Breaking News

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ.

ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ ಮುನಿ ಮಹಾರಾಜರ ಸಮಾಧಿ ಮರಣ, ನ. 13 ರಂದು ಯಮಸಲ್ಲೇಖ ವೃತ ಸ್ವೀಕರಿಸಿದ್ದ ಜ್ಞಾನೇಶ್ವರ ಮುನಿ ಮಹಾರಾಜರು,ಎಂಟು ದಿನಗಳ ಬಳಿಕ ನಿನ್ನೆ ಸಂಜೆ 5 ಸಮಾಧಿ ಮರಣ ಹೊಂದಿದ್ದಾರೆ.

ಜ್ಞಾನೇಶ್ವರ ಮುನಿ ಮಹಾರಾಜರು,ದೇವಲಾಪುರದ ಅಷ್ಟಮ ನಂದೀಶ್ವರ ಕ್ಷೇತ್ರದ ಸಂಸ್ಥಾಪಕರಾಗಿದ್ದರು. ಇಂದು ಬೆಳಗ್ಗೆ 11 ರಿಂದ ಮುನಿಗಳ ಅಂತಿಮ ದರ್ಶನದ ಜೊತೆಗೆ ಕ್ರಿಯಾದಿ ವಿಧಿವಿಧಾನಗಳು ಆರಂಭವಾಗಲಿವೆ.ಸಂಜೆ 5 ಕ್ಕೆ ಸಹಸ್ರಾರು ಭಕ್ತಗಣದ ಸಮ್ಮುಖದಲ್ಲಿ ದೇವಲಾಪುರ ಕ್ಷೇತ್ರದಲ್ಲಿ ಮುನಿಗಳ ಅಂತ್ಯಕ್ರಿಯೆ ನಡೆಯಲಿದೆ.ದೇವಲಾಪುರದಲ್ಲಿ ಜ್ಞಾನತೀರ್ಥ ವಿದ್ಯಾಪೀಠ ಶಿಕ್ಷಣ ಸ್ಥಾಪಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಟ್ಟಿರುವ ಮಹಾರಾಜರು,300 ಕ್ಕೂ ಅಧಿಕ ಮಕ್ಕಳಿಗೆ ಲೌಕೀಕ ಶಿಕ್ಷಣ ಜೊತೆಗೆ ಧಾರ್ಮಿಕ, ಮೌಲ್ಯ ಶಿಕ್ಷಣ ನೀಡಿದ್ದಾರೆ.

ಕುಲಭೂಷನ ಅಲ್ಪಸಂಖ್ಯಾತರ ಕ್ರೆಡಿಟ್ ಸೊಸೈಟಿ ಸ್ಥಾಪಿಸಿ ಗ್ರಾಮೀಣ ಜನತೆಗೆ ಅನುಕೂಲ ಮಾಡಿದ್ದಾರೆ.ಧಾರವಾಡ, ಬೆಳಗಾವಿಯಲ್ಲಿ ನೂರಕ್ಕೂ ಅಧಿಕ ಜೀನಮಂದಿರ ಕಟ್ಟಿಸಿರುವ ಮುನಿಗಳು,ಧಾರವಾಡ ತಾಲೂಕಿನ ಗರಗ ಗ್ರಾಮದ ಬಡ ಕುಟುಂಬದಲ್ಲಿ 12 ಜುಲೈ 1941ರಲ್ಲಿ ಜನಿಸಿದ್ದರು.

ಸ್ವಸಾಧನೆ ಮೂಲಕ ತಹಶಿಲ್ದಾರ್ ರಾಗಿ ಜನಸೇವೆ ಮಾಡಿರುವ ಜ್ಞಾನೇಶ್ವರ ಮುನಿಗಳು,ನಿವೃತ್ತಿ ನಂತರ ಮುನಿ ಧಿಕ್ಷೆ ಪಡೆದು ಲೋಕಕಲ್ಯಾಣಕ್ಕಾಗಿ ಜೀವನ ಸಮರ್ಪಿಸಿಕೊಂಡಿದ್ದರು. 2000ರಲ್ಲಿ ಬಾಹುಬಲಿ ಮುನಿಮಹಾರಾಜರಿಂದ ಬ್ರಹ್ಮಚರ್ಯ ಧಿಕ್ಷೆ ಪಡೆದ ಅವರು,9 ನವೆಂಬರ್ 2011 ರಲ್ಲಿ ದಿಗಂಬರ ಮುನಿ ಧಿಕ್ಷೆ ಪಡೆದಿದ್ದರು. ಅಪಾರ ಭಕ್ತ ಸಮೂಹದ ಸಮ್ಮುಖದಲ್ಲಿ ಮುನಿಗಳ ಅಂತ್ಯಕ್ರಿಯೆ ನಡೆಯಲಿದೆ.

Check Also

ವಿಧಾನಸಭೆಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದ ಪ್ರತಿಧ್ವನಿ

ಬೆಳಗಾವಿ – ವಿಧಾನಸಭೆಯಲ್ಲಿ ಮೊದಲ ದಿನವೇ ಪಂಚಮಸಾಲಿ ಮೀಸಲಾತಿ ಹೋರಾಟ ಪ್ರತಿಧ್ವನಿಸಿತುವಿಧಾನಸಭೆಯಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಿದ ಬಳಿಕ ಸಭಾದ್ಯಕ್ಷರು …

Leave a Reply

Your email address will not be published. Required fields are marked *