Breaking News
Home / Breaking News (page 20)

Breaking News

ಅವರು ದಾನ ಮಾಡಿದ್ದು 17 ಗುಂಟೆ, ಅದರ ಬೆಲೆ 5 ಕೋಟಿ….!!

*ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ* *ಮೂಡಲಗಿಯಲ್ಲಿ ಐದು ಕೋಟಿ ರೂಪಾಯಿ ವೆಚ್ಚದ ಚರ್ಚ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ* *ಚರ್ಚ್ ನಿರ್ಮಾಣಕ್ಕೆ ೧೭ ಗುಂಟೆ ನಿವೇಶನ ದಾನ ಮಾಡಿದ ಮರೆಪ್ಪ ಮರೆಪ್ಪಗೋಳ ದಂಪತಿ* ಮೂಡಲಗಿ- ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಮೂಡಲಗಿಯಂತಹ ಪಟ್ಟಣ ಪ್ರದೇಶದಲ್ಲಿ ದುಡ್ಡು ನೀಡಿದರೂ ನಿವೇಶನಗಳು ಸಿಗದ ಇಂದಿನ ದಿನಗಳಲ್ಲಿ ಚರ್ಚ ನಿರ್ಮಾಣಕ್ಕೆ ೧೭ ಗುಂಟೆ …

Read More »

P I L ರಿಜೆಕ್ಟ್ ಬೆಳಗಾವಿಯ ಜೈ ಕಿಸಾನ್ ಮಾರುಕಟ್ಟೆಗೆ ಬಿಗ್ ರಿಲೀಫ್….!!

ಬೆಳಗಾವಿ- ಬೆಳಗಾವಿಯ ಜೈ ಕಿಸಾನ ಸಗಟು ತರಕಾರಿ ಮಾರುಕಟ್ಟೆ ವಿರುದ್ಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ ತಿರಸ್ಕರಿಸಿದೆ. ಭಾರತೀಯ ಕೃಷಿ ಸಮಾಜ ( ಸಂಯುಕ್ತ) ಅಧ್ಯಕ್ಷ ಸಿದಗೌಡ ಮೋದಗಿ ಮತ್ತು ಇತರ ಐವರು ಕರ್ನಾಟಕ ಹೈಕೋರ್ಟನಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ನಗರಾಭಿವೃದ್ಧಿ ಇಲಾಖೆ, ಜಿಲ್ಲಾಧಿಕಾರಿ, ಬೆಳಗಾವಿ ಮಹಾನಗರ ಪಾಲಿಕೆ, ಕೃಷಿ ಉತ್ಪನ್ನ ಮಾರುಕಟ್ಟೆಸಮಿತಿ ಹಾಗೂ ಕೃಷಿ ಇಲಾಖೆ ಜೈಕಿಸಾನ ಸಗಟು ಮಾರುಕಟ್ಟೆಗೆ ಅಕ್ರಮವಾಗಿ ಅನುಮತಿ ನೀಡಲಾಗಿದೆ ಎಂದು …

Read More »

ವರಿಷ್ಠರು ನನಗೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ- ಸತೀಶ್ ಜಾರಕಿಹೊಳಿ

ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸನ್ನದ್ಧ- ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ- ಮುಂಬರುವ ಲೋಕಸಭಾ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸನ್ನದ್ಧಗೊಂಡಿದೆ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ಲೋಕಸಭಾ ಚುನಾವಣೆ ಇನ್ನೇನು ಬಹಳ ಹತ್ತಿರದಲ್ಲಿದೆ. ನಾವು ಚುನಾವಣೆ ಎದುರಿಸಲು ಸಿದ್ಧರಿದ್ದೇವೆ. ಕಾರ್ಯಕರ್ತರೇ ನಮ್ಮ ಪಕ್ಷದ ಆಸ್ತಿ. ಕಾರ್ಯಕರ್ತರ ಮೇಲೆ ಬಹುದೊಡ್ಡ ಜವಾಬ್ದಾರಿಯಿದೆ. …

