ಗೋವಾದಲ್ಲಿ ಕನ್ನಡಿಗರ ಮೇಲೆ ಹಲ್ಲೆ,ಬೆಳಗಾವಿಯಲ್ಲಿ ಆಕ್ರೋಶ

ಬೆಳಗಾವಿ: ಗೋವಾ ರಾಜ್ಯದ ಟಸ್ಕ್ ಉಸಗಾಂವ್  ಮತ್ತು ಪೊಂಡಾದಲ್ಲಿ ಕನ್ನಡಿಗ ಕುಟುಂಬಗಳ ಮೇಲೆ ನಡೆದ ದಾಳಿ ನಡೆಸಿ ಮನೆ ವಾಹನ ಸುಟ್ಟ ಪ್ರಕರಣ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಸದಸ್ಯರು ದೀಪಕ ಗುಡಗನಟ್ಟಿ ನೇತ್ರತ್ವದಲ್ಲಿ ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಗೋವಾ ವಿರುದ್ದ ಪ್ರತಿಭಟನೆ ನಡೆಸಿದರು.

ಪೊಂಡಾ ನಗರ ಪ್ರದೇಶದಲ್ಲಿ ಸುಮಾರು ೫೦ ವರ್ಷಗಳಿಂದ ೫೦೦ ಕ್ಕಿಂತ ಹೆಚ್ಚು ಕುಟುಂಬಗಳು ನೆಲೆಸಿದ್ದು ಅವರ ಚಿಕ್ಕಪುಟ್ಟ ವ್ಯವಹಾರ ವ್ಯಾಪಾರ ಮಾಡಿಕೊಂಡು ಸೌಹಾರ್ಧತೆಯ ಜೀವನ ನಡೆಸುತ್ತಿದ್ದಾರೆ. ಆದರೆ ಅಲ್ಲಿನ ಗೋವಾ ಜನ ಕನ್ನಡಿಗ ವಾಹನ ಚಾಲಕನ ಮೇಲೆ ಹಲ್ಲೆ ನಡೆಸಿ ಪ್ರಶ್ನಿಸಿದ ಪಾಲಕರು ಹಿರಿಯರ ಮೇಲೆ ಹಲ್ಲೆ ಮಾಡಿ ಆಸ್ತಿ ಪಾಸ್ತಿ ಸುಟ್ಟು ಹಾಕಿದ್ದಾರೆ. ಅವರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. ಕನ್ನಡಿಗರು ಘಾಟಿ ಜನ ಎಂದು ಮೂದಲಿಸಲಾಗುತ್ತಿದೆ.  ಆದರೆ ಅಲ್ಲಿನ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದೇ ಹಲ್ಲೆಗೊಳಗಾದ ಕನ್ನಡಿಗರ ಮೇಲೆ ಗೂಂಡಾ ಕಾಯ್ದೆ ಹೇರಲು ಪ್ರಯತ್ನಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವಾ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದ್ದಾರೆ.
ಪ್ರತಿಭಟನೆಯಲ್ಲಿ ಮುಖಂಡ ದೀಪಕ ಗುಡಗನಟ್ಟಿ ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *