Breaking News

ನಿಗಮ ಮಂಡಳಿಗಳ ಪಟ್ಟಿಗೆ ಸಿಎಂ ಅಸ್ತು‌….ಬೆಳಗಾವಿ ಬುಡಾ,ಕಾಡಾ ಯಾರಿಗೆ..??

ಬೆಳಗಾವಿ- ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಪಾಲಿಗೆ ಇಂದು ಸಿಹಿ ಸುದ್ದಿ ಹೊರಬಿದ್ದಿದೆ.ನಿಗಮ ಮಂಡಳಿಗಳ ಪಟ್ಟಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿ ಹಾಕಿದ್ದಾರೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದೆ.

45 ನಿಗಮ ಮಂಡಳಿಗಳ ಪಟ್ಟಿಗೆ ಸಿಎಂ ಸಹಿ ಹಾಕಿದ್ದಾರೆ ಎಂದು ಗೊತ್ತಾಗಿದ್ದು ನೇಮಕಗೊಂಡಿರುವ ಅಧ್ಯಕ್ಷರುಗಳಿಗೆ ನೇರವಾಗಿ ಆದೇಶ ಪತ್ರ ನಾಳೆ ಸ್ಪೀಡ್ ಪೋಸ್ಟ ಮಾಡಲು ನಿರ್ಧರಿಸಲಾಗಿದೆ.ಪಟ್ಟಿ ರಿಲೀಸ್ ಆಗುವ ಸಾಧ್ಯತೆಗಳು ಇಲ್ಲ ಎಂದು ಗೊತ್ತಾಗಿದೆ.

45 ನಿಗಮ ಮಂಡಳಿಗಳ ಪೈಕಿ ಕಾಡಾ ಮತ್ತು ಬುಡಾ ಎರಡೇ ನಿಗಮಗಳು ಬೆಳಗಾವಿ ಜಿಲ್ಲೆಯ ಪಾಲಾಗಲಿವೆ ಎಂದು ಹೇಳಲಾಗುತ್ತಿದೆ.ಕಾಡಾ ಅಧ್ಯಕ್ಷ ಸ್ಥಾನ ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಯುವರಾಜ ಕದಂ ಅವರಿಗೆ ಸಿಗಬಹುದು ಎನ್ನುವದು ಬೆಳಗಾವಿ ಕಾಂಗ್ರೆಸ್ ನಾಯಕರ ಲೆಕ್ಕಾಚಾರ, ಬುಡಾ ಅಧ್ಯಕ್ಷ ಸ್ಥಾನ ರಾಜು ಸೇಠ ಅಥವಾ ಫಿರೋಜ್ ಸೇಠ ಇಬ್ಬರಲ್ಲಿ ಒಬ್ಬರಿಗೆ ಸಿಗುತ್ತದೆ ಎನ್ನುವ ಚರ್ಚೆ ನಡೆದಿತ್ತು ನಾಳೆ ಆದೇಶ ಪತ್ರ ಯಾರಿಗೆ ಬರುತ್ತೆ ಎನ್ನುವದು ತೀವ್ರ ಕುತೂಹಲ ಕೆರಳಿಸಿದೆ.

ಪಟ್ಟಿಯಲ್ಲಿ ಯಾರ ಹೆಸರು ಇದೆ ಅನ್ನೋದು  ಈವರೆಗೆ ನಿಗೂಢವಾಗಿದೆ.

Check Also

ರಾತ್ರಿ ಮಠದಲ್ಲಿ ಲೇಡಿ……..ಗ್ರಾಮಸ್ಥರಿಂದ ಮುತ್ತಿಗೆ ಮಠದಿಂದ ಸ್ವಾಮೀಜಿ ಉಚ್ಛಾಟನೆ

ಮೂಡಲಗಿ : ತಾಲೂಕಿನ ಶಿವಾಪೂರ(ಹ) ಗ್ರಾಮದ ಅಡವಿ ಸಿದ್ದೇಶ್ವರ ಮಠದ ಅಡವಿಸಿದ್ದರಾಮ ಸ್ವಾಮೀಜಿಯ ಅಕ್ರಮ ಸಂಭಂದದ ಆರೋಪದ ಹಿನ್ನಲೆ ಇಡೀ …

Leave a Reply

Your email address will not be published. Required fields are marked *