Breaking News

LOCAL NEWS

ಕೊನೆಗೂ ಕಿತ್ತೂರು ಉತ್ಸವದ ಗೌರವಕ್ಕೆ ಕೇಂದ್ರದ ಸ್ಪಂದನೆ

ಬೆಳಗಾವಿ: ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮಾ ಜೀ ಅವರ 200ನೇ ವರ್ಷದ ಈ ಐತಿಹಾಸಿಕ ವಿಜಯದ ಜ್ಞಾಪಕಾರ್ಥವಾಗಿ ಇದೇ ಅಕ್ಟೋಬರ್ 23ಕ್ಕೆ ರಂದು ರಾಣಿ ಚೆನ್ನಮ್ಮನ ಅಂಚೆ ಚೀಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಮೋದಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬ್ರಿಟಿಷರ ವಿರುದ್ಧ ಸಾರಿದ ಸಂಗ್ರಾಮದ ವಿಜಯಕ್ಕೆ ಇದೇ ಅಕ್ಟೋಬರ್ 23ರಂದು 200 ವರ್ಷ ಸಂದಲಿದೆ. ಈ ಐತಿಹಾಸಿಕ ವಿಜಯದ …

Read More »

ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ವರ್ಗಾವಣೆ

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ಶುಭ ನಿಯೋಜನೆ ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಮೈಸೂರು ನಗರಾಭಿವೃದ್ಧಿ ಕೋಶ ನಿರ್ದೇಶಕರಾಗಿದ್ದ ಶುಭ ಅವರನ್ನು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರನ್ನಾಗಿ ನೇಮಿಸಲಾಗಿದೆ.ಪಾಲಿಕೆ ಆಯುಕ್ತರಾಗಿ ಅಶೋಕ ದುಡಗುಂಟಿ ಅವರು ಮಹಾನಗರದ ಸ್ವಚ್ಛತೆ ವಿಚಾರದಲ್ಲಿ ಅತ್ಯಂತ ಆಸಕ್ತಿವಹಿಸಿ ಕಾರ್ಯನಿರ್ವಹಿಸಿದ್ದರು. ಕನ್ನಡ ನಾಮಫಲಕ ಕಡ್ಡಾಯದ ವಿಚಾರದಲ್ಲೂ ಸರ್ಕಾರದ ಆದೇಶವನ್ನು ಅನುಷ್ಠಾನ ಮಾಡುವದರಲ್ಲಿ …

Read More »

ನಮ್ಮೂರಲ್ಲಿ ಹಂಗೇನಿಲ್ಲ,ರಸ್ತೆಯ ಮೇಲೆ ಗಿಡ ಹಚ್ತಾರೇ….!!!

ಬೆಳಗಾವಿ-ಬೆಳಗಾವಿಯಲ್ಲಿ ನಡು ರಸ್ತೆಯಲ್ಲೇ ತೆಂಗಿನಮರ,ಬಾಳೆಗಿಡ ನೆಟ್ಟು ದಿಢೀರ್ ಪ್ರತಿಭಟನೆ ನಡೆಸುವ ಮೂಲಕ ಗ್ರಾಮಸ್ಥರು ತಮ್ಮ ಆಕ್ರೋಶವನ್ಬು ಹೊರಹಾಕಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಹಿಂಡಲಗಾ ಗಣೇಶ ದೇವಸ್ಥಾನದ ಬಳಿಯ ರಸ್ತೆಯಲ್ಲಿ ರಸ್ತೆಯ ಗುಂಡಿಗಳಲ್ಲಿ ಗಿಡ ನೆಟ್ಟು ಪ್ರತಿಭಟನೆ ನಡೆಸಲಾಗಿದೆ.ಗುಂಡಿಬಿದ್ದ ನಡು ರಸ್ತೆಯಲ್ಲಿಯೇ ಗಿಡನೆಟ್ಟು ಜಿಲ್ಲಾಡಳಿತ,ಮಹಾನಗರ ಪಾಲಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಗಿದೆ. ರಸ್ತೆ ದುರಸ್ಥಿ ಮಾಡುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದ ಹಿಂಡಲಗಾ ಗ್ರಾಮದ ನಿವಾಸಿಗಳು,ರಸ್ತೆ ದುರಸ್ತಿ ಮಾಡದಿರುವುದಕ್ಕೆ ದಿಢೀರ್ ರಸ್ತೆ …

Read More »

