Breaking News
Home / Breaking News (page 30)

Breaking News

ಕರುಣೆಯಾ…ತೋರೆಯಾ….!!!

ವೃದ್ಧೆ ತಾಯಿ,ಅಂಗವಿಕಲ ಮಗನಿಗೆ ಈ ಬಸ್ ತಂಗುದಾಣವೇ ಆಲಯವು! ಹಾಸಲುಂಟು,ಹೊದೆಯಲುಂಟು ಇವರೊಂದಿಗೆ ಎಲ್ಲವೂ ಇಲ್ಲುಂಟು! ಇಂದು ಶುಕ್ರವಾರ ಸಂಜೆ ಬೆಳಗಾವಿಯ ಟಿವ್ಹಿ ಸೆಂಟರ್ (ಬೂಡಾ ಯೋಜನೆ ಸಂಖ್ಯೆ13) ನಲ್ಲಿರುವ ಬಸ್ ತಂಗುದಾಣದಲ್ಲಿ ಈ ದೃಶ್ಯ ಕಂಡು ಬಂದಿತು.ಸುಮಾರು ಎಪ್ಪತ್ತರ ಆಸು ಪಾಸು ವಯಸ್ಸಿನ ವೃದ್ಧೆ ಜಯಲಕ್ಷ್ಮೀ ಹಾಗೂ 25 / 30 ವರ್ಷ ವಯಸ್ಸಿನ ಗುರುದತ್ತ ವಿನಾಯಕ ತಮ್ಮ ಮನೆಯ ಸಾಮಾನು ಸರಂಜಾಮಿನ ಜೊತೆಗೆ ಇಲ್ಲಿ ಠಿಕಾಣಿ ಹೂಡಿದ್ದಾರೆ. ಗುರುದತ್ತನಿಗೆ …

Read More »

ಬೆಳಗಾವಿ ನಗರಕ್ಕೆ ವಿಶೇಷ ಕೊಡುಗೆ ನೀಡಲು ಸಿಎಂ ಗೆ ಮನವಿ

ಬೆಳಗಾವಿ- ಬಸವ ತತ್ವದ ಪ್ರಸಾರದ ವಿಚಾರವಾಗಿ ಬೆಳಗಾವಿ ಮಹಾನಗರದಲ್ಲಿ ಅನುಭವ ಮಂಟಪದ ಮಾದರಿಯ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು ಈ ಕಟ್ಟಡ ನಿರ್ಮಾಣಕ್ಕೆ ವಿಶೇಷ ಅನುದಾನ ನೀಡುವಂತೆ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನೀಲ ಬೆನಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಅವರು ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದ್ದು ಈ ಅಧಿವೇಶನದ ಕೊಡುಗೆಯಾಗಿ ಅನುಭವ ಮಂಟಪದ ಮಾದರಿಯ ಕಡ್ಟಡ …

Read More »

ನಾಳೆ ಬೆಳಗಾವಿಗೆ ಮುಖ್ಯಮಂತ್ರಿ ಬೊಮ್ಮಾಯಿ..

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್ತಿನ ಚುನಾವಣೆಯ ಚಿತ್ರಣವೇ ಬದಲಾಗಿದ್ದು ಎಲ್ಲ ಲೆಕ್ಕಾಚಾರಗಳು ಬುಡಮೇಲಾಗುವ ಲಕ್ಷಣಗಳು ಕಂಡು ಬಂದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಲು ಬೆಳಿಗ್ಗೆ ಹುಬ್ಬಳ್ಳಿ ವಿಮಾನ ನಿಲ್ಧಾಣಕ್ಕೆ ಆಗಮಿಸಿ,ಶಿಗ್ಗಾಂವಗೆ ತೆರಳಿ ಮತ ಚಲಾಯಿಸಲಿದ್ದಾರೆ. ಶಿಗ್ಗಾಂವದಲ್ಲಿ ಮತ ಚಲಾಯಿಸಿದ ಬಳಿಕ ರಸ್ತೆಯ ಮೂಲಕ 2-15 ಕ್ಕೆ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ಧಾಣಕ್ಕೆ ಆಗಮಿಸುವ ಅವರು ಬೆಳಗಾವಿಯಿಂದ ಬೆಂಗಳೂರಿಗೆ ತೆರಳಲಿದ್ದಾರೆ.

Read More »

ಬೆಳಗಾವಿಯ ತ್ರೀಬಲ್ ಫೈಟ್ ನಲ್ಲಿ ಯಾರಿಗೆ ಟ್ರಬಲ್….!!!

