Breaking News
Home / Breaking News (page 40)

Breaking News

ಲಾರಿಯೊಳಗ ಏನೇನ್ ಐತಿ ಅದು ಇವತ್ತ್ ಓಪನ್ ಆಗತೈತಿ..!!

ಬೆಳಗಾವಿ- ನಿನ್ನೆ ಮದ್ಯರಾತ್ರಿ ಗೋವಾ- ಬೆಳಗಾವಿ ಮಾರ್ಗದಲ್ಲಿ ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದಾರೆ. ಬೆಂಜ್ ಲಾರಿಯಲ್ಲಿ ಸುತ್ತಮುತ್ತಲು ಫ್ಲೈವುಡ್ ತುಂಬಿ ಲಾರಿ ತುಂಬೆಲ್ಲಾ ಮದ್ಯದ ಬಾಟಲಿಗಳನ್ನೇ ತುಂಬಿ,ಗೋವಾದಿಂದ ಬೆಳಗಾವಿ ಕಡೆಗೆ ಬರುತ್ತಿದ್ದ ಲಾರಿಯನ್ನು ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಈ ಲಾರಿ ತುಂಬೆಲ್ಲಾ ಗೋವಾ ಎಣ್ಣೆ ತುಂಬಿಕೊಂಡಿದ್ದು ಈ ಲಾರಿಯನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ಈವರೆಗೆ ಓಪನ್ ಮಾಡಿಲ್ಲ.ಇಂದು ಶನಿವಾರ 11-45 ಗಂಟೆಗೆ ಸಮಯಕ್ಕೆ …

Read More »

ಇಂದು ಬೆಳಗಾವಿಯಲ್ಲಿ IAS ಮತ್ತು KAS ತರಬೇತಿ…

ಬೆಳಗಾವಿ- ಬೆಳಗಾವಿ,ಜಿಲ್ಲಾಡಳಿತ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಇಂದು ಶನಿವಾರ (ಸೆ.2) ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಐ.ಎ.ಎಸ್ ಹಾಗೂ ಕೆ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿಗಳಿಗೆ ಉಚಿತ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ. ಆಸಕ್ತರು ಕಾರ್ಯಾಗಾರದ ಲಾಭ ಪಡೆದುಕೊಳ್ಳಿ. ***

Read More »

ಮಹಾರಾಷ್ಟ್ರದ, ಕಿಚ್ಚಿಗೆ ಬೆಂಕಿಗಾಹುತಿಯಾದ, ನಮ್ಮ ಬಸ್‌…!!

ಬೆಳಗಾವಿ-ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಕಿಚ್ಚಿಗೆ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿಗಾಹುತಿಯಾದ ಘಟನೆ,ಪಕ್ಕದ ಮಹಾರಾಷ್ಟ್ರದಲ್ಲಿ ನಡೆದಿದೆ. ಔರಂಗಾಬಾದ್ – ಹುಬ್ಬಳ್ಳಿ ಮಾರ್ಗದ ಕರ್ನಾಟಕ ಸಾರಿಗೆ ಬಸ್‌ಗೆ ಬೆಂಕಿ ಹಂಚಿರುವ ದುಷ್ಕರ್ಮಿಗಳು,ಮಹಾರಾಷ್ಟ್ರದ ವಡಿಗೋದ್ರಿ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಸ್ ಗೆ ಬೆಂಕಿ ಹಚ್ಚಿದ್ದಾರೆ.ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯ ಅಂಬಡ್ ತಾಲೂಕಿನ ವಡಿಗೋದ್ರಿ ಗ್ರಾಮದ ಹದ್ದಿಯಲ್ಲಿ ಈ ಘಟನೆ ನಡೆದಿದೆ. ಮರಾಠಾ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದ್ದು,ಶಿಕ್ಷಣ ಮತ್ತು ಉದ್ಯೋಗದಲ್ಲಿ …

Read More »

ಬೆಳಗಾವಿ: ಕಾಂಗ್ರೆಸ್ ಟಿಕೆಟ್ ಗಾಗಿ ಕಾಣದ ” ಕೈ”ಗಳ ಕಸರತ್ತು..!!