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ ಚನ್ನಮ್ಮನ ವಿಜಯೋತ್ಸವದ 200 ವರ್ಷಾಚರಣೆ ಹಿನ್ನೆಲೆಯಲ್ಲಿ ಇದೇ ಪ್ರಥಮ‌ ಬಾರಿಗೆ ಬೆಳಗಾವಿ ನಗರದಲ್ಲೂ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮಗಳನ್ನು‌ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ. ರಾಷ್ಟ್ರೀಯ ಖ್ಯಾತಿಯ ಗಾಯಕರಾದ ಕುನಾಲ್ ಗಾಂಜಾವಾಲಾ ಅವರು ಕಿತ್ತೂರು ಉತ್ಸವದ ಹಿಂದಿನ ದಿನವಾದ ಅ.22 ರಂದು ಸಂಜೆ 4 ಗಂಟೆಗೆ …

Read More »

ಬ್ರಿಟಿಷ್ ಕಲೆಕ್ಟರ್ ಥ್ಯಾಖ್ರೆ ಸಮಾಧಿ ಎಲ್ಲಿದೆ ಗೊತ್ತಾ…??

ಬೆಳಗಾವಿ- ಸ್ವಾತಂತ್ರ್ಯ ಹೋರಾಟದ ಬೆಳ್ಳಿಚುಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮಾಜಿ ನಿಮಗೇಕೆ ಕೊಡಬೇಕು ಕಪ್ಪಾ ಎಂದು ಬ್ರಿಟಿಷರ ವಿರುದ್ಧ 1824 ರಲ್ಲಿ ಸಮರ ಸಾರಿ ಬ್ರಿಟಿಷ್ ಕಲೆಕ್ಟರ್ ಥ್ಯಾಖ್ರೆಯ ರುಂಡ ಚೆಂಡಾಡಿ 200 ವರ್ಷ ಕಳೆದಿವೆ ಆದ್ರೆ ಬ್ರಿಟಿಷ್ ಕಲೆಕ್ಟರ್ ಆಗಿದ್ದ ಥ್ಯಾಖ್ರೆಯ ಸಮಾಧಿ ಇರೋದು ಎಲ್ಲಿ ಅನ್ನೋದು ವಿಶೇಷ ಈತನ ಸಮಾಧಿ ಇರುವದು ಪಕ್ಕದ ಧಾರವಾಡದಲ್ಲಿ ಬ್ರಿಟಿಷ್ ಕಲೆಕ್ಟರ್ ಆಗಿದೆ ಸೆಂಟ್ ಜಾನ್ ಥ್ಯಾಖ್ರೆಯ ಸಮಾಧಿ ಧಾರವಾಡದ ಎಪಿಎಂಸಿ ಮಾರುಕಟ್ಟೆ …

Read More »

ಬೆಳಗಾವಿ ಸಾಂಬ್ರಾ ನಿಲ್ಧಾಣಕ್ಕೆ ಬಾಂಬ್ ಬೆದರಿಕೆ….!!

      ಬೆಳಗಾವಿ-ಇ ಮೇಲ್ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಹಾಕಿದ ಘಟನೆ ನಡೆದಿದೆ.ಹುಸಿಬಾಂಬ್ ಬೆದರಿಕೆ ಹಾಕಿದ ದುಷ್ಕರ್ಮಿಗಳು.ಮೇಲ್ ಮಾಡಿ ಬಾಂಬ್ ಹಾಕುವ ಬೆದರಿಕೆ ಹಾಕಿದ್ದಾರೆ. ನಿನ್ನೆ ಏರ್ಪೋರ್ಟ್ ಅಥಾರಿಟಿಗೆ ಬಾಂಬ್ ಬೆದರಿಕೆಯ ಮೇಲ್ ಬಂದಿತ್ತು,ಚೆನೈನಿಂದ ಬರುವ ವಿಮಾನಕ್ಕೆ ಬಾಂಬ್ ಇಡುವುದಾಗಿ ಬೆದರಿಕೆ ಹಾಕಲಾಗಿತ್ತು ಬೆಳಗಾವಿಗೆ ಚೆನೈನಿಂದ ವಿಮಾನ ಸಂಪರ್ಕ ಇರುವುದಿಲ್ಲ ಆದ್ರೂ ಈ ರೀತಿಯ ಮೇಲೆ ಏರ್ಪೋರ್ಟ್ ಅಥಾರಿಟಿಗೆ ಬಂದಿತ್ತು.ಈ ಕುರಿತು ಮಾರಿಹಾಳ …

Read More »

ಬೆಳಗಾವಿ ಪೋಲೀಸರಿಂದ ಕೋಟಿ,ಕೋಟಿ ಕಾರ್ಯಾಚರಣೆ….