Read More »

ಎತ್ತಿನಗಾಡಿಗೆ ವಾಹನ ಡಿಕ್ಕಿ ರೈತಮಹಿಳೆಯ ಸಾವು…

ಬೆಳಗಾವಿ-ತರಕಾರಿ ‌ವಾಹನ- ಎತ್ತಿನ ಗಾಡಿ ‌ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿ,ಎತ್ತಿನ ಬಂಡಿಗೆ ಭೀಕರವಾಗಿತರಕಾರಿ ವಾಹನ ಡಿಕ್ಕಿ ಹೊಡೆದ ಪರಿಣಾಮ,ಎತ್ತಿನ ಗಾಡಿಯಲ್ಲಿ ಹೊಲಕ್ಕೆ ಹೊರಟಿದ್ದ ರೈತ ಮಹಿಳೆ ಸ್ಥಳದಲ್ಲಿ ಸಾವನ್ನೊಪ್ಪಿದ್ದು ನಾಲ್ವರು ಗಾಯಗೊಂಡಿದ್ದಾರೆ. ಬೆಳಗಾವಿ ‌ಜಿಲ್ಲೆಯ ರಾಮದುರ್ಗ ‌ತಾಲೂಕಿನ ಸಾಲಹಳ್ಳಿ ಗ್ರಾಮದಲ್ಲಿ ಈ ‌ಘಟನೆ ನಡೆದಿದೆ.ರಾಮದುರ್ಗ ‌ತಾಲೂಕಿನ ಕಾಮನಕೊಪ್ಪ ಗ್ರಾಮದ ಯಮನವ್ವ ಮಡ್ಡಿ (42) ಮೃತ ರೈತ ಮಹಿಳೆ ಎಂದು ಗುರುತಿಸಲಾಗಿದೆ. ಸುರೇಶ ಮಡ್ಡಿ, ಅಡಿವೆಪ್ಪ ಜೀರಗಾಳ, ಮಂಜುಳಾ ಜೀರಗಾಳ, …

Read More »

ಬೆಳಗಾವಿ ಮೇಯರ್ ಇಲೆಕ್ಷನ್ ನಡೆಯುತ್ತಾ ಇಲ್ವಾ….??

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಅಧಿಕಾರದ ಅವಧಿ ಫೆಬ್ರುವರಿ 5 ಕ್ಕೆ ಮುಕ್ತಾಯಗೊಳ್ಳಲಿದ್ದು ಹೊಸ ಮೇಯರ್ ಆಯ್ಕೆಗೆ ಇನ್ನುವರೆಗೆ ಪ್ರಾದೇಶಿಕ ಆಯುಕ್ತರು ಚುನಾವಣೆಯ ದಿನಾಂಕವನ್ನು ಪ್ರಕಟಿಸಿಲ್ಲ,ಮೇಯರ್ ಇಲೆಕ್ಷನ್ ನಡೆಯುತ್ತಾ ಇಲ್ವಾ ಎನ್ನುವ ಅನುಮಾನ ಈಗ ಶುರುವಾಗಿದೆ. ಮೇಯರ್ ಚುನಾವಣೆಯ ದಿನಾಂಕವನ್ನು ಪ್ರಾದೇಶಿಕ ಆಯುಕ್ತರು ನಿರ್ಧರಿಸುತ್ತಾರೆ.ಚುನಾವಣಾ ಅಧಿಕಾರಿಯಾಗಿರುವ ಅವರು ಈವರೆಗೆ ಅಧಿಸೂಚನೆ ಹೊರಡಿಸಿಲ್ಲ ಇವತ್ತು ಅಥವಾ ನಾಳೆ ಅಧಿಸೂಚನೆ ಹೊರಡುವ ಸಾಧ್ಯತೆಗಳು ಇವೆ ಎಂದು ಹೇಳಲಾಗುತ್ತಿದೆ.ಫೆಬ್ರುವರಿ …

Read More »

ಬೆಳಗಾವಿ ಮಾರುಕಟ್ಟೆಗೆ ಮ್ಯಾಂಗೋ ಎಂಟ್ರಿ….!!

