Breaking News

ಬೆಳಗಾವಿ ಬಸ್ ನಿಲ್ಧಾಣದಲ್ಲಿ ಯುವಕನಿಗೆ ಚಾಕು ಇರಿತ

ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಚಾಕು ಇರಿತದ ಪ್ರಕರಣಗಳು ವಿಪರೀತವಾಗಿವೆ. ಸಣ್ಣ ಪುಟ್ಟ ವಿಚಾರಗಳಿಗೂ ಚಾಕು ಚುಚ್ಚಾಟದ ಹುಚ್ಚಾಟ ನಡೆಯುತ್ತಿದೆ.ಬೆಳಗಾವಿಯಲ್ಲಿ ಬಸ್ ನ ಕಿಟಕಿ ಸೀಟಗಾಗಿ ಕಾಲೇಜು ವಿದ್ಯಾರ್ಥಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾದ ಘಟನೆ ಬೆಳಗಾವಿ ಬಸ್ ನಿಲ್ಧಾಣದಲ್ಲಿ ನಡೆದಿದೆ. ಅಪರಿಚಿತ ಯುವಕರು ಕಾಲೇಜು ವಿದ್ಯಾರ್ಥಿಯೊಬ್ಬನಿಗೆ ಎದೆಗೆ ಚಾಕು ಹಾಕಿ ಪರಾರಿಯಾಗಿದ್ದಾರೆ.ಬೆಳಗಾವಿ ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.ಬೆಳಗಾವಿ ತಾಲೂಕಿನ ಪಂತ ಬಾಳೇಕುಂದರಗಿ ಗ್ರಾಮದ ಮಾಜ್ ಸನಧಿ …

Read More »

ಮಾಜಿ ಶಾಸಕ ಕಾಕಾಸಾಹೇಬ್ ಪಾಟೀಲ ಇನ್ನಿಲ್ಲ

ಬೆಳಗಾವಿ- ನಿಪ್ಪಾಣಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಿರಿಯ ಕಾಂಗ್ರೆಸ್ ಮುಖಂಡ ಕಾಕಾಸಾಹೇಬ್ ಪಾಟೀಲ ಮದ್ಯರಾತ್ರಿ ನಿಧನರಾಗಿದ್ದಾರೆ. ಅನಾರೋಗ್ಯದ ಕಾರಣ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ದಾಖಲಾಗಿದ್ದ ಅವರು ಮದ್ಯರಾತ್ರಿ 2-00 ಗಂಟೆಗೆ ನಿಧನರಾಗಿದ್ದು ಇಂದು ಮಧ್ಯಾಹ್ನ 3-00 ಗಂಟೆಗೆ ಕಾಕಾಸಾಹೇಬ್ ಪಾಟೀಲ ಅವರ ಸ್ವಗ್ರಾಮವಾದ ಚಿಕ್ಕೋಡಿ ತಾಲ್ಲೂಕಿನ ವಾಳಕಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ 1999, 2004 ಹಾಗೂ 2008 ರಲ್ಲಿ ಮೂರು ಬಾರಿ ಶಾಸಕರಾಗಿದ್ದ ಕಾಕಾಸಾಹೇಬ್ …

Read More »

ಉತ್ತರಾಖಂಡದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಜಸ್ಟ್ ಮಿಸ್….!!!

ಬೆಳಗಾವಿ- ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಪತ್ನಿ ಸಮೇತ ಡೆಹ್ರಾಡೂನ್ ಗೆ ಹೋಗಿದ್ರು, ಅಲ್ಲಿ ಮೀಟೀಂಗ್ ಮುಗಿಸಿ ಒಟ್ಟು ಎಂಟು ಜನ ಸಂಸದರು ತಮ್ಮ ಕುಟುಂಬದ ಜೊತೆ ಹೆಲಿಕಾಪ್ಟರ್ ನಲ್ಲಿ ಕೇದಾರನಾಥಕ್ಕೆ ಹೋಗುವ ಪ್ಲ್ಯಾನ್ ಮಾಡಿದ್ರು ಹೆಲಿಕಾಪ್ಟರ್ ಪಾಯಿಂಟ್ ಗೆ ಹೋಗಲು ಇವರಿಗೆ ತಡವಾಯ್ತು, ಹೆಲಿಕಾಪ್ಟರ್ ಮ್ಯಾನೇಜ್ ಮಾಡುವವರು ಸಂಸದರು ಬರುವವರೆಗೆ ಬೇರೆ ಯಾತ್ರಾರ್ಥಿಗಳನ್ಬು ಶಿಪ್ಟ್ ಮಾಡೋಣ ಅಂತ ಹೆಲಿಕಾಪ್ಟರ್ ಹಾರಿಸಿದ್ರು ಅದೇ ಹೆಲಿಕಾಪ್ಟರ್ ಲ್ಯಾಂಡಿಂಗ್ ಆಗುವಾಗ ಕ್ರ್ಯಾಶ್ ಆಗಿ …

