Breaking News
Home / ಬೆಳಗಾವಿ ನಗರ / ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..

ಬೆಳಗಾವಿ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಮಾಡುವ ಚಿಕಿತ್ಸೆ…..

 

ಬೆಳಗಾವಿ- ಬೆಳಗಾವಿಯ ಕೆಎಲ್ಇ ಆಸ್ಪತ್ರೆ ದಿನದಿಂದ ದಿನಕ್ಕೆ ಹೈಟೆಕ್ ಆಗುತ್ತ ಹೊರಟಿದೆ ಅನೇಕ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ಹೊಂದಿರುವ ಈ ಆಸ್ಪತ್ರೆಯಲ್ಲಿ ಹೃದಯ ಕಸಿ,ಮಾಡುವ ಚಿಕಿತ್ಸಾ ವ್ಯೆವಸ್ಥೆ ಆರಂಭವಾಗಿದೆ
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಕೆಎಲ್ಇ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಬೆಂಗಳೂರಿನಲ್ಲಿ ಮಾತ್ರ ಹೃದಯ ಕಸಿ ಮಾಡುವ ವ್ಯೆವಸ್ಥೆ ಇತ್ತು ಉತ್ತರ ಕರ್ಣಾಟಕದ ಜನರಿಗೆ ಅನಕೂಲವಾಗುವ ದೃಷ್ಠಿಯಿಂದ ಕೆಎಲ್ಇ ಆಸ್ಪತ್ರೆಯಲ್ಲಿ ಹೃದಯ ಕಸಿ ಕಿಡ್ನಿ ಕಸಿ ಮತ್ತು ಲಿವರ್ ಕಸಿ ಮಾಡುವ ವ್ಯೆವಸ್ಥೆ ಮಾಡಲಾಗಿದೆ ಅದಕ್ಕಾಗಿ ಆಸ್ಪತ್ರೆಯಲ್ಲಿ ಹೈಟೆಕ ಆಪರೇಶನ್ ಥೇಟರ್ ನಿರ್ಮಿಸಲಾಗಿದೆ ಎಂದರು
ಬ್ರೇನ್ ದೆತ್ ಆದ ಮನುಷ್ಯನ ಅಂಗಾಗಗಳನ್ನು ಪಡೆದು ಅನಾರೋಗ್ಯದಿಂದ ಬಳಲುವ ರೋಗಿಗೆ ಕಿಡ್ನಿ ಲಿವರ್ ಮತ್ತು ಹೃದಯವನ್ನು ಕಸಿ ಮಾಡಬಹುದಾಗಿದೆ ಎಂದು ಪ್ರಭಾಕರ ಕೋರೆ ತಿಳಿಸಿದರು

ಹೃದಯ ಕಸಿ ಮಾಡಲು ಐದು ಲಕ್ಷ ಕಿಡ್ನಿ ಕಸಿ ಮಾಡಲು ಮೂರುವರೆ ಲಕ್ಷ ಕೊತೆಗೆ ಲಿವರ್ ಕಸಿ ಮಾಡಲು ಸುಮಾರು ೨೦ ಲಕ್ಷ ಖರ್ಚಾಗುತ್ತದೆ ಇದೆ ಬೇರೆ ಆಸ್ಪತ್ರೆ ಗಳಿಗಿಂತಲೂ ಕಡಿಮೆ ಬೆಲೆ ಆಗಿದೆ ಎಂದು ಪ್ರಭಾಕರ ಕೋರೆ ತಿಳಿಸಿದರು

ಮಹಾಂತೇಶ ಕವಟಗಿಮಠ ಡಾ ಸಾಧುನವರ ಡಾ ಜಾಲಿ ಡಾ ಹಜಾರೆ ಡಾ ನೆರಲಿ ಸೇರಿದಂತೆ ಹಲವಾರು ಜನ ವೈದ್ಯರು ಉಪಸ್ಥಿತರಿದ್ದರು

About BGAdmin

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