ಬೆಳಗಾವಿ-ಬೆಳಗಾವಿಯ ಮ್ಯಾಂಗೋ ನೆನಪು ಮಾಡಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ,ಪಕ್ಕದ ರತ್ನಾಗಿರಿ ಆಫುಸ್ ಮಾವು ಈಗ ಬೆಳಗಾವಿ ಮಾರುಕಟ್ಟೆಗೆ ಬಂದಿದೆ ಒಂದು ಡಝನ್ ಆಫುಸ್ ಬಾಕ್ಸ್ 7200 ₹ ಗೆ ಮಾರಾಟವಾಗಿದೆ. ಬೆಳಗಾವಿ ಫ್ರುಟ್ ಮಾರ್ಕೆಟ್ಟಿನ ಮಾವಿನ ಹಣ್ಣಿನ ಮಾರಾಟಗಾರ ದೇಸಾಯಿ ಹಾಗೂ ಅಕ್ಷಯ ಚವ್ಹಾಣ ಮತ್ತು ಅಬ್ದುಲ್ ಭಾಯಿ ಅವರ ಅಂಗಡಿಗಳಲ್ಲಿ ಆಪುಸು ಮಾವಿನ ಪರಿಮಳ ಘಮಘಮಿಸುತ್ತಿದೆ. ಮಾರುಕಟ್ಟೆಗೆ ಈಗ ಮಾವು ಬರೋದು ಶುರುವಾಗಿದೆ. ಬೆಳಗಾವಿ ಮಾರುಕಟ್ಟೆಗೆ ಬಂದಿರುವ …

Read More »

ಗೋಕಾಕಿನ ಹಿರಿಯ ನಾಯಕ ಅಲಿ ಭಾಯ್ ಇನ್ನಿಲ್ಲ..

ಗೋಕಾಕ್- ಗೋಕಾಕಿನ ಹಿರಿಯ ಸಮಾಜಸೇವಕ ಮಹ್ಮದಲಿ ಅತ್ತಾರ್ (ಅಲಿ ಭಾಯ್) ಅವರು ಇಂದು ಸಂಜೆ ನಿಧನರಾಗಿದ್ದಾರೆ. ಇಂದು ಬೆಳಗ್ಗೆ ಅಲಿಭಾಯ್ ಅತ್ತಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಸಂಜೆ ಅವರು ನಿಧನರಾಗಿದ್ದಾರೆ. ಮಹ್ಮದಲಿ ಅತ್ತಾರ ಅವರ ಪುತ್ರ ವಿದೇಶದಲ್ಲಿದ್ದು ಅವರು ಗೋಕಾಕಿಗೆ ಮರಳಿದ ನಂತರ,ಶುಕ್ರವಾರ ಬೆಳಗ್ಗೆ ಅಲಿಭಾಯ್ ಅವರ ಅಂತ್ಯಸಂಸ್ಕಾರ ಗೋಕಾಕಿನಲ್ಲಿ ನಡೆಯಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

Read More »