ಬೆಳಗಾವಿ- ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ ಗಾಗಿ ತೀವ್ರ ಕಸರತ್ತು ನಡೆಯುತ್ತಿದೆ.ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ದೆ ಮಾಡಲು ಕಾಂಗ್ರೆಸ್ ಟಿಕೆಟ್ ಗಾಗಿ ಇಬ್ಬರು ನಾಯಕರು ಪ್ರಯತ್ನ ಮಾಡುತ್ತಿರುವ ವಿಚಾರ ಈಗ ಬೆಳಗಾವಿ ಜಿಲ್ಲೆಯಲ್ಲಿ ಚರ್ಚೆಗೆ ಅಸ್ತ್ರವಾಗಿದೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಯುವ ನಾಯಕ ಕಿರಣ ಸಾಧುನವರ,ಮೃನಾಲ ಹೆಬ್ಬಾಳಕರ,ಅವರ ಹೆಸರು ಕೇಳಿ ಬರುತ್ತಿರುವ ಬೆನ್ನಲ್ಲಿಯೇ ಈಗ ಎರಡು ಹೊಸ ಮುಖಗಳು ಎಂಟ್ರಿಯಾಗಿವೆ.ವಿಧಾನ ಪರಿಷತ್ತ ಸದಸ್ಯ ನಾಗರಾಜ್ …

Read More »

ಬಸ್ಸುಗಳಲ್ಲಿ ಯುಪಿಐ ಮೂಲಕ ಟಿಕೆಟ್……!!

ಹುಬ್ಬಳ್ಳಿ: ಸಾರ್ವಜನಿಕ ಸಾರಿಗೆಯನ್ನು ಮತ್ತಷ್ಟು ಪ್ರಯಾಣಿಕ ಸ್ನೇಹಿಯಾಗಿಸಲು ಹಾಗೂ ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸಂಸ್ಥೆಯ ಬಸ್ಸುಗಳಲ್ಲಿ ಯುಪಿಐ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ವಾ.ಕ.ರ.ಸಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ರವರ ಮಾರ್ಗದರ್ಶನದಲ್ಲಿ ಯುಪಿಐ ಮೂಲಕ ಹಣ ಪಾವತಿಸಿ ಪ್ರಯಾಣದ ಟಿಕೆಟ್ ಪಡೆಯುವ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ನಗರದ ಗೋಕುಲ ರಸ್ತೆಯಲ್ಲಿರುವ ಹೊಸ ಬಸ್ ನಿಲ್ದಾಣದಲ್ಲಿ ಹಿರಿಯ ಅಧಿಕಾರಿಗಳು …

Read More »

ಯುವಕನ ಮರ್ಡರ್ ಪೋಲೀಸರಿಗೆ ಆರೋಪಿಗಳ ಸುಳಿವು.

ಬೆಳಗಾವಿ–ಇತ್ತೀಚಿಗೆ ಬೆಳಗಾವಿ ನಗರದ ಶಿವಬಸವ ನಗರದ ಸ್ಪಂದನ ಆಸ್ಪತ್ರೆ ಬಳಿ ಮೂವರು ಜನ ಯುವಕರು ಬೈಕ್ ಮೇಲೆ ಬಂದು ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಹಂತಕರ ಬಗ್ಗೆ ಪೋಲೀಸರಿಗೆ ಸುಳಿವು ಸಿಕ್ಕಿದೆ ಎಂದು ತಿಳಿದು ಬಂದಿದೆ. ಬೆಳಗಾವಿಯ ನಾಗರಾಜ್ ಗಾಡಿವಡ್ಡರ್ ಎಂಬ ಯುವಕಕನ್ನು ಮೊನ್ನೆ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಮಾಳಮಾರುತಿ ಠಾಣೆಯ ಪೋಲೀಸರು ತ್ವರಿತಗತಿಯ ವಿಚಾರಣೆ ಮಾಡಿ ಆರೋಪಿಗಳನ್ನು ಪತ್ತೆ ಮಾಡಿದ್ದಾರೆ …

Read More »

ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ,ಮಗ,ಇಬ್ಬರ ದಾರುಣ ಸಾವು…

ಬೆಳಗಾವಿ-ಬೆಳಗಾವಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗ ದಾರುಣವಾಗಿ ಸಾವನ್ನೊಪ್ಪಿದ ಘಟನೆ,ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ. ಪ್ರಭು ಹುಂಬಿ(69) ಮಂಜುನಾಥ ಹುಂಬಿ(29) ಮೃತ ದುರ್ದೈವಿಗಳಾಗಿದ್ದಾರೆ.ಮನೆ ಮುಂದಿರುವ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ಇಬ್ಬರು ಸಾವನ್ನೊಪ್ಪಿದ್ದಾರೆ.ಹೆಸ್ಕಾಂ ನಿರ್ಲಕ್ಷ್ಯ ದಿಂದಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.ಮನೆಯ ಮುಂದಿನ‌ ಕಸ ತೆಗೆಯುವಾಗ ಈ ದುರ್ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಿಸಿದ್ದ ತಂದೆ ಪ್ರಭು ಹುಂಬಿಯನ್ನು ಬಿಡಿಸಲು ಹೋಗಿ ಮಗ …

Read More »

ಹಿಂಡಲಗಾ ಜೈಲಿಗೆ ಪೋಲೀಸ್ ಆಯುಕ್ತರ ಧಿಡೀರ್ ಭೇಟಿ….!!

ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಾ,ಸಿಗರೆಟ್, ಮೋಬೈಲ್ ಬಳಕೆ,ಜೈಲಿನಿಂದಲೇ ಧಮಕಿ ಕೊಡುವ ಆಕ್ರಮ ಚಟುವಟಿಕೆಗಳ ಕುರಿತು ಮಾದ್ಯಮಗಳಲ್ಲಿ ವರದಿ ಪ್ರಸಾರವಾದ ಹಿನ್ನಲೆಯಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಜೈಲಿಗೆ ಧಿಡೀರ್ ಭೇಟಿ ನೀಡಿದ್ದಾರೆ. ನಗರ ಪೋಲೀಸ್ ಆಯುಕ್ತರಾದ ಸಿದ್ರಾಮಪ್ಪ ಅವರು ಇಂದು ಹಿಂಡಲಗಾ ಜೈಲಿಗೆ surprise visit ಮಾಡಿದ್ದು ಜೈಲಿನಲ್ಲಿ ನಡೆಯುತ್ತಿದೆ ಎನ್ನಲಾದ ಆಕ್ರಮ ಚಟುವಟಿಕೆಗಳ ಕುರಿತು ಪರಶೀಲನೆ ನಡೆಸುತ್ತಿದ್ದಾರೆ.ಜೈಲಿನಲ್ಲಿ ಪರಶೀಲನೆ ಕಾರ್ಯಾಚರಣೆ ಮುಂದುವರೆದಿದೆ. ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ …

Read More »

ಆರೋಪಿಗಳ ಬಂಧನಕ್ಕೆ ಕುಟುಂಬಸ್ಥರ ಬಿಗಿಪಟ್ಟು…

ಬೆಳಗಾವಿ- ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಶಿವಬಸವ ನಗರ ಬಡಾವಣೆಯಲ್ಲಿ ಸ್ಪಂದನ ಆಸ್ಪತ್ರೆ ಬಳಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮೃತ ಯುವಕನ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ. ನಿನ್ನೆ ರಾತ್ರಿ ಹತ್ಯೆಯಾದ ಬೆಳಗಾವಿಯ ನಿವಾಸಿ ನಾಗರಾಜ್ ಗಾಡಿವಡ್ಡರ್ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ  ಶವಾಗಾರಕ್ಕೆ ತರಲಾಗಿದ್ದು,ಆರೋಪಿಗಳನ್ನು ಬಂಧಿಸುವವರೆಗೂ ಅಂತ್ಯಸಂಸ್ಕಾರ ಮಾಡೋದಿಲ್ಲ ಎಂದು ಯುವಕನ ಸಂಬಂಧಿಗಳು ಪಟ್ಟು ಹಿಡಿದಿದ್ದು ಪೋಲೀಸರು ಮನವರಿಕೆ ಮಾಡುತ್ತಿದ್ದಾರೆ.ಈಗ ಮರಣೋತ್ತರ ಪರೀಕ್ಷೆ ಮುಗಿದಿದ್ದು …

Read More »

ಕಲ್ಲಿನಿಂದ ಜಜ್ಜಿ ,ಬೆಳಗಾವಿಯಲ್ಲಿ ಯುವಕನ ಮರ್ಡರ್….

ಬೆಳಗಾವಿ- ಯುವಕನನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ ಘಟನೆ ಬೆಳಗಾವಿಯ ಶಿವಬಸವ ನಗರದ ಸ್ಪಂದನ ಆಸ್ಪತ್ರೆ ಬಳಿ ನಡೆದಿದೆ. ಹಂತಕರು ಯುವಕನ ಮೇಲೆ ದಾಳಿ ನಡೆಸಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ.ಘಟನಾ ಸ್ಥಳಕ್ಕೆ ಮಾಳಮಾರುತಿ ಠಾಣೆಯ ಪೋಲೀಸರು ದೌಡಾಯಿಸಿದ್ದಾರೆ. ಹತ್ಯೆಯಾದ ಯುವಕನ ಗುರುತು ಇನ್ನೂ ಪತ್ತೆಯಾಗಿಲ್ಲ.ಸ್ಥಳಕ್ಕೆ ದೌಡಾಯಿಸಿದ ಪೋಲೀಸರು ಘಟನೆ ನಡೆದ ಸ್ಥಳವನ್ನು ನಾಕಾಬಂದಿ ಮಾಡಿ ತನಿಖೆ ಶುರು ಮಾಡಿದ್ದಾರೆ.ಹತ್ಯೆಯಾದ  ಯುವಕ   25 ವರ್ಷದ  ನಾಗರಾಜ್ ಗಾಡಿವಡ್ಡರ್ …

Read More »