ಬೆಳಗಾವಿ, ಡಿಸಿಸಿ ಬ್ಯಾಂಕ್ ಚುನಾವಣೆಗೆ ರಾಹುಲ್ ಜಾರಕಿಹೊಳಿ ಎಂಟ್ರಿ….!!

ಬೆಳಗಾವಿ – ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಬ್ಯಾಂಕ್ ರಾಜಕಾರಣಕ್ಕೆ ಪ್ರವೇಶ ಪಡೆಯುವವರ ಹೆಬ್ಬಾಗಿಲು ಆಗಿರುವ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಗೆ ಬೆಳಗಾವಿ ಜಿಲ್ಲೆಯಲ್ಲಿ ಭರ್ಜರಿ ತಯಾರಿ ನಡೆದಿದೆ.

ಮಾಜಿ ಸಚಿವ ಬೆಳಗಾವಿ KMF ಅಧ್ಯಕ್ಷರಾಗಿರುವ ಬಾಲಚಂದ್ರ ಜಾರಕಿಹೊಳಿ ಅವರು ಇತ್ತೀಚಿಗೆ ಖಾನಾಪೂರ ತಾಲ್ಲೂಕಿನ ಕೃಷಿಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳ ಸಭೆ ನಡೆಸಿದ ಬೆನ್ನಲ್ಲಿಯೇ ಇಂದು ಬೆಳಗಾವಿ ತಾಲ್ಲೂಕಿನ ಕೃಷಿಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳ ಸಭೆಯನ್ನು ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆಸಿದರು ಈ ಸಭೆಯಲ್ಲಿ ಕಾಂಗ್ರೆಸ್ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಭಾಗವಹಿಸಿದ್ದು ವಿಶೇಷವಾಗಿತ್ತು.

ಇಂದು ಬೆಳಗಾವಿಯ ಧರ್ಮನಾಥ ಭವನದಲ್ಲಿ ನಡೆದ ಬೆಳಗಾವಿ ತಾಲ್ಲೂಕಿನ ಸಭೆಯಲ್ಲಿ ರಾಹುಲ್ ಜಾರಕಿಹೊಳಿ ಭಾಗವಹಿಸಿ ಎಲ್ಲರ ಗಮನಸೆಳೆದರು. ರಾಹುಲ್ ಸಭೆಯಲ್ಲಿ ಎಲ್ಲರನ್ನು ಉದ್ದೇಶಿಸಿ ಮಾತನಾಡಿದ್ರು.

ಇಂದು ನಡೆದ ಬೆಳಗಾವಿ ತಾಲ್ಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ಪದಾಧಿಕಾರಿಗಳ ಸಭೆಯಲ್ಲಿ ನಡೆದ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ರೆ ರಾಹುಲ್ ಜಾರಕಿಹೊಳಿ ಡಿಸಿಸಿ ಬ್ಯಾಂಕಿನ ಚುನಾವಣೆಗೆ ಧುಮುಕುವ ದು ಖಾತ್ರಿಯಾಗಿದೆ. ರಾಹುಲ್ ಜಾರಕಿಹೊಳಿ ಅವರೇ ಬೆಳಗಾವಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ದಿಸುವದು ಬಹುತೇಕ ಖಚಿತವಾಗಿದೆ.

ರಾಹುಲ್ ಜಾರಕಿಹೊಳಿ ಅವರು ಬೆಳಗಾವಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕಿನ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಸುದ್ದಿ ಜಿಲ್ಲೆಯಾದ್ಯಂತ ಸದ್ದು ಮಾಡಿದೆ, ಅವರು ಸ್ಪರ್ದೆ ಮಾಡುವ ವಿಚಾರ ಅಧಿಕೃತವಾಗಿ ಘೋಷಣೆ ಆಗುವದಷ್ಟೇ ಬಾಕಿ ಇದೆ.

ಬೆಳಗಾವಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕಿಗೆ ರಾಹುಲ್ ಜಾರಕಿಹೊಳಿ ಅವರು ಸ್ಪರ್ದೆ ಮಾಡುವ ವಿಚಾರ ಈ ಹಿಂದೆಯೇ ಚರ್ಚೆಗೆ ಬಂದಿತ್ತು ಆದ್ರೆ ಇವತ್ತು ನಡೆದ ಸಭೆಯಲ್ಲಿ ರಾಹುಲ್ ಜಾರಕಿಹೊಳಿ ಅವರ ಹಾಜರಾತಿ ಅದಕ್ಕೆ ರಕ್ಕೆ ಪುಕ್ಕೆಗಳನ್ನು ಕೊಟ್ಟಿದೆ.

Check Also

ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ವರ್ಗಾವಣೆ

ಬೆಳಗಾವಿ -ಕಳೆದ ಎರಡು ವರ್ಷಗಳಿಂದ ಬೆಳಗಾವಿ ಡಿಸಿಪಿ ( ಕಾ.ಸೂ) ಯಾಗಿ ಕರ್ತವ್ಯ ನಿಭಾಯಿಸಿದ ರೋಹನ್ ಜಗದೀಶ್ ಅವರ ವರ್ಗಾವಣೆಯಾಗಿದ್ದು …

Leave a Reply

Your email address will not be published. Required fields are marked *