ಬೆಳಗಾವಿ- ಸ್ಥಳಿಯ ಸಂಸ್ಥೆಗಳ ವಿಧಾನ ಪರಿಷತ್ತಿನ ಚುನಾವಣೆ ಬೆಳಗಾವಿ ಜಿಲ್ಲೆಯಲ್ಲಿ ತೀವ್ರ ಕುತೂಹಲ ಕೆರಳಿಸಿದೆ.ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿ ಭೇಟಿಯ ಬಳಿಕ ಗುಣಾಕಾರ,ಭಾಗಾಕಾರದ ಸೂತ್ರವೇ ಬದಲಾಗಿದೆ. ಬೆಳಗಾವಿ ಕ್ಷೇತ್ರದ ಪರಿಷತ್ತಿನ ಚುನಾವಣೆ,ರಾಜ್ಯದ ಗಮನ ಸೆಳೆದಿದೆ,ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ಗುದ್ದಾಟ ಅಲ್ಲವೇ ಅಲ್ಲ,ಡಿ.ಕೆ ಶಿವಕುಮಾರ್ ಮತ್ತು ರಮೇಶ್ ಜಾರಕಿಹೊಳಿ ನಡುವಿನ ಜಿದ್ದಾಜಿದ್ದಿಯ ಯುದ್ಧ ಅನ್ನೋದು ಸ್ಪಷ್ಟವಾಗಿದೆ.ಈ ಯುದ್ಧದಲ್ಲಿ ಯಾರು ವಿಜಯಶಾಲಿ ಆಗ್ತಾರೆ,ಫಲಿತಾಂಶ ಏನಾಗುತ್ತದೆ ತ್ರೀಬಲ್ ಸೆಣಸಾಟದಲ್ಲಿ ಯಾರಿಗೆ …

Read More »

ದಕ್ಷಿಣ ಭಾರತದ ಏಕೈಕ ,ಬೆಳಗಾವಿಯ ಅಶ್ವತ್ಥಾಮ ಮಂದಿರದ ಮೂರ್ತಿ ಕಳ್ಳತನ..

ಬೆಳಗಾವಿ: ದಕ್ಷಿಣ ಭಾರತದ ಶ್ರದ್ಧಾಕೇಂದ್ರ ಹಾಗೂ ಪ್ರಸಿದ್ಧ ಜಾಗೃತ ಸ್ಥಳವಾದ ನಗರದ ಪಾಂಗುಳ ಗಲ್ಲಿಯ ಅಶ್ವತ್ಥಾಮ ಮಂದಿರದ  ಮೂರ್ತಿ ಸೋಮವಾರ ತಡರಾತ್ರಿ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳವಾಗಿದ್ದು, ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಈ ಸ್ಥಳಕ್ಕೆ ಧಾವಿಸಿದ್ದಾರೆ. ಅರ್ಚಕರು ಎಂದಿನಂತೆ ದೇವಾಲಯಕ್ಕೆ ಪೂಜೆ ಸಲ್ಲಿಸಲು ಮಂಗಳವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಭಾರತದಲ್ಲಿ ಇಂತಹ ಎರಡೇ ಮಂದಿರಗಳಿವೆ. ಆ ಪೈಕಿ ಉತ್ತರ ಭಾರತದಲ್ಲಿ ಇರುವುದು ಇದೊಂದೇ. ರಂಗಪಂಚಮಿಯಲ್ಲಿ ಶಾಪ ವಿಮೋಚನೆಗಾಗಿ ಜನರು …

Read More »

ಬೆಳಗಾವಿಯಲ್ಲಿ ಎಂ.ಎಲ್ ಸಿ ಇಲೆಕ್ಷನ್ ಟ್ರೇನೀಂಗ್‌..

ಪರಿಷತ್ ಚುನಾವಣೆ: ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಬೆಳಗಾವಿ, .ಇದೇ ಡಿಸೆಂಬರ್ ‌10 ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ತರಬೇತಿಯನ್ನು ನೀಡಲಾಯಿತು. ನಗರದ ಜ್ಯೋತಿ ಕಾಲೇಜಿನಲ್ಲಿ ಭಾನುವಾರ (ಡಿ.5) ಬೆಳಗಾವಿ ತಾಲ್ಲೂಕಿನ ಮತಗಟ್ಟೆಗಳ ಅಧಿಕಾರಿಗಳ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತರಬೇತುದಾರರಾದ ನಾಗರಾಜ ಮರೆಣ್ಣವರ ಅವರು, ಮತದಾನದ ಮುನ್ನಾ ದಿನವಾದ ಡಿ.9 ರ ಬೆಳಿಗ್ಗೆ 10 ಗಂಟೆಯಿಂದ ಮತದಾನ ದಿನವಾದ ಡಿ.10 ರ ಸಂಜೆ …

Read More »

ಪರಿಷತ್ತ ಚುನಾವಣೆಯಲ್ಲಿ ವೋಟ್ ಮಾಡುವದು ಹೇಗೆ ಇಲ್ಲಿದೆ ರೂಲ್ಸ್…!!!

