Breaking News

ಬೈಕ್ ನೀರಿನಲ್ಲಿ ಕೊಚ್ಚಿ ಹೋಯ್ತು…,ಬೈಕ್ ಸವಾರ, ಮರ ಏರಿ ಕುಳಿತ….!!!

ಬೆಳಗಾವಿ- ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಬೆಳಗಾವಿ- ಗೋವಾ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಾಲತ್ರಿ ಹಳ್ಳ ಉಕ್ಕಿ ಹರಿಯುತ್ತಿದೆ. ರಸ್ತೆಯ ಮೇಲೆ ಹರಿಯುತ್ತಿರುವ ಹಳ್ಳ ದಾಟುವ ಸಂಧರ್ಭದಲ್ಲಿ ಬೈಕ್ ನೀರಿನಲ್ಲಿ ಕೊಚ್ಚಿ ಹೋಗಿದ್ದು ಬೈಕ್ ಸವಾರ ಮರ ಏರಿ ಕುಳಿತ ಘಟನೆ ನಿನ್ನೆ ಸಂಜೆ ಹೊತ್ತಿಗೆ ನಡೆದಿದೆ.

ಗೋವಾದಿಂದ ಬೆಳಗಾವಿಯ ಕಡೆ ಹೆಮ್ಮಡಗಾ ರಸ್ತೆಯ ಮೂಲಕ ಬರುತ್ತಿದ್ದ ಯುವಕನೊಬ್ಬ ನಿನ್ನೆ ಸಂಜೆ ಹಾಲತ್ರಿ ಹಳ್ಳ ದಾಟುವಾಗ ಈ ಘಟನೆ ನಡೆದಿದೆ. ಮರ ಏರಿ ಕುಳಿತ ಬೈಕ್ ಸವಾರನಿಗೆ ಸಾರ್ವಜನಿಕರು ರಕ್ಷಿಸಿದ್ದಾರೆ.

ರಸ್ತೆಯ ಮೇಲೆ ಮೂರರಿಂದ,ನಾಲ್ಕು ಅಡಿ ಎತ್ತರದಲ್ಲಿ ಹರಿಯುತ್ತಿರುವ ಹಾಲತ್ರಿ ಹಳ್ಳ ಯುವಕ ಈ ಹಳ್ಳ ದಾಟುವಾಗ ಅಲ್ಲಿದ್ದ ಜನ ಬೇಡ,ಬೇಡ ಎಂದು ಕೂಗಿದರೂ ಆ ಯುವಕ ಯಾವುದನ್ನೂ ಲೆಕ್ಕಿಸದೇ ಹಳ್ಳದಲ್ಲಿ ಬೈಕ್ ಚಲಾಯಿಸಿದ್ದಾನೆ, ನೀರಿನ ರಬಸಕ್ಕೆ ಬೈಕ್ ಕೊಚ್ಚಿ ಹೋಗಿದೆ.ಆದ್ರೆ ಬೈಕ್ ಚಲಾಯಿಸುಸುತ್ತಿದ್ದ ಯುವಕ ಮರದ ಟೊಂಗೆ ಹಿಡಿದು ಬಚಾವ್ ಆಗಿದ್ದಾನೆ. ಮರದ ಟೊಂಗೆಯ ಸಹಾಯದಿಂದ ಮರ ಏರಿ ಕುಳಿತಿದ್ದ

ಇದನ್ನು ಗಮನಿಸಿದ ಸಾರ್ವಜನಿಕರು ಹಗ್ಗದ ಸಹಾಯದಿಂದ ಮರ ಏರಿ ಕುಳಿತ ಬೈಕ್ ಸವಾರರನ್ನು ರಕ್ಷಿಸಿದ್ದಾರೆ. ಘಟನಾ ಸ್ಥಳಕ್ಕೆ ಖಾನಾಪೂರ ಪೋಲೀಸರು ಧಾವಿಸಿ ಹಳ್ಳ ದಾಟಲು ಯತ್ನಿಸಿದ ಯುವಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನದಿ,ಹಳ್ಳ ನಾಲೆಗಳು ಉಕ್ಕಿ ಹರಿಯುತ್ತಿವೆ ಮುಳುಗಡೆ ಆಗಿರುವ ಸೇತುವೆಗಳಲ್ಲಿ ಹುಚ್ಚಾಟ ಬೇಡ ಅಂದ್ರೂ ಜನ ಈ ರೀತಿಯ ಹುಚ್ಚಾಡ ಬಿಡೋದಿಲ್ಲ.

Check Also

ಬೆಳಗಾವಿ ಜಿಲ್ಲೆಯ ರೇಲ್ವೆ ಸಮಸ್ಯೆಗಳ ಪರಿಹಾರಕ್ಕೆ ಹುಬ್ಬಳ್ಳಿಯಲ್ಲಿ ಮೀಟಿಂಗ್

ಬೆಳಗಾವಿ – ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ ಶೆಟ್ಟರ, ಇವರು ಇಂದು …

Leave a Reply

Your email address will not be published. Required fields are marked *