ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ ತನ್ನ ಗಂಡನನ್ನು ಮುಗಿಸಲು ಊರಿನ ರೌಡಿಗೆ ಸುಫಾರಿ ಕೊಟ್ಟು ಗಂಡನ ಕೊಲೆ ಮಾಡಿಸಿ ಇಪ್ಪತ್ತು ವರ್ಷಗಳ ಸುಖ ಸಂಸಾರಕ್ಕೆ ಬತ್ತಿ ಇಟ್ಡ ಘಟನೆ ಬೆಳಗಾವಿ ಜಿಲ್ಲೆಯ ನೇಸರಗಿ ಠಾಣಾ ವ್ಯಾಪ್ತಿಯ ವಣ್ಣೂರಿನಲ್ಲಿನಡೆದಿದೆ.ನೀಲಮ್ಮನ ಗೆಳೆಯ
ಸುಪಾರಿ ತಗೊಂಡು ಮರ್ಡರ್ ಮಾಡಿದ ರೌಡಿ
ಕೊಲೆಯಾದ ಗಂಡ
ಅದೊಂದು ಹತ್ತೊಂಬತ್ತು ವರ್ಷದ ಸುಂದರ ಸಂಸಾರ ಮೇಲಾಗಿ ಮೂರು ಮಕ್ಕಳು ಕೂಡ ಇದ್ವು. ಈ ನಡುವೆ ಹೆಂಡತಿ ಧರ್ಮಸ್ಥಳ ಸಾಲದ ಸಂಘದಲ್ಲಿದ್ದು ಸಾಲ ಕೊಡಿಸುವುದು ಮರಳಿಸಿ ಕೊಡಿಸುವ ಕೆಲಸ ಮಾಡುತ್ತಿದ್ದಳು. ಇದೇ ವೇಳೆ ಪರಿಚಯ ಆಗಿದ್ದೇ ಅದೊಬ್ಬ ಚಿಕ್ಕ ವಯಸ್ಸಿನ ಯುವಕ.ಆ ಯುವಕನ ಜೊತೆ ಸೇರಿ ಊರಿನ ರೌಡಿಗೆ ಸುಫಾರಿ ಕೊಟ್ಟು ಪಿಶಾಚಿ ಹೆಂಡತಿ ಗಂಡನ ಮರ್ಡರ್ ಮಾಡಿಸಿದ ಪ್ರಕರಣವನ್ನು ನೇಸರಗಿ ಠಾಣೆಯ ಪೋಲೀಸರು 24 ಗಂಟೆಯ ಒಳಗೆ ಪ್ರಕರಣವನ್ನು ಭೇದಿಸಿ ಮೂವರು ಆರೋಪಿಗಳನ್ನು ಜೈಲಿಗೆ ಕಳಿಸಿದ್ದಾರೆ.
ದಿಕ್ಕಿಲ್ಲದ ಮನೆ, ಆಸರೆ ಇಲ್ಲದಂತಾದ ಮಕ್ಕಳು, ತಂದೆ ಮಸಣ ಸೇರಿದ್ರೇ ತಾಯಿ ಜೈಲುಪಾಲಾಗಿ ಮೂರು ಮಕ್ಕಳು ಅನಾಥರಾಗಿದ್ದಾರೆ. ಅಷ್ಟಕ್ಕೂ ಇಂತಹದ್ದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಠಾಣೆ ವ್ಯಾಪ್ತಿಯ ವಣ್ಣೂರ ಗ್ರಾಮದಲ್ಲಿ.