    ಬೆಳಗಾವಿ-ಬೆಳಗಾವಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸುವ ಮೂಲಕ ಸೂಕ್ತ ದಾಖಲೆಗಳಿಲ್ಲದೇ ಸರಕು ಸಾಗಾಣಿಕೆ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ₹ 2.73 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮಹಾರಾಷ್ಟ್ರರಾಜ್ಯದ ಸಾಂಗಲಿ ಪಟ್ಟಣದ ಸಚೀನ ಮೇನಕುದುಳೆ ಮತ್ತು ಮಾರುತಿ ಮಾರಗುಡೆ ಬಂಧಿತ ಆರೋಪಿಗಳು. ಮಹಾರಾಷ್ಟ್ರ ರಾಜ್ಯದ ಸಾಂಗಲಿ‌ಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಸರಕು ಸಾಗಿಸುವ ವಾಹನದಲ್ಲಿ ಕೋಟಿ ಕೋಟಿ ಹಣ ಪತ್ತೆಯಾಗಿದೆ. …

Read More »

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ, ಸಭಾಧ್ಯಕ್ಷರಿಂದ ಪರಶೀಲನೆ.

ವಿಧಾನಸಭೆ ಸಭಾಧ್ಯಕ್ಷರು ಹಾಗೂ ವಿಧಾನ ಪರಿಷತ್ ಸಭಾಪತಿಯವರು ಆ.18 ರಂದು ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು ——————————— ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್… • ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ನಿರ್ದಿಷ್ಟ ದಿನಾಂಕವನ್ನು ಸಚಿವ ಸಂಪುಟದಲ್ಲಿ ತೀರ್ಮಾನಿಸಿ ಸಿಎಂ‌ ಘೋಷಣೆ ಮಾಡಲಿದ್ದಾರೆ. • ಪೂರ್ವ ಸಿದ್ಧತೆಗಾಗಿ ಅಧಿಕಾರಿಗಳ ಸಭೆಯನ್ನು ನಡೆಸಿ ಸಲಹೆ-ಸೂಚನೆಗಳನ್ನು ನೀಡಲಾಗಿದೆ. • ಕಳೆದ ವರ್ಷ ಅತ್ಯುತ್ತಮ ರೀತಿಯಲ್ಲಿ ಅಧಿವೇಶನ ನಡೆದಿದ್ದು, ಈ ಬಾರಿ ಇನ್ನಷ್ಟು …

Read More »

ನಿದ್ದೆ ಗುಳಗಿ ಬೆರಸಿದ್ದು ರಾಗಿ ಅಂಬಲಿಯಲ್ಲಿ…,ಸಾಥ್ ಕೊಟ್ಟಿದ್ದು, ಬಾಯ್ ಫ್ರೆಂಡ್……!!

ಫೇಸ್ ಬುಕ್ ಫ್ರೆಂಡ್ ಶೋಭೇಶ್ ಗೌಡ ಬೆಳಗಾವಿ- ಬೆಳಗಾವಿಯ ಬಡ್ಡಿ ವ್ಯವಹಾರ ಮಾಡಿಕೊಂಡಿದ್ದ ಬೆಳಗಾವಿಯ ಸಂತೋಷ್ ಪದ್ಮಣ್ಣವರ ವಾರದ ಹಿಂದೆ ಸಾವಿನ ಸುದ್ದಿ ಬಂದಿತ್ತು,ಅದೊಂದು ಸಹಜ ಸಾವು ಎಂದು ಎಲ್ಲರೂ ನಂಬಿದ್ದರು,ಸಹಜವಾಗಿ ಅಂತ್ಯಕ್ರಿಯೆಯೂ ನಡೆದಿತ್ತು.ಆದ್ರೆ ವಾರದ ನಂತರ ಮಗಳು ತಾಯಿಯ ಮೇಲೆಯೇ ಅನುಮಾನ ಪಟ್ಟು ಪೋಲೀಸರಿಗೆ ದೂರು ಕೊಟ್ಟ ನಂತರ ಸಂತೋಷನ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದು ಆತನ ಪತ್ನಿ ಉಮಾ ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದೆ. ಮಗಳು ದೂರು …

Read More »