ಆರ್ ಟಿಸಿಗೆ ಆಧಾರ್ ಜೋಡಣೆ ಪ್ರಕ್ರಿಯೆ ಶೀಘ್ರ- ರೆವನ್ಯು ಮಿನಿಸ್ಟರ್…

ಬರ ನಿರ್ವಹಣೆ: ಅಗತ್ಯ ಸಿದ್ಧತೆಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ ಬೆಳಗಾವಿ, : ಕುಡಿಯುವ ನೀರು ಕೊರತೆ ಕಂಡುಬಂದಾಗ ತಕ್ಷಣವೇ ನೀರು ಪೂರೈಸಲು ಅನುಕೂಲವಾಗುವಂತೆ ಖಾಸಗಿ ಕೊಳವೆಬಾವಿಗಳ ಮಾಲೀಕರೊಂದಿಗೆ ಮುಂಚಿತವಾಗಿಯೇ ಒಪ್ಪಂದ ಮಾಡಿಕೊಳ್ಳಬೇಕು. ಪ್ರತಿ ಪಂಚಾಯಿತಿ ಮಟ್ಟದಲ್ಲಿ ಒಂದು ಸಮಿತಿಯನ್ನು ರಚಿಸಿ ಕುಡಿಯುವ ನೀರು ಪೂರೈಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಸಚಿವ ಕೃಷ್ಣ ಭೈರೇಗೌಡ ಸೂಚನೆ ನೀಡಿದರು. ಸುವರ್ಣ ವಿಧಾನಸೌಧದ ಸೆಂಟ್ರಲ್ ಸಭಾಂಗಣದಲ್ಲಿ ಬುಧವಾರ(ಜ.31) ನಡೆದ ಕಂದಾಯ ಇಲಾಖೆಯ …

Read More »

ಮ್ಯಾರೇಜ್ ನಂತರ ಲವ್…ಆಯ್ತು ಡಬಲ್ ಮರ್ಡರ್….!!

ಚಿಕ್ಕೋಡಿ-ಮದುವೆಯಾಗಿ ಕೇವಲ ಮೂರು ತಿಂಗಳಲ್ಲಿ ಪತ್ನಿ ತನ್ನ ಲವರ್ ಜೊತೆಗೆ ಓಡಿ ಹೋಗಿ ಮದುವೆಯಾಗಿದ್ದಳು.ಇದರಿಂದ ಕೆರಳಿದ ಮೊದಲ ಪತಿ ತನ್ನ ಪತ್ನಿ ಮತ್ತು ಆಕೆಯ ಲವರ್ ಎರಡನೇಯ ಗಂಡನನ್ನು ಖಲ್ಲಾಸ್ ಮಾಡಿದ ಘಟನೆ ಅಥಣಿ ತಾಲ್ಲೂಕಿನ ಕೋಕಟನೂರ ಗ್ರಾಮದಲ್ಲಿ ನಡೆದಿದೆ. ಮದುವೆಯಾಗಿ ಕೈ ಕೊಟ್ಟ ಪತ್ನಿ, ಪತ್ನಿ ಹಾಗೂ ಪ್ರಿಯತಮನನ್ನ ಕೊಚ್ಚಿ ಕೊಲೆ ಮಾಡಿದ ಮಾಜಿ ಪತಿ..! ಚಿಕ್ಕೋಡಿ: ಮದುವೆಯಾಗಿ ಕೈ ಕೊಟ್ಟ ಪತ್ನಿ ಹಾಗೂ ಪ್ರಿಯತಮನನ್ನ ಮಾಜಿ ಪತಿ …

Read More »

ಇಂದು ಬೆಳಗಾವಿಯಲ್ಲಿ ಕಂದಾಯ ಸಚಿವರು…!!

ಬೆಳಗಾವಿ- ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ಇಂದು ಬೆಳಗಾವಿ ನಗರಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 12-30 ರಿಂದ 1-00 ಗಂಟೆಯವರೆಗೆ ಬೆಳಗಾವಿಯ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ. ನಂತರ 1-30 ರಿಂದ ಸಂಜೆ 6-00 ಗಂಟೆಯವರೆಗೆ ಸುವರ್ಣ ವಿಧಾನಸೌಧದ ಸೆಂಟ್ರೆಲ್ ಹಾಲ್ ನಲ್ಲಿ ಕಂದಾಯ ಇಲಾಖೆಯ ಪ್ರಗತಿ ಪರಶೀಲನಾ ಸಭೆ ನಡೆಸಲಿದ್ದಾರೆ. ನಭೆ ಮುಗಿದ ಬಳಿಕ ಬೆಂಗಳೂರಿಗೆ ಇಂದು ರಾತ್ರಿ ವಿಮಾನ ಮೂಲಕ ತೆರಳಲಿದ್ದಾರೆ.

Read More »