ವ್ಯಕ್ತಿಯ ಹೆಸರು ನಿಂಗಪ್ಪ ಅರವಳಿ ಅಂತಾ ನಲವತ್ತೊಂದು ವರ್ಷದ ಈತ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ನೀಲಮ್ಮ ಅನ್ನೋಳ ಮದುವೆಯಾಗಿದ್ದ ಇವರ ಸುಂದರ ಸಂಸಾರಕ್ಕೆ ಮೂರು ಮಕ್ಕಳು ಕೂಡ ಸಾಕ್ಷಿಯಾಗಿದ್ದವು. ಕೂಲಿ ಕೆಲಸ ಮಾಡ್ತಿದ್ದ ನಿಂಗಪ್ಪ ನಿತ್ಯವೂ ಕುಡಿದು ಬರುವುದು ಮಾಮೂಲಾಗಿತ್ತು. ಇದೆಲ್ಲದರ ನಡುವೆ ಮೂರು ಮಕ್ಕಳ ಪೈಕಿ ಓರ್ವ ಮಗಳು ಮದುವೆ ವಯಸ್ಸಿಗೆ ಬಂದಿದ್ದು ಹೀಗಾಗಿ ಖಾಲಿ ಕೂಡುವ ಬದಲು ತಾನೂ ಕೆಲಸ ಮಾಡಿದ್ರಾಯ್ತು ಅಂತಾ ಧರ್ಮಸ್ಥಳ ಸಂಘದ ಕೆಲಸ ಮಾಡಲು ಶರು ಮಾಡ್ತಾಳೆ. ಡೈರಿ ಮೆಂಟೆನ್ ಮಾಡೋದು, ಸಾಲ ಕೊಡಿಸುವುದು ವಾಪಾಸ್ ಇಸಿದುಕೊಳ್ಳುವುದು ಮಾಡ್ತಾರೆ. ಆಗಾಗ ಪಕ್ಕದೂರಿನಲ್ಲಿ ಸಂಘದ ವತಿಯಿಂದ ಸಭೆಗಳು ನಡೆದ್ರೆ ಅಲ್ಲಿಗೂ ಹೋಗುವುದು ಬರುವುದು ನೀಲಮ್ಮ ಮಾಡ್ತಿರ್ತಾಳೆ. ಹೀಗೆ ಜೀವನ ನಡೆಯುವಾಗಲೇ ಮೊನ್ನೆ ರಾತ್ರಿ ಮನೆ ಕಟ್ಟೆ ಮೇಲೆ ಮಲಗಿದ್ದ ನಿಂಗಪ್ಪನನ್ನ ಯಾರೋ ದುಷ್ಕರ್ಮಿಗಳು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಎಸ್ಕೇಪ್ ಆಗಿರುತ್ತಾರೆ. ಮನೆಯ ಒಳಗೆ ಮಲಗಿದ್ದ ಹೆಂಡತಿ ನೀಲಮ್ಮ ಹಾಗೂ ಮಕ್ಕಳು ಬೆಳಗ್ಗೆ ಎದ್ದು ನೋಡಿ ಗಾಬರಿಯಾಗಿದ್ದರು. ಕೂಡಲೇ ಗ್ರಾಮಸ್ಥರು ನೇಸರಗಿ ಠಾಣೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ರೂ.
ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಶವವನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದರು. ಇತ್ತ ತನಿಖೆ ಶುರು ಮಾಡಿದ ಪೊಲೀಸರಿಗೆ ಅದೊಂದು ವಿಚಾರ ತಿಳಿದು ದೂರನ್ನ ಹೆಂಡತಿ ಬದಲಿಗೆ ಮೃತನ ಸಹೋದರನಿಂದ ಪಡೆದು ತನಿಖೆ ಶುರು ಮಾಡಿದ್ದರು.
ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ರೂ. ಇತ್ತ ಊರಲ್ಲಿ ಅಂತ್ಯಸಂಸ್ಕಾರ ಕೂಡ ಕುಟುಂಬಸ್ಥರು ನೆರವೇರಿಸಿದ್ದರು. ಇನ್ನೂ ಘಟನೆ ನಡೆದ ದಿನ ಹೆಂಡತಿ ನೀಲಮ್ಮ ಯಾರ ಜೊತೆಗೆ ಪೋನ್ ನಲ್ಲಿ ನಿರಂತರವಾಗಿ ಮಾತಾಡಿದ್ಲೂ ಅಂತಾ ತೆಗೆದು ನೋಡಿದಾಗ ಗೊತ್ತಾಗಿದ್ದು ಇದೇ ಊರಿನ ಮಹೇಶ್ ಗೂಳನ್ನವರ್ ಅನ್ನೋ ಯುವಕ ಮತ್ತು ಗಜಮನಾಳ ಗ್ರಾಮದ ಯಲ್ಲಪ್ಪ ಕೋನಿನ ಅಂತಾ. ಕೂಡಲೇ ಇಬ್ಬರನ್ನೂ ತಂದು ವಿಚಾರಣೆ ನಡೆಸಿದಾಗ ಗೊತ್ತಾಗಿದ್ದು ಸುಪಾರಿಯ ಹತ್ಯೆ ವಿಷಯ. ಇಲ್ಲಿ ಹೆಂಡತಿ ನೀಲಮ್ಮಳೆ ಕೊಲೆ ಮಾಡಲು ಹೇಳಿದ್ದಕ್ಕೆ ಮಾಡಿದ್ದಾಗಿ ಸುಪಾರಿ ಪಡೆದ ಯಲ್ಲಪ್ಪ ಹೇಳಿದ್ದಾನೆ. ಇತ್ತ ಮಹೇಶ್ ನನ್ನ ವಿಚಾರಿಸಿದಾಗ ಆಂಟಿ ಜೊತೆಗೆ ಲವ್ ಆಗಿದ್ದನ್ನ ಹಾಗೂ ನೀಲಮ್ಮ ಹಾಗೂ ಆತ ಇಬ್ಬರು ಸೇರಿಕೊಂಡೇ ಕೊಲೆಗೆ ಪ್ಲ್ಯಾನ್ ಮಾಡಿದ್ದಾಗಿ ಬಾಯಿ ಬಿಟ್ಟಿದ್ದಾನೆ.