ಬೆಳಗಾವಿಯಿಂದ ಬೆಂಗಳೂರಿಗೆ ವಿಮಾನ ಹಾರಾಟ ರದ್ದು ಮಾಡಬೇಡಿ- ಜಗದೀಶ್ ಶೆಟ್ಟರ್

ಬೆಳಗಾವಿ-ಮಾಜಿ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಜಗದೀಶ್ ಶೆಟ್ಟರ್ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ವಿಮಾನಯಾನ ಸಚಿವರಾದ ಕೆ. ಆರ್ ನಾಯ್ಡು ಇವರನ್ನು ಭೇಟಿಯಾಗಿ ಬೆಳಗಾವಿ ಬೆಂಗಳೂರು ಬೆಳಗಾವಿ ಮದ್ಯ ದಿನನಿತ್ಯ ಬೆಳಿಗ್ಗೆ ಸಂಚರಿಸುವ ಇಂಡಿಗೋ ಸಂಸ್ಥೆ ವಿಮಾನಯಾನ ಸೇವೆಯನ್ನು ರದ್ದು ಮಾಡಿರುವ ಕುರಿತು ಮತ್ತು ಇದನ್ನು ರದ್ದಾಗದಂತೆ ನೋಡಿಕೊಳ್ಳುವ ವಿಷಯವಾಗಿ ಚರ್ಚಿಸಿದರು.ಯಾವುದೇ ಕಾರಣಕ್ಕೂ ವಿಮಾನ ಹಾರಾಟವನ್ನು ರದ್ದು ಮಾಡಬೇಡಿ ಎಂದು ಮನವಿ ಮಾಡಿಕೊಂಡರು. …

Read More »

ವೇಶ್ಯಾವಾಟಿಕೆ ಅಡ್ಡೆಯ ಮೇಲೆ ರೇಡ್ ಆದ್ಮೇಲೆ ಓಡಲೇ ಓಟ….!!…..!!!

ಬೆಳಗಾವಿ- ಖಾನಾಪುರ ಪಟ್ಟಣದ ಪ್ರಮುಖ ಲಾಡ್ಜ್ ವೊಂದರಲ್ಲಿ ಅವ್ಯಾಹತವಾಗಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ,ಎನ್ನುವ ಮಾಹಿತಿ ತಿಳಿದ ಬಳಿಕ ಖಾನಾಪೂರ ಪೋಲೀಸರು ಆ ಲಾಡ್ಜ್ ಮೇಲೆ ರೇಡ್ ಮಾಡಿದಾಗ ಅಲ್ಲಿ ಸಿಕ್ಕಿದ್ದು ಐದು ಜನ ಹುಡುಗಿಯರು, ಹನ್ನೊಂದು ಜನ ಹುಡುಗರು. ಪೋಲೀಸರು ರೇಡ್ ಮಾಡಿದ ಬಳಿಕ ಅಲ್ಲಿದ್ದ ಯುವಕ ಯುವತಿಯರು ಓಡಲೇ….ಓಟ ಶುರು ಮಾಡಿದ್ರು ಆದ್ರೆ ಪೋಲೀಸರು ಲಾಡ್ಜ್ ಹೊರಗೂ ಫೀಲ್ಡಿಂಗ್ ಹಚ್ಚಿದ್ರು ಹೀಗಾಗಿ ಅವರು ಪೋಲೀಸರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. …

Read More »

ಮಗಳು ದೂರು ಕೊಟ್ಟ ಮೇಲೆ, ವಾರದ ನಂತರ ಸಮಾಧಿಯಿಂದ ಶವ ಹೊರಕ್ಕೆ……!!

ಬೆಳಗಾವಿ-ವಾರದ ಹಿಂದೆ ಮಹಾಂತೇಶ್ ನಗರದ ನಿವಾಸಿ ಸಂತೋಷ ಪದ್ಮಣ್ಣವರ ಅವರ ಸಾವು ಸಹಜ ಸಾವು ಎಂದು ಎಲ್ಲರು ತಿಳಿದುಕೊಂಡಿದ್ದರು, ಆದ್ರೆ ವಾರದ ನಂತರ ಮೃತ ಸಂತೋಷ ಪದ್ಮಣ್ಣವರ ಅವರ ಮಗಳು ಇದು ಸಹಜ ಸಾವು ಅಲ್ಲ ಇದೊಂದು ಮರ್ಡರ್ ಎಂದು ಪೋಲೀಸರಿಗೆ ದೂರು ನೀಡಿದ ಬಳಿಕ,ಅಂತ್ಯಕ್ರಿಯೆ ಮಾಡಿದ್ದ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಸದಾಶಿವ ನಗರದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಗಿದ್ದ ಶವ …

Read More »

ಎಂಇಎಸ್ ಮುಖಂಡರಿಗೆ ಬುದ್ದಿವಾದ ಹೇಳಿದ ಡಿಸಿ ಸೇಹೇಬ್ರು….!!