Read More »

ಕುರಿ ಹಿಂಡಿನ ಚಲನವಲನ ಮನೆಯಲ್ಲೇ ಇದ್ದ ವಿಲನ್….!!!

ಬೆಳಗಾವಿ- ಒಬ್ಬ ವ್ಯಕ್ತಿಯ ಕೊಲೆ ನಡೆದಾಗ ಆರೋಪಿಗಳನ್ನು ಪತ್ತೆ ಮಾಡುವದು ಸುಲಭವಲ್ಲ, ಪೋಲೀಸರು ಈ ವಿಚಾರದಲ್ಲಿ ಎಲ್ಲ ಆಯಾಮಗಳಲ್ಲಿ ತನಿಖೆ ಮಾಡ್ತಾರೆ,ಆದ್ರೂ ಆರೋಪಿಗಳು ಪತ್ತೆಯಾಗುವದಿಲ್ಲ.ಅಪರಾಧಿಗಳು ಅಪರಾಧವನ್ನು ಮುಚ್ಚಿಡಲು ಸಾಧ್ಯವೇ ಇಲ್ಲ ಯಾಕಂದ್ರೆ ಇವತ್ತಿನ ಅಧುನಿಕ ಕಾಲದಲ್ಲಿ ಪೋಲೀಸರಿಗೆ ಸಣ್ಣ ಸುಳಿವು ಸಿಕ್ರೆ ಸಾಕು ಅವರು ಇಡೀ ಪ್ರಕರಣವನ್ನು ಜಾಲಾಡಿಸಿ ಬಿಡ್ತಾರೆ. ಬೆಳಗಾವಿ ಜಿಲ್ಲೆಯ ಯಮಕನಮರಡಿ ಪೋಲೀಸ್ ಠಾಣೆಯ ವ್ಯಾಪ್ತಿಯ ಹಟ್ಟಿಆಲೂರ ಗ್ರಾಮದಲ್ಲಿ ಕುರಿ ಹಿಂಡು ಕಾಯುತ್ತಿದ್ದ ವ್ಯಕ್ತಿಯ ಕೊಲೆ ನಡೆದು …

Read More »

ಬೆಳಗಾವಿಯಲ್ಲಿ ಸಿಎಂ ವಿರುದ್ಧ ಪೋಲೀಸರಿಗೆ ದೂರು.

.ಬೆಳಗಾವಿ-ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬೆಳಗಾವಿಯ ಕ್ಯಾಂಪ್ ಪೊಲೀಸ್‌ ಠಾಣೆಗೆ ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ್ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲು ಪ್ರತಿ ನೀಡದಿದ್ರೇ ಕೋರ್ಟ್ ಗೆ ಹೋಗುವುದಾಗಿ ಗಡಾದ್ ಎಚ್ಚರಿಕೆ ನೀಡಿದ್ದಾರೆ. ಎಪ್ರಿಲ್ 28ರಂದು ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಸಿಎಂ ಸಿದ್ರಾಮಯ್ಯ ಅವರು ಪೊಲೀಸ್ ಅಧಿಕಾರಿ ಮೇಲೆ ಕೈ ಎತ್ತಿದ್ದ ಕಾರಣ ಸಿಎಂ ವಿರುದ್ಧ ಭೀಮಪ್ಪ ಗಡಾದ್ ಬೆಳಗಾವಿ ಮಹಾನಗರದ ಕ್ಯಾಂಪ್ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. …

Read More »

ಹೆಂಡತಿಯ ಜತೆ ಜಗಳಾಡಿದ್ದ ಪತಿ, ಅನುಮಾನಾಸ್ಪದ ಸಾವು.

