Breaking News

ಇಂದು ರಾಜ್ಯಾದ್ಯಂತ ವಕ್ಫ್ ಬೋರ್ಡ್ ಚುನಾವಣೆ, ಬೆಳಗಾವಿಯಲ್ಲಿ ಮತದಾನ.

ಬೆಳಗಾವಿ – ಬಹು ವರ್ಷಗಳ ನಂತರ ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ವಕ್ಫ್ ಬೋರ್ಡ್ ಚುನಾವಣೆ ನಡೆಯುತ್ತಿದೆ. ಬೆಳಗಾವಿ ಸೇರಿದಂತೆ ರಾಜ್ಯದ ನಾಲ್ಕು ವಿಭಾಗಗಳಲ್ಲಿ ಇಂದು ಮತದಾನ ನಡೆಯಲಿದೆ. ಬೆಳಗಾವಿ ವಿಭಾಗದ ಮತದಾನ ಬೆಳಗಾವಿ ನಗರದ ರೀಜನಲ್ ಕಮಿಷ್ನರ್ ಕಚೇರಿಯಲ್ಲಿ ನಡೆಯಲಿದೆ.

ಈಗಾಗಲೇ ಸಂಸದ,ಶಾಸಕಾಂಗ ಮತ್ತು ಬಾರ್ ಕೌನ್ಸಿಲ್ ವಿಭಾಗದ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ‌. ಮುತವಲ್ಲಿ ವಿಭಾಗದ ಎರಡು ಮಹತ್ವದ ಸ್ಥಾನಗಳಿಗೆ ಇಂದು ಮತದಾನ ನಡೆಯಲಿದ್ದು, ಈ ಚುನಾವಣೆ ಸಚಿವ ಜಮೀರ್ ಅಹ್ಮದ್ ಅವರ ಅಸ್ತಿತ್ವದ ಪ್ರಶ್ನೆಯಾಗಿದೆ.ಯಾಕಂದ್ರೆ ಸುನ್ನೀ ಜಮಾತಿನ ಪ್ರಮುಖ ಮುಸ್ಲಿಂ ಗುರುಗಳ ವಿರುದ್ಧವೇ ಸಚಿವ ಜಮೀರ್ ಅಹ್ಮದ್ ಆಪ್ತನೊಬ್ಬ ಸ್ಪರ್ದೆ ಮಾಡಿರುವ ವಿಚಾರ ಮುಸ್ಲಿಂ ಸಮಾಜದ ಕೆಂಗೆಣ್ಣಿಗೆ ಗುರಿಯಾಗಿದೆ.

ಗುಲ್ಬರ್ಗಾದ ಹಜರತ್ ಖ್ವಾಜಾ ಬಂದೇ ನವಾಜ್ ದರ್ಗಾ ದಕ್ಷಿಣ ಭಾರತದ ದೊಡ್ಡ ದರ್ಗಾ ಈ ದರ್ಗಾ ಕೋಟ್ಯಾಂತರ ಭಕ್ತರನ್ನು ಹೊಂದಿದ್ದು ಈ ದರ್ಗಾದ ವಂಶಸ್ಥರಾದ ಸಜ್ಜಾದೇ ನಶೀನ್ ಸಯ್ಯದ ಮಹ್ಮದ್ ಅಲಿ ಹುಸೇನಿ ಅವರ ವಿರುದ್ಧ ಸಚಿವ ಜಮೀರ್ ಅಹ್ಮದ್ ಆಪ್ತ, ಚಿತ್ರದುರ್ಗದ ಅನ್ವರ್ ಭಾಷಾ ಸ್ಪರ್ದೆ ಮಾಡಿದ್ದಾರೆ. ಜೊತೆಗೆ ಇನ್ನೂ ಮೂವರು ಜನ ಅಭ್ಯರ್ಥಿಗಳು ಸ್ಪರ್ದೆ ಮಾಡಿದ್ದಾರೆ.