ಬೆಳಗಾವಿ-ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಗೆ ಅವಕಾಶ ನೀಡುವದಿಲ್ಲ ಎಂದು ಎಂಇಎಸ್ ಮುಖಂಡರಿಗೆ ಕಡ್ಡಿ ಮುರಿದಂತೆ ಹೇಳಿದ ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ನಾಡದ್ರೋಹಿಗಳಿಗೆ ಬುದ್ದಿವಾದ ಹೇಳುವ ಮೂಲಕ ಕನ್ನಡದ ಹಿತ ಕಾಪಾಡಿದ್ದಾರೆ. ರಾಜ್ಯೋತ್ಸವದ ದಿನ ಕರಾಳ ದಿನಾಚರಣೆಗೆ ಅನುಮತಿ ಕೊಡಿ ಎಂದು ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರನ್ನು ಭೇಟಿಯಾದ ಎಂಇಎಸ್ ಮುಖಂಡರಿಗೆ ಮುಖಭಂಗವಾಗಿದೆ. ನವೆಂಬರ್ 1 ರಂದು ಎಂಇಎಸ ಕರಾಳ‌ ದಿನಾಚರಣೆಗೆ ಅನುಮತಿ ಇಲ್ಲ ಎಂದು ಎಂಇಎಸ ಪುಂಡರಿಗೆ …

Read More »

ಸವದತ್ತಿ ಕಾರ್ಯಕ್ರಮದ ವೇದಿಕೆಯಲ್ಲಿ ಹೀಗೊಂದು ಪ್ರಸಂಗ…..!!

ಬೆಳಗಾವಿ-ಶಕ್ತಿದೇವತೆ ರೇಣುಕಾ ಯಲ್ಲಮ್ಮ ದೇವಿಯ ಸನ್ನಿಧಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದ ವೇದಿಕೆಯ ಮೇಲೆ, ಪ್ರಸಕ್ತ ರಾಜಕೀಯ ಬೆಳವಣಿಗಳ ಚಿತ್ರಣ ಮೂಡಿಸುವ ಪ್ರಸಂಗ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ರಾಮಯ್ಯನವರ ಅಕ್ಕಪಕ್ಕದಲ್ಲಿ ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಅವರು ಕುಳಿತುಕೊಂಡಿದ್ದರು. ಸಿಎಂ ಸಿದ್ರಾಮಯ್ಯ ಮಾತನಾಡಲು ಎದ್ದು ಹೋದ ಬಳಿಕ ಸಿಎಂ ಖುರ್ಚಿ ಖಾಲಿಯಾಗಿತ್ತು. ಡಿಕೆ ಶಿವಕುಮಾರ್ ಮತ್ತು ಸತೀಶ್ ಜಾರಕಿಹೊಳಿ ಖಾಲಿ ಖುರ್ಚಿಯ ಅಕ್ಕಪಕ್ಕ ಕುಳಿತುಕೊಂಡಿದ್ದ ಪ್ರಸಂಗ ಎಲ್ಲರ ಗಮನ ಸೆಳೆಯಿತು. …

Read More »

ಬೆಳಗಾವಿಯಿಂದ, ಬೆಂಗಳೂರಿಗೆ ದೋಸ್ತಿಗಳ ಜೋಡಿ ಪ್ರವಾಸ…!!

ಬೆಳಗಾವಿ- ಮುಖ್ಯಮಂತ್ರಿ ಸಿದ್ರಾಮಯ್ಯನವರ ಪರಮಾಪ್ತ ಸತೀಶ್ ಜಾರಕಿಹೊಳಿ ಅವರು ನಾಳೆ ಸವದತ್ತಿಯಿಂದ ಮುಖ್ಯಮಂತ್ರಿಗಳ ಜೊತೆ ಬೆಂಗಳೂರಿಗೆ ತೆರಳಲಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಲ್ಲೇ ಇರುವ ಸಚಿವ ಸತೀಶ್ ಜಾರಕೊಹೊಳಿ ನಾಳೆ ಭಾನುವಾರ ಸವದತ್ತಿ ಯಲ್ಲಮ್ಮ ದೇವಿಯ ದರ್ಶನ ಪಡೆದು ಸವದತ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸದತ್ತಿಯಲ್ಲೇ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರದ ಸಭೆ ನಡೆಸಿದ ಬಳಿಕ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿಗಳ …

Read More »
Sahifa Theme License is not validated, Go to the theme options page to validate the license, You need a single license for each domain name.