Breaking News

ನಿತೀನ್ ಗಡ್ಕರಿಯವರನ್ನು ಭೇಟಿಯಾದ, ಕೋರೆ, ಕವಟಗಿಮಠ

ಜುಲೈ ೨೪: ಕೇಂದ್ರ ಸಾರಿಗೆ ಸಚಿವರಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿರುವ ನಿತೀನ ಗಡ್ಕರಿಯವರನ್ನು ನವದೆಹಲಿಯಲ್ಲಿ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹಾಗೂ ಮಹಾಂತೇಶ್ ಕವಟಗಿಮಠ ಅವರು ಭೇಟಿಯಾಗಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಡಾ.ಕೋರೆಯವರು ನೀತಿನ ಗಡ್ಕರಿಯವರು ೨೮೧೧.೬೯ ಕೋಟಿ ರೂಪಾಯಿಗಳ ಯೋಜನೆಯಾದ ಅಥಣಿ ತಾಲೂಕಿನ ಮುರಗುಂಡಿಯಿAದ ಕಾಗವಾಡ, ಚಿಕ್ಕೋಡಿ, ಗೋಟೂರವರೆಗೆ ೮೭ ಕಿ.ಮೀ. ದೂರದ ಚತುಸ್ಪಥ ರಾಷ್ಡ್ರೀಯ ಹೆದ್ದಾರಿ ಕಾಮಗಾರಿಗೆ ಹಾಗೂ ಶಿರಗುಪ್ಪಿಯಿಂದ ಅಂಕಲಿ ಮೇಲ್ಸೇತುವೆ ಕಾಮಗಾರಿಯನ್ನು ಮಂಜೂರು ಮಾಡಿರುವುದಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಕಮಗಾರಿಯೂ ನಿಮ್ಮ ಅವಧಿಯಲ್ಲಿ ಪೂರ್ಣಗೊಳ್ಳಬೇಕೆಂದು ವಿನಂತಿಸಿದರು.
ಈ ಯೋಜನೆಯು ಈ ಭಾಗದ ಜನತೆಯ ಬಹುದಿನಗಳ ಕನಸಾಗಿತ್ತು. ವ್ಯಾಪಾರ ವಹಿವಾಟಿಗೆ ಈ ರಸ್ತೆಯು ಸಂಪರ್ಕ ಕಲ್ಪಿಸುವುದರೊಂದಿಗೆ ದಿನನಿತ್ಯದ ಸಂಚಾರಕ್ಕೆ ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದರೊಂದಿಗೆ ಡಾ.ಕೋರೆಯವರು ನವೀಕರಿಸಬಹುದಾದ ಎಥೆನಾಲ್ ಬಳಕೆಯಿಂದ ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಸಾಧ್ಯವಾಗಲಿದ್ದು, ಇನ್ನೂ ಹೆಚ್ಚು ಎಥೆನಾಲ್ ಬಳಸುವ ಘಟಕಗಳು ದೇಶದಲ್ಲಿ ಹಾಗೂ ರಾಜ್ಯದಲ್ಲಿ ರೂಪಗೊಳ್ಳಬೇಕೆಂದು ಗಡಕರಿ ಅವರಿಗೆ ನಿವೇದಿಸಿಕೊಂಡರು.
ಈ ಸಂದರ್ಭದಲ್ಲಿ ಕೆಎಲ್‌ಇ ಸಂಸ್ಥೆಯ ನಿರ್ದೇಶಕರಾದ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.

Check Also

ಬಸವರಾಜ ಹೊರಟ್ಟಿ ಅವರ ಪಟ್ಟಿಯಲ್ಲಿ ಎಂಈಎಸ್ ನಿಷೇಧದ ವಿಚಾರವೂ ಸೇರಲಿ- ಕರವೇ

ಬೆಳಗಾವಿ -ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ವಾರದಲ್ಲಿ ಎರಡು ದಿನ ಉತ್ತರ ಕರ್ನಾಟಕ ಪ್ರದೇಶದ ಅಭಿವೃದ್ಧಿಯ ಕುರಿತು ಚರ್ಚೆಗೆ …

Leave a Reply

Your email address will not be published. Required fields are marked *