ವಕ್ಫ್ ಬೋರ್ಡಿನ ಚುನಾವಣೆ ನಡೆಯುವದಿಲ್ಲ ಪ್ರತಿಬಾರಿಯೂ ಅವಿರೋಧ ಆಯ್ಕೆ ನಡೆಯುತ್ತದೆ. ಮುಸ್ಲಿಂ ಸಮಾಜದ ಪ್ರಸಿದ್ಧ ದರ್ಗಾದ ಧರ್ಮಗುರುಗಳು ಈ ಸ್ಥಾನದ ಆಕಾಂಕ್ಷಿಗಳಾಗಿದ್ದಾಗ ಸಚಿವ ಜಮೀರ್ ಅಹ್ಮದ್ ಅವರು ಮಧ್ಯಸ್ಥಿಕೆ ವಹಿಸಿ ಅವಿರೋಧ ಆಯ್ಕೆ ಮಾಡಬಹುದಿತ್ತು ಆದ್ರೆ ತಮ್ಮ ಆಪ್ತನನ್ನು ಮುಸ್ಲಿಂ ಧರ್ಮಗುರುಗಳ ವಿರುದ್ಧ ಕಣಕ್ಕಿಳಿಸಿರು ವಿಚಾರ ಮುಸ್ಲಿಂ ಸಮಾಜದ ಕೆಂಗೆಣ್ಣಿಗೆ ಗುರಿಯಾಗಿದೆ.

ಗುಲ್ಬರ್ಗಾದ ಪ್ರಸಿದ್ದ ಧರ್ಮಗುರುಗಳಾದ ಸಜ್ಜಾದೇ ನಶೀನ್ ಸಯ್ಯದ್ ಮಹ್ಮದ್ ಅಲಿ ಹುಸೇನಿ ಅವರನ್ನು ಗೆಲ್ಲಿಸಲು ಸುನ್ನೀ ಜಮಾತಿನ ಎಲ್ಲ ಧರ್ಮಗುರುಗಳುವ ಒಂದಾಗಿ ರಾಜ್ಯಾದ್ಯಂತ ಪ್ರಚಾರ ಮಾಡಿದ್ದಾರೆ. ಸಿಎಂ ಇಬ್ರಾಹಿಂ ರೋಷನ್ ಬೇಗ್ ಸೇರಿದಂತೆ ರಾಜ್ಯದ ಹಲವಾರು ಜನ ನಾಯಕರು ಸಯ್ಯದ್ ಮಹ್ಮದ್ ಅಲಿ ಹುಸೇನಿ ಅವರನ್ನು ಬೆಂಬಲಿಸಿ ರಾಜ್ಯದಲ್ಲಿ ಸಂಚರಿಸಿ ಅವರ ಪರವಾಗಿ ಮತಯಾಚಿಸಿದ್ದಾರೆ. ಸಯ್ಯದ್ ಮಹ್ಮದಲಿ ಹುಸೇನಿ ಅವರು ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ ಅನೇಕ ಪದವಿಗಳನ್ನು ಪಡೆದಿದ್ದಾರೆ.

ಮುತವಲ್ಲಿ ವಿಭಾಗದ ಎರಡು ಸ್ಥಾನಗಳಿಗೆ ಇಂದು ಮತದಾನ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಆದಾಯವಿರುವ ವಕ್ಫ್ ಸಂಸ್ಥೆಗಳ ಮುತವಲ್ಲಿಗಳು ಈ ಚುನಾವಣೆಯಲ್ಲಿ ಮತಚಲಾಯಿಸುತ್ತಾರೆ ಬೆಳಗಾವಿ ಜಿಲ್ಲೆಯಲ್ಲಿ 59 ಮತದಾರಿದ್ದಾರೆ.ಧಾರವಾಡದಲ್ಲಿ 39, ವಿಜಾಪೂರ್ 111 ಬಾಗಲಕೋಟೆ 33 ಮತ್ತು ಕಾರವಾರ 15 ಹಾವೇರಿ 78 ಗದಗನಲ್ಲಿ 17 ಜನ ಮತದಾರರಿದ್ದು ಅವರೆಲ್ಲರೂ ಬೆಳಗಾವಿ ಆರ್ ಸಿ ಕಚೇರಿಯಲ್ಲೇ ಮತದಾನ ಮಾಡುತ್ತಾರೆ.

ಹಲವಾರು ವಿಚಾರಗಳಲ್ಲಿ ವಿವಾದಕ್ಕೆ ಕಾರಣರಾಗಿರುವ ಸಚಿವ ಜಮೀರ್ ಅಹ್ಮದ್ ಅವರು ವಕ್ಫ್ ಚುನಾವಣೆಯಲ್ಲೂ ಎಡವಟ್ಟು ಮಾಡಿಕೊಂಡಿದ್ದು ವಕ್ಫ್ ಚುನಾವಣೆಯೂ ಸಹ ಜಮೀರ್ ಅಹ್ಮದ್ ಅವರ ಅಸ್ತಿತ್ವದ ಪ್ರಶ್ನೆಯಾಗಿದ್ದು ಇಂದು ಬಿರುಸಿನ ಮತದಾನ ನಡೆಯಲಿದೆ.

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *