ದಾರಿ ಮರೆತ ಮರಾಠಾ ಮಂಡಳ ಕಾಲೇಜಿನ ಆಡಳಿತ ಮಂಡಳಿ

ಜವಾಬ್ದಾರಿ ಮರೆತ ಮರಾಠಾ ಮಂಡಳ ಕಾಲೇಜಿನ ಆಡಳಿತ ಮಂಡಳಿ

ಬೆಳಗಾವಿ- ಬೆಳಗಾವಿಯ ಕಾಕತಿ ಪ್ರದೇಶದಲ್ಲಿರುವ ಮರಾಠಾ ಮಂಡಳ ಇಂಜನೀಯರಿಂಗ್ ಕಾಲೇಜಿನ ಎಂಟು ಜನ ವಿದ್ಯಾರ್ಥಿಗಳು ಸಾವನ್ನಪ್ಪಿದರೂ ಕಾಲೇಜಿನ ಆಡಳಿತ ಮಂಡಳಿಗಿ ಕಿಂಚತ್ತು ಕಾಳಜಿ ಇಲ್ಲ ನಮ್ಮ ಮಗ ಏಲ್ಲಿ ನಮ್ಮ ಮಗಳು ಏಲ್ಲಿ ಅಂತ ಕೇಳಿಕೊಂಡು ಕಾಲೇಜಿಗೆ ಪಾಲಕರು ಬರುತ್ತಿದ್ದು ಉತ್ತರ ಹೇಳಲು ಕಾಲೇಜಿನಲ್ಲಿ ಯಾರೂ ಇಲ್ಲವೇ ಇಲ್ಲ

ಇಷ್ಟೊಂದು ದೊಡ್ಡ ದುರಂತ ಸಂಭವಿಸಿದೆ ಎಂಟು ಜನ ವಿದ್ಯಾರ್ಥಿಗಳು ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ ಮೂವರು ವಿದ್ಯಾರ್ಥಿಗಳ ಪರಿಸ್ಥಿತಿ ಚಿಂತಾಜನಕವಾಗಿದೆ ಇಂತಹ ಪರಿಸ್ಥಿತಿಯಲ್ಲಿ ನೊಂದವರ ಸಹಾಯಕ್ಕೆ ಕಾಲೇಜಿನ ಆಡಳಿತ ಮಂಡಳಿ ಧಾವಿಸುತ್ತಿಲ್ಲ ನೊಂದವರ ಪ್ರಶ್ನೆಗಳಿಗೆ ಉತ್ತರ ನೀಡುತ್ತಿಲ್ಲ

ಕಾಕತಿ ಗ್ರಾಮದ ನೀತಿನ್ ಮಾಲವನ್ ದುರಂತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ ಆತನ ತಂದೆ ಇಂಡಾಲ ಕಾರ್ಖಾನೆಯ ಕಾರ್ಮಿಕ ಕಾಕತಿ ಗ್ರಾಮದ ನಿವಾಸಿ ನೀತಿನ್ ತಂದೆ ಡ್ಯುಟಿ ಮುಗಿಸಿ ಮನೆಯಲ್ಲಿ ಮಲಗಿಕೊಂಡಿದ್ದ ಮದ್ಯಾಹ್ನ ಒಂದು ಘಂಟೆಗೆ ಪಕ್ಕದ ಮನೆಯವರು ಮರಾಠಿ TV ನೋಡಿ ನಿಮ್ಮ ಮಗ ಮಾಲವನ್ ಬೀಚ್ ನಲ್ಲಿ ಮುಳಗಿ ಸತ್ತಿದ್ದಾನೆ ಅಂತ ಸುದ್ಧಿ ಮುಟ್ಟಿಸಿದ್ದಾರೆ ಈ ಸುದ್ಧಿ ಕೇಳಿ ಮರಾಠಾ ಮಂಡಳ ಕಾಲೇಜಿಗೆ ಓಡೋಡಿ ಬಂದ ಈತನಿಗೆ ಮಾಹಿತಿ ಕೊಡುವವರು ಕಾಲೇಜಿನಲ್ಲಿ ಯಾರೊಬ್ಬರು ಇರಲಿಲ್ಲ

ಮಧ್ಯಮ ಪ್ರತಿನಿಧಿಗಳು ಸುದ್ಧಿ ತಿಳಿದು ಕಾಲೇಜಿಗೆ ಧಾವಿಸಿದ್ದರು ನೀತೀನ್ ತಂದೆ ಕಾಲೇಜ ಆವರಣದ ಗೇಟ್ ಜಿಗಿದು ಒಳಗೆ ಬಂದ ಇಲ್ಲ ನನ್ನ ಮಗ study tour ,,ಅಂತಾ ಪೂನಾಗೆ ಹೋಗಿದ್ದ ಪಕ್ಕದ ಮನೆಯವರು TV ನೋಡಿ ನಿಮ್ಮ ಮಗ ಮಾಲವನ್ ಬೀಚ್ ನಲ್ಲಿ ಸತ್ತಿದ್ದಾನೆ ಅಂತ ಹೇಳ್ತೀದ್ದಾರೆ ಆದ್ರೆ ನನ್ನ ಮಗ ಮಾಲವನ್ ಗೆ ಹೋಗಿಲ್ಲ ನನ್ನ ಮಗ ಹೋಗಿದ್ದು ಪೂನಾಗೆ ಸ್ಟಡಿ ಟೂರ್ ಮೇಲೆ ಹೋಗಿದ್ದಾನೆ ಅಂತ ನೀತಿನ್ ತಂದೆ ಹೇಳಿಕೊಳ್ಳುತ್ತಿದ್ದ ಆದರೆ ಇತನಿಗೆ ಸಮಾಧಾನ ಹೇಳುವವರು ಇಲ್ಲಿ ಯಾರೊಬ್ಬರೂ ಇರಲಿಲ್ಲ ನನ್ನ ಮಗ ಎಲ್ಲಿ ಅಂತ ಆತ ಕಾಲೇಜಿಗೆ ಧಾವಿಸಿದ್ದ

ಆದರೆ ಮರಾಠಾ ಮಂಡಳದ ಜಯಶ್ರೀ ಹಲಗೇಕರ್ ಮೇಡಂ ಅವರಿಗೆ ಕಾಲೇಜಿಗೆ ಹೋಗಲು ಸಮಯ ಇರಲಿಲ್ಲ ಹೀಗಾಗಿ ಅವರು ಹೆಡ್ ಹಾಫೀಸ್ ನಲ್ಲಿ ಇದ್ದುಕೊಂಡು ಕಚೇರಿಯ ಎದುರು ಮೃತಪಟ್ಟವರ ಪೋಟೋ ಹಾಕಿಕೊಂಡು ಕುಳಿತುಕೊಂಡಿದ್ದರು

Check Also

ಸಂಜಯ ಪಾಟೀಲ ವಿರುದ್ಧ ದೂರು ದಾಖಲು…

ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ; ಸಂಜಯ್ ಪಾಟೀಲ್ ವಿರುದ್ಧ ಪ್ರಕರಣ ದಾಖಲು ಬೆಳಗಾವಿ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ …

Leave a Reply

Your email address will not be published. Required fields are marked *