ಬೆಳಗಾವಿ,- ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಮತಗಟ್ಟೆ ಏಜೆಂಟರುಗಳು ಚುನಾವಣಾ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಯಾವುದೇ ಗೊಂದಲವಾಗದಂತೆ ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳಾದ ಆರ್. ವೆಂಕಟೇಶ್ ಕುಮಾರ್ ಅವರು ತಿಳಿಸಿದರು. ಚುನಾವಣಾ ಮಾರ್ಗಸೂಚಿಗಳ ಕುರಿತು ನಡೆದ ಸಭೆಯಲ್ಲಿ ಶನಿವಾರ (ಡಿ.4) ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅವರು ಮಾತನಾಡಿದರು. ಚುನಾವಣೆಯ ಸಂದರ್ಭದಲ್ಲಿ ಏಜೆಂಟ್ ಗಳು ಯಾವುದೇ ಗೊಂದಲ ಸೃಷ್ಟಿಸಿಕೊಳ್ಳಬಾರದು ಚುನಾವಣೆಯ ಮಾರ್ಗಸೂಚಿಗಳ ಮಾಹಿತಿ ಪಡೆದು ನಿಯಮಾನುಸಾರ ಕಾರ್ಯ ನಿರ್ವಹಿಸಬೇಕು ಎಂದು …

Read More »

ಸವದತ್ತಿ ಯಲ್ಲಮ್ಮ ಹುಂಡಿಯಲ್ಲಿ ನೋಟಿನ ರಾಶಿ…..!!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ದೇವಿಯ ದರ್ಶನಕ್ಕೆ ಭಕ್ತರ ಮಹಾಪೂರವೇ ಹರಿದು ಬರುತ್ತಿದೆ.ಕೇವಲ ಒಂದೇ ತಿಂಗಳಲ್ಲಿ ದೇವಸ್ಥಾನದ ಹುಂಡಿಯಲ್ಲಿ ನೋಟಿನ ರಾಶಿಯೇ ಸಂಗ್ರಹವಾಗಿದೆ. ಅಕ್ಟೋಬರ್ ಒಂದೇ ತಿಂಗಳಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ 1.20ಕೋಟಿ ಸಂಗ್ರಹವಾಗಿದ್ದು,ಒಂದೂವರೆ ವರ್ಷದ ಬಳಿಕ ಓಪನ್ ಆಗಿದ್ದ ದೇವಸ್ಥಾನದಲ್ಲಿ ದಾಖಲೆ ಮೊತ್ತದ ದೇಣಿಗೆ ಸಂಗ್ರಹವಾಗಿದೆ. ಅಕ್ಟೋಬರ್ ತಿಂಗಳಲ್ಲಿ 15 ಲಕ್ಷ ಮೌಲ್ಯದ ಚಿನ್ನ, 2 ಲಕ್ಷ ಮೌಲ್ಯದ ಬೆಳ್ಳಿ ಕಾಣಿಕೆ ಬಂದಿದೆ.ಈ ಹಿಂದೆ ವರ್ಷಕ್ಕೆ ಸರಾಸರಿ 4 …

Read More »

ರಮೇಶ್ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅಗತ್ಯವಿಲ್ಲ- ಸತೀಶ್

ಬೆಳಗಾವಿ : ರಮೇಶ ಜಾರಕಿಹೊಳಿ ನಮ್ಮ ಪಕ್ಷಕ್ಕೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ಅವರ ಪಕ್ಷದಲ್ಲಿಯೇ ಬಂಡಾಯವಾಗಿ ಸ್ಪರ್ಧೆ ಮಾಡಿದ್ದಾರೆ. ಮೊದಲು ತಮ್ಮ ಪಕ್ಷದ ಬಗ್ಗೆ ವಿಚಾರ ಮಾಡಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿ ಇರುವಂತ ಮತಗಳಲ್ಲಿ ಎರಡು ಸ್ಥಾನ ಗೆಲ್ಲಲ್ಲಿಕ್ಕೆ ಸಾಧ್ಯವಿಲ್ಲ. ಅವರ ಪಕ್ಷದಲ್ಲಿಯೇ ಗೊಂದಲವಿದೆ. ರಮೇಶ್ ಜಾರಕಿಹೊಳಿ ಒಂದು ಲಖನ್ ಜಾರಕಿಹೊಳಿ ಅಥವಾ …

Read More »

ಬೆಳಗಾವಿಯಲ್ಲಿ ಯುವಕನ ಮರ್ಡರ್….

ಬೆಳಗಾವಿ- ಸರಾಯಿ ಕುಡಿದು ಇಬ್ಬರು ಗೆಳೆಯರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಇಂದು ರಾತ್ರಿ ಬೆಳಗಾವಿ ನಗರದ ಹಳೇಯ ಬೆಳಗಾವಿ ನಾಕಾ ಬಳಿ ಇದ್ದ ವೈನ್ ಶಾಪ್ ಗೆ ಗೆಳೆಯರು ಸರಾಯಿ ಕುಡಿಯಲು ಹೋಗಿದ್ದರು ಈ ಸಂಧರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ಇಬ್ಬರು ಪರಸ್ಪರ ಹೊಡೆದಾಡಿದ್ದಾರೆ,ಈ ಹೊಡೆದಾಟದಲ್ಲಿ ಸೂರಜ ಗೌಂಡವಾಡಕರ ಅವನ ತೆಲೆಗೆ ಗಾಯವಾಗಿ ಆತ ಅಸ್ವಸ್ಥನಾಗಿದ್ದಾನೆ. ಕೂಡಲೇ ಆತನನ್ನು ಯಳ್ಳೂರ …

Read More »