ಇಲ್ಲಿ ನೀಲಮ್ಮ ಧರ್ಮಸ್ಥಳ ಸಂಘದಲ್ಲಿ ಓಡಾಡುವಾಗ ಅಲ್ಲೇ ಕೆಲಸ ಮಾಡ್ತಿದ್ದ ಪಕ್ಕದ ಕಾಲೋನಿಯ 27ವರ್ಷದ ಮಹೇಶ್ ಗೂಳನ್ನವರ್ ಪರಿಚಯ ಆಗಿದ್ದ. ಆರಂಭದಲ್ಲಿ ಪರಿಚಯ ಆಗಿದ್ದ ಇಬ್ಬರ ನಡುವೆ ಎರಡು ವರ್ಷದ ಹಿಂದೆ ಈ ಪರಿಚಯ ಅನೈತಿಕ ಸಂಬಂಧವಾಗಿ ಮಾರ್ಪಡುತ್ತೆ. ಈ ವಿಚಾರ ಕೆಲ ದಿನಗಳ ಹಿಂದೆ ಗಂಡ ನಿಂಗಪ್ಪನಿಗೆ ಗೊತ್ತಾಗುತ್ತದೆ. ಇದರಿಂದ ನಿತ್ಯ ಕುಡಿದು ಬಂದು ಹೆಂಡತಿ ಜೊತೆಗೆ ಜಗಳ ಮಾಡುವುದು ಹೊಡೆಯುವದನ್ನ ನಿಂಗಪ್ಪ ಮಾಡಲಾರಂಭಿಸುತ್ತಾನೆ. ಆಗ ಸಾಕಾಗಿ ಹೋದ ನೀಲಮ್ಮ ಈ ವಿಚಾರವನ್ನ ಮಹೇಶ್ ಜೊತೆಗೆ ಚರ್ಚೆ ಮಾಡ್ತಾಳೆ. ಈ ವೇಳೆ ಆತನ ಕಥೆ ಮುಗಿಸೋಣ ಅಂತಾ ಪ್ಲ್ಯಾನ್ ಮಾಡಿ ಪಕ್ಕದೂರಿನ ಯಲ್ಲಪ್ಪನಿಗೆ ಹೋಗಿ ಮಹೇಶ್ ಮಾತಾಡ್ತಾನೆ. ನಾಲ್ಕು ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಯಲ್ಲಪ್ಪನನ್ನ ಒಂದೂವರೆ ಲಕ್ಷಕ್ಕೆ ಒಪ್ಪಿಸಿ ಅಡ್ವಾನ್ ಆಗಿ 75ಸಾವಿರ ಹಣ ಕೊಟ್ಟು ಬರ್ತಾರೆ. ಇದಾದ ಬಳಿಕ ಮೊನ್ನೆ ಗಲಾಟೆ ಹೋರಾಗಿದೆ ಆಗ ಆಕ್ರೋಶಗೊಂಡು ಯಲ್ಲಪ್ಪ ಹಾಗೂ ಮಹೇಶ್ ಗೆ ನೀಲಮ್ಮ ಕರೆ ಮಾಡಿ ಕೊಲೆ ಮಾಡುವಂತೆ ಹೇಳ್ತಾಳೆ. ಆಗ ಒಬ್ಬನೇ ಬೈಕ್ ಮೇಲೆ ಬಂದ ಯಲ್ಲಪ್ಪ ಕಟ್ಟೆ ಮೇಲೆ ಮಲಗಿದ್ದ ನಿಂಗಪ್ಪನನ್ನ ಕೊಂದು ಪರಾರಿ ಆಗಿದ್ದಾಗಿ ಒಪ್ಪಿಕೊಂಡಿದ್ದಾನೆ.
ಸದ್ಯ ಪ್ರಕರಣ ಸಂಬಂಧ ಮೂರು ಜನರನ್ನ ಬಂಧಿಸಿ ಸ್ಥಳ ಮಹಜರು ಮಾಡಿ ಆರೋಪಿಗಳನ್ನ ಜೈಲಿಗಟ್ಟುವ ಕೆಲಸ ನೇಸರಗಿ ಪೊಲೀಸರು ಮಾಡಿದ್ದಾರೆ. ಇತ್ತ ಮದುವೆ ವಯಸ್ಸಿಗೆ ಬಂದ ಮಗಳು ಸೇರಿ ಮೂರು ಮಕ್ಕಳು ಇದೀಗ ಅನಾಥರಾಗಿದ್ದಾರೆ.