ಬೆಳಗಾವಿ-ಪತ್ನಿಯೊಡನೆ ಜಗಳವಾಡಿ ಮನೆಯಿಂದ ಹೊರಗೆ ಹೋಗಿದ್ದ ಪತಿ ಅನುಮಾನಾಸ್ಪದ ಸಾವನ್ನಪ್ಪಿದ ಘಟನೆಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಮುಸಗುಪ್ಪಿ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಪತ್ನಿಯೊಡನೆ ಜಗಳವಾಡಿ ಮನೆ ಬಿಟ್ಟು ಹೋಗಿದ್ದ ವ್ಯಕ್ತಿ.ಮಹಾಲಿಂಗ್ ಸೀಮೆಗೋಳ(32) ಮೃತ ವ್ಯಕ್ತಿಯಾಗಿದ್ದಾನೆ.ಗುಜನಟ್ಟಿ ಗ್ರಾಮದಿಂದ ನಿನ್ನೆ ಪತ್ನಿ ಜೊತೆಗೆ ಜಗಳವಾಡಿ ಹೋಗಿದ್ದ ಮಹಾಲಿಂಗನ ತಲೆಗೆ ಗಾಯವಾದ ಸ್ಥಿತಿಯಲ್ಲಿ ಮೃತದೇಹ ಸಿಕ್ಕಿದೆ. ಮಹಾಲಿಂಗ ಮೃತದೇಹ. ಮೃತದೇಹದ ಪಕ್ಕದಲ್ಲಿಯೇ ಪತ್ತೆಯಾಗಿರುವ ವಿಷದ ಬಾಟಲಿ.ಸ್ಥಳಕ್ಕೆ ಮೂಡಲಗಿ ಪೊಲೀಸರ ಭೇಟಿ ಪರಿಶೀಲನೆ.ಮೂಡಲಗಿ ಪೊಲೀಸ್ ಠಾಣಾ …

Read More »

ಬೆಳಗಾವಿಯಲ್ಲಿ ಯುವಕನಿಗೆ ಚಾಕು ಇರಿತ.

ಬೆಳಗಾವಿ -ಬೆಳಗಾವಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತವಾದ ಘಟನೆ ಬೆಳಗಾವಿಯ ಕಣಬರ್ಗಿ ಪ್ರದೇಶದಲ್ಲಿ ನಡೆದಿದೆ. ನಾಳೆ ತಂಗಿ ಮದುವೆ ಇಂದು ಯುವಕರ ಗ್ಯಾಂಗ್ ನಿಂದ ಅಣ್ಣನಿಗೆ ಚಾಕು ಇರಿತವಾಗಿದೆ. ನಾಳೆ ತಂಗಿಯ ಮದುವೆಯ ತಯಾರಿ ಮಾಡಬೇಕಾದ ಅಣ್ಣ ಚಾಕೂ ಇರಿತದಿಂದ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ.ಮಂಜುನಾಥ್ ನಿಂಗಪ್ಪ ಕೆಂಪ(23) ಗಂಭೀರ ಗಾಯಗೊಂಡ ಯುವಕನಾಗಿದ್ದು,ನಿನ್ನೆ ತಡರಾತ್ರಿ ಬೈಕ್ ಟಚ್ ಆಗಿ ಮಂಜುನಾಥ್ ಬೈಕ್ ಬೇರೊಬ್ಬರ ಬೈಕ್ ಗೆ ಟಚ್ ಆಗಿತ್ತು. …

Read More »

ತಂದೆಯ ಹುಟ್ಟು ಹಬ್ಬದ ಪ್ರಯುಕ್ತ ಸಿಂಹ ದತ್ತು ಪಡೆದ ರಾಹುಲ್ ಜಾರಕಿಹೊಳಿ

ಬೆಳಗಾವಿ: ಭೂತರಾಮನಹಟ್ಟಿಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿರುವ ‘ಬೃಂಗಾ’ ಎಂಬ ಸಿಂಹವನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿಯವರ 63ನೇ ಜನ್ಮದಿನ ಪ್ರಯುಕ್ತ, ಅವರ ಸುಪುತ್ರ ರಾಹುಲ್ ಜಾರಕಿಹೊಳಿ ಒಂದು ವರ್ಷದ ಅವಧಿಗೆ ದತ್ತು ಪಡೆದಿದ್ದಾರೆ. ರಾಜ್ಯ ಕಾಂಗ್ರೆಸ್ ಯುವ ಘಟಕದ ಪ್ರದಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಅವರು ರೂ.2 ಲಕ್ಷ ಪಾವತಿಸಿದ್ದಾರೆ. 2025ರ ಜೂನ್ 1ರಿಂದ 2026ರ ಮೇ 31ರವರೆಗಿನ ಅವಧಿಗೆ ಈ ಸಿಂಹವನ್ನು ರಾಹುಲ್ ಅವರು ದತ್ತು …

Read More »

ಭೀಕರ ಅಪಘಾತ ರಸ್ರೆ ದುರಸ್ಥಿ ಮಾಡುತ್ತಿದ್ದ ಮೂವರ ಸಾವು

ಬೆಳಗಾವಿ-ರಾಷ್ಟ್ರೀಯ ಹೆದ್ದಾರಿ ನಾಲ್ಕು ಪುಣೆ ಬೆಂಗಳೂರು ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂ ಭವಿಸಿದೆ.ರಸ್ತೆಯಲ್ಲಿ ಕೆಲಸ ಮಾಡ್ತಿದ್ದವರ ಮೇಲೆ ಟ್ಯಾಂಕರ್ ಹರಿದು ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಇಟಗಿ ಕ್ರಾಸ್ ನಲ್ಲಿ ಈ ಘಟನೆ ನಡೆದಿದೆ.ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ರಸ್ತೆ ರಿಪೇರಿ ಮಾಡ್ತಿದ್ದ ಸಂಧರ್ಬದಲ್ಲಿ ಕಾರ್ಮಿಕರ ಮೇಲೆ ಏಕಾಏಕ ಟ್ಯಾಂಕರ್ ಹರಿದ ಪರಿಣಾಮ ಮೂರು ಜನ ಕಾರ್ಮಿಕರ ಮೃತಪಟ್ಟಿದ್ದಾರೆ. ಓರ್ವ ಕಾರ್ಮಿಕನ ಸ್ಥಿತಿ ಗಂಭೀರ …

Read More »

ಬೆಳಗಾವಿಯಲ್ಲಿ ಆಕಸ್ಮಿಕ ಕರೆಂಟ್ ಪವರ್ ಮ್ಯಾನ್ ಸಾವು.

ಬೆಳಗಾವಿ -ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಪವರ್ ಮ್ಯಾನ್ ಸಾವನ್ಬೊಪ್ಪಿದ್ದಾನೆ.ರಾಹುಲ್ ಪಾಟೀಲ್(30) ಮೃತ ಪವರ್ ಮ್ಯಾನ್ ಎಂದು ಗುರುತಿಸಲಾಗಿದೆ.ಬೆಳಗಾವಿಯ ಯಳ್ಳೂರು ಗ್ರಾಮದ ನಿವಾಸಿಯಾಗಿರೋ ರಾಹುಲ್,ಇಂದು ಬೆಳಗಾವಿಯ ಜೈತನಮಾಳದಲ್ಲಿ ಈ ಘಟನೆ ನಡೆದಿದೆ. ಐಪಿ ರೀಡಿಂಗ್ ತರಲು ಹೋಗಿದ್ದ ರಾಹುಲ್. ಟಿಪಿ ಬಾಕ್ಸ್ ನಲ್ಲಿ ವಿದ್ಯುತ್ ಪ್ರವಹಿಸಿ ಸ್ಥಳದಲ್ಲಿಯೇ ಸಾವುನ್ಬೊಪ್ಪಿದ್ದಾನೆ.ಕಳೆದ ಆರು ತಿಂಗಳ ಹಿಂದಷ್ಟೆ ತಂದೆಯಾದ ಖುಷಿಯಲ್ಲಿದ್ದ ರಾಹುಲ್‌ ಐಪಿ ರೀಡಿಂಗ್ ತರಲು ಹೋದ ಸಂಧರ್ಭದಲ್ಲಿ ಈ ಅವಘಡ ಸಂಭವಿಸಿದ್ದುಐಪಿ ಸೆಟ್ ಉಸ್ತುವಾರಿ